ನೂತನ ದಾಖಲೆ ನಿರ್ಮಿಸಿದ ಇಸ್ರೋ : ಏಕ ಕಾಲಕ್ಕೆ 104 ಉಪಗ್ರಹಗಳು ಕಕ್ಷೆಗೆ

By Suvarna Web DeskFirst Published Feb 14, 2017, 11:40 PM IST
Highlights

ಇಷ್ಟುಸಂಖ್ಯೆಉಪಗ್ರಹಗಳನ್ನುಉಡಾವಣೆಮಾಡಿದ್ದುಇದೇಮೊದಲಾಗಿದ್ದು,ಅಮೆರಿಕ, ರಷ್ಯಾಸೇರಿದಂತೆಯಾವದೇಶವುಸಾಧನೆಮಾಡಿರಲಿಲ್ಲ.

ಶ್ರಿಹರಿಕೋಟ(ಫೆ.15): ಭಾರತೀಯ ಬಾಹ್ಯಕಾಶ ಸಂಸ್ಥೆ ಇಸ್ರೋ ಪಿಎಸ್'ಎಲ್'ವಿ-ಸಿ37 ವಾಹಕದ ಮೂಲಕ ಏಕ ಕಾಲಕ್ಕೆ ಒಂದು ಉಡಾವಣಾ ವಾಹಕದ ಮೂಲಕ 104 ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆಗೊಳಿಸಿದೆ.

ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಕೇಂದ್ರದಿಂದ ಬೆಳಿಗ್ಗೆ 9.28 ಗಂಟೆ ಸಮಯದಲ್ಲಿ  ಗಂಟೆಗೆ 27 ಸಾವಿರ ಕಿ.ಮೀ ವೇಗದಲ್ಲಿ  4 ದೇಶೀಯ ಹಾಗೂ 101 ವಿದೇಶಿ ಉಪಗ್ರಹವನ್ನು ನಭಗೆ ಸೇರಿಸಲಾಗಿದೆ. ಇಷ್ಟು ಸಂಖ್ಯೆ ಉಪಗ್ರಹಗಳನ್ನು ಉಡಾವಣೆ ಮಾಡಿದ್ದು ಇದೇ ಮೊದಲಾಗಿದ್ದು,ಅಮೆರಿಕ, ರಷ್ಯಾ ಸೇರಿದಂತೆ ಯಾವ ದೇಶವು ಈ ಸಾಧನೆ ಮಾಡಿರಲಿಲ್ಲ.

ಕಳೆದ ವರ್ಷ ಇಸ್ರೊ ಒಂದೇ ಬಾರಿಗೆ 22 ಉಪಗ್ರಹಗಳನ್ನು ಉಡಾವಣೆ ಮಾಡಿತ್ತು.2014ರಲ್ಲಿ ರಷ್ಯಾ ಒಟ್ಟಿಗೆ 37 ಉಪಗ್ರಹಗಳನ್ನು ಉಡಾವಣೆ ಮಾಡಲಾಗಿತ್ತು. ನಾಸಾ 29 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿರುವುದು ಈವರೆಗಿನ ದಾಖಲೆಯಾಗಿದೆ.

2014ರಲ್ಲಿ ರಷ್ಯಾ ಏಕಕಾಲದಲ್ಲಿ ಹಾರಿಬಿಟ್ಟಿದ್ದ 37 ಉಪಗ್ರಹಗಳ ಉಡಾವಣೆಯ ದಾಖಲೆಯನ್ನು ಅಳಿಸಿಹಾಕಿದೆ. ರಷ್ಯಾ ತನ್ನ ಉಪಗ್ರಹ ಉಡಾವಣೆಗೆ ಖಂಡಾಂತರ ಕ್ಷಿಪಣಿಯನ್ನು ಮಾರ್ಪಾಟು ಮಾಡಿ ಬಳಸಿಕೊಂಡಿತ್ತು. ಆದರೆ ಭಾರತ ಸ್ವದೇಶಿ ನಿರ್ವಿುತ ಪಿಎಸ್​ಎಲ್​ವಿ ರಾಕೆಟ್ ಮೂಲಕ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಿದೆ.

ಈ ಅದ್ಭುತ ಸಾಧನೆ ಮಾಡಿರುವುದಕ್ಕಾಗಿ ಇಸ್ರೋ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಿದ್ದಾರೆ.

click me!