ಇಸ್ರೋ ಉಪಗ್ರಹ ನಾಪತ್ತೆ

By Suvarna Web DeskFirst Published Apr 2, 2018, 9:01 AM IST
Highlights

ಭಾರಿ ನಿರೀಕ್ಷೆಯೊಂದಿಗೆ  ಉಡಾವಣೆ ಮಾಡಲಾಗಿದ್ದ ಭಾರತೀಯ  ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮಹತ್ವಾಕಾಂಕ್ಷಿ ಸಂಪರ್ಕ  ಉಪಗ್ರಹ ಜಿಸ್ಯಾಟ್-6 ಎ ಅಂತಿಮ ಹಂತದಲ್ಲಿ ಸಂಪರ್ಕ ಕಳೆದುಕೊಂಡಿದೆ.

ಬೆಂಗಳೂರು (ಏ. 02): ಭಾರಿ ನಿರೀಕ್ಷೆಯೊಂದಿಗೆ  ಉಡಾವಣೆ ಮಾಡಲಾಗಿದ್ದ ಭಾರತೀಯ  ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ)ದ ಮಹತ್ವಾಕಾಂಕ್ಷಿ ಸಂಪರ್ಕ  ಉಪಗ್ರಹ ಜಿಸ್ಯಾಟ್-6 ಎ ಅಂತಿಮ ಹಂತದಲ್ಲಿ ಸಂಪರ್ಕ ಕಳೆದುಕೊಂಡಿದೆ.

ಉಪಗ್ರಹವನ್ನು ಪತ್ತೆಹಚ್ಚಲು ಇಸ್ರೋ ವಿಜ್ಞಾನಿಗಳು  ಹರಸಾಹಸ ಆರಂಭಿಸಿದ್ದಾರೆ. ಮಾ.೨೯ರಂದು ಜಿಎಸ್‌ಎಲ್‌ವಿ ರಾಕೆಟ್‌ನಲ್ಲಿ ಉಡಾವಣೆಯಾಗಿದ್ದ ಜಿಎಸ್ಯಾಟ್ -೬ಎ ಉಪಗ್ರಹ ಯಶಸ್ವಿಯಾಗಿ ಕಕ್ಷೆಯೊಳಗೆ ಬಿಡುಗಡೆಗೊಂಡು, ೨ ಹಂತದ ಕಕ್ಷೆ
ಎತ್ತರಿಸುವ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿತ್ತು. ಏಪ್ರಿಲ್ 1 ರಂದು ಅಂತಿಮ ಹಂತದ ಕಕ್ಷೆ ಎತ್ತರಿಸುವ ಕಾರ್ಯಾಚರಣೆ  ನಡೆಯಬೇಕಿತ್ತು. ಆದರೆ, ಈ ನಡುವಿನ ಅವಧಿಯಲ್ಲಿ ಉಪಗ್ರಹ ನಮ್ಮ ಸಂಪರ್ಕ  ಕಳೆದುಕೊಂಡಿದೆ ಎಂದು ಇಸ್ರೋ ತಿಳಿಸಿದೆ.

ಜಿಸ್ಯಾಟ್‌೬ ಸರಣಿಯ ಮುಂದುವರಿದ  ಭಾಗವಾದ ಜಿಸ್ಯಾಟ್-6ಎ  ಉಪಗ್ರಹವನ್ನು ಹೊತ್ತ ಜಿಎಸ್‌ಎಲ್‌ವಿ ರಾಕೆಟ್ ಮಾ.29 ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ಯಶಸ್ವಿಯಾಗಿ  ಉಡಾವಣೆಗೊಂಡಿತ್ತು. 

click me!