ಪಾಕ್'ಅನ್ನು ಭಯೋತ್ಪಾದಕ ರಾಷ್ಟ್ರ ಎಂದು ಘೋಷಿಸಿ: ಸಂಸದ ರಾಜೀವ್ ಚಂದ್ರಶೇಖರ್

By Internet deskFirst Published Sep 24, 2016, 4:51 PM IST
Highlights

ನವದೆಹಲಿ(ಸೆ.24):ಪಾಕಿಸ್ತಾನವನ್ನು ಉಗ್ರ ರಾಷ್ಟ್ರ ಎಂದು ಘೋಷಿಸಲು ರಾಜ್ಯ ಸಭೆಯಲ್ಲಿ ಸಂಸದ ರಾಜೀವ್ ಚಂದ್ರಶೇಖರ್ ಖಾಸಗಿ ಸದಸ್ಯರ ವಿಧೇಯಕವನ್ನು ಸಲ್ಲಿಸಿದ್ದಾರೆ. ಈ ಬಗ್ಗೆ  ರಾಜ್ಯ ಸಭಾ ಸಭಾಪತಿ ಹಮೀದ್ ಅನ್ಸಾರಿ ಅವರಿಗೆ ರಾಜೀವ್ ಚಂದ್ರಶೇಖರ್  ಪತ್ರ ಬರೆದಿದ್ದಾರೆ. ಭಯೋತ್ಪಾದನೆಯನ್ನು ಉತ್ಪಾದಿಸುವ ರಾಷ್ಟ್ರಗಳ ಘೋಷಣೆ ಮಸೂದೆ 2016' ಖಾಸಗಿ ಸದಸ್ಯರ ವಿಧೇಯಕವನ್ನು ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ರಾಜ್ಯಸಭೆಯಲ್ಲಿ ಮಂಡಿಸಲು ಇಚ್ಛಿಸುದಾಗಿ ಪತ್ರದಲ್ಲಿ ತಿಳಿಸಿದ್ದಾರೆ. ರಾಜ್ಯಸಭೆಯಲ್ಲಿ ಖಾಸಗಿ ಸದಸ್ಯರ ವಿಧೇಯಕ ಅಂಗೀಕಾರವಾದರೆ ಆ ವಿಧೇಯಕದ ಅನುಮೋದನೆಗಾಗಿ ಅದು ಲೋಕಸಭೆಯಲ್ಲಿ ಚರ್ಚೆಗೆ ಬರಲಿದೆ. ಬಳಿಕ ರಾಷ್ಟ್ರಪತಿಯವರ ಅಂಗೀಕಾರದ ಅವಶ್ಯಕತೆ ಇದೆ.

click me!