
ತುಮಕೂರು(ಮಾ.10): ಹುಳಿಯಾರಿನ ವಿದ್ಯಾವಾರಿಧಿ ಶಾಲೆಯ ಮಕ್ಕಳ ಸಾವಿಗೆ ಕಾರಣವಾದ ಆಹಾರ ಹೇಗೆ ಕಲುಷಿತ ಆಯ್ತು? ಈ ಸಂಶಯ ಉಚ್ಛಾಟಿತ ಪ್ರಾಂಶುಪಾಲ ರವಿ ಕಡೆಗೆ ಬೊಟ್ಟು ಮಾಡಿದೆ. ಜೊತೆಗೆ ವಿದ್ಯಾರ್ಥಿ ನಿಲಯಕ್ಕೆ ಅನುಮತಿ ಕೂಡ ಇರಲಿಲ್ಲ. ಅದ್ರೂ ಸಂಸ್ಥಾಪಕ ಕಿರಣ್ ಕುಮಾರ್ ಅಕ್ರಮವಾಗಿ ಶಾಲೆ ನಡೆಸುತ್ತಿದ್ದರು ಅಂತ ಹೇಳಲಾಗುತ್ತಿದೆ. ಈ ಮಧ್ಯೆ ಶಾಲೆಯ ಮಾಲೀಕ ಕಿರಣ್ ಕುಮಾರ್ ಕೂಡ ಪತ್ನಿ ಕವಿತಾ ಜೊತೆ ತಲೆಮರೆಸಿಕೊಂಡಿದ್ದಾರೆ.
ದುರಂತದ ಹಿಂದಿದೆಯಾ ಸೇಡಿನ ಪ್ರತೀಕಾರ?: ಘಟನೆಯ ಬಗ್ಗೆ ಸಚಿವರಿಂದಲೂ ಅನುಮಾನ
ಚಿಕ್ಕನಾಯಕನಹಳ್ಳಿ ವಿದ್ಯಾ ವಾರಿಥಿ ಶಾಲೆಯ ಮಾಲೀಕರು ಮಾಜಿ ಶಾಸಕ ಕಿರಣ್ ಕುಮಾರ್. ಹುಳಿಯಾರು ಠಾಣೆ ಪೊಲೀಸರು ಐಪಿಸಿ ಸಕ್ಷನ್ ೩೦೪ ಎ ಅಡಿ ಆಡಳಿತ ಮಂಡಳಿ ವಿರುದ್ಧ ದೂರು ದಾಖಲಿಸಿಕೊಂಡು ಸ್ಕೂಲ್‌ನ ಸಂಸ್ಥಾಪಕ, ಕಿರಣ್ ಕುಮಾರ್‌ನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ದೆ ಎಷ್ಟೇ ಪ್ರಭಾವಶಾಲಿ ಆದರೂ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳೋ ಭರವಸೆಯನ್ನೂ ನೀಡಿದ್ದಾರೆ.
ಆದರೆ ನಿಜಕ್ಕೂ ಇದು ಫುಡ್ ಪಾಯಿಸನ್ನಾ, ಇಲ್ಲಾ ಯಾರೋ ಉದ್ದೇಶ ಪೂರ್ವಕವಾಗೇ ಆಹಾರದಲ್ಲಿ ವಿಷ ಬೆರೆಸಿದ್ದಾರಾ ಅನ್ನೋ ಶಂಕೆ ಇದೆ. ಸಚಿವ ಜಯಚಂದ್ರ ಅವರು ವ್ಯಕ್ತಪಡಿಸಿದ್ದೂ ಕೂಡ ಇದೇ ಅನುಮಾನವನ್ನ..
ಉಚ್ಛಾಟಿತ ಪ್ರಾಂಶುಪಾಲ ಎಸಗಿದನಾ ನೀಚಕೃತ್ಯ?
ಈ ಪ್ರಕರಣದ ಹಿಂದೆ ಉದ್ದೇಶ ಪೂರ್ವಕವಾಗೇ ವಿಷ ಬೆರೆಸಿದ್ದರಾ ಅನ್ನೋ ಶಂಕೆ ಬಲವಾಗಿದೆ. ಉಚ್ಛಾಟಿತ ಪ್ರಾಂಶುಪಾಲ ರವಿ ಮೇಲೆ ಅನುಮಾನವಿದೆ. ರವಿ ವಿದ್ಯಾವಾರಿಧಿ ವಿದ್ಯಾಸಂಸ್ಥೆಯಲ್ಲಿ ಪ್ರಾಂಶುಪಾಲರಾಗಿದ್ದ ರವಿಗೆ ಸಂಸ್ಥೆಯ ಕಾರ್ಯದರ್ಶಿ ಕವಿತಾ ಜೊತೆ ಅನೈತಿಕ ಸಂಬಂಧ ಇತ್ತಂತೆ. ಈ ವಿಚಾರ ಕವಿತಾ ಪತಿ ಹಾಗೂ ಸಂಸ್ಥೆಯ ಮುಖ್ಯಸ್ಥ ಕಿರಣ್ ಕುಮಾರ್'ಗೆ ತಿಳಿದಿತ್ತು. ರವಿಯನ್ನು ವಜಾಗೊಳಿಸಲಾಗಿತ್ತು. ಆಗ ರವಿ ನಿಮ್ಮನ್ನು ನಾನು ಸುಮ್ಮನೆ ಬಿಡಲ್ಲ. ನನ್ನ ಮಾನ ತೆಗೆದಂತೆ ನಿಮ್ಮ ಮಾನವನ್ನೂ ತೆಗೆಯುತ್ತೇನೆ ಅಂತ ಬಹಿರಂಗವಾಗಿ ಸವಾಲು ಹಾಕಿದ್ದ ಎನ್ನಲಾಗಿದೆ. ಅದೇ ಪ್ರತೀಕಾರವಾ ಇದು ಎನ್ನುವುದು ಶಂಕೆ.
ವಜಾಗೊಂಡ ಪ್ರಾಂಶುಪಾಲ ರವಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದರ ಮಧ್ಯೆ ಪೊಲೀಸ್ ವಿಚಾರಣೆ ಬಳಿಕ ಸ್ಕೂಲ್ ಸಂಸ್ಥಾಪಕ ಕಮ್ ಬಿಜೆಪಿಯು ಮಾಜಿ ಶಾಸಕ ಕಿರಣ್ಕುಮಾರ್ ಪತ್ನಿ ಕವಿತಾ ಜೊತೆ ನಾಪತ್ತೆಯಾಗಿದ್ದಾರೆ.. ಇನ್ನೂ ಹಾಸ್ಟೆಲ್ನಲ್ಲಿ 17 ಸಿಸಿಟಿವಿಗಳಿವೆ. ಆದರೆ, ಒಂದೂ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವುದು ಹಲವು ಅನುಮಾನ ಹುಟ್ಟುಹಾಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.