ತುಂಗಭದ್ರ ನದಿಯಲ್ಲೇ ರಾತ್ರೋರಾತ್ರಿ 4 ಅಕ್ರಮ ಬೋರ್'ವೆಲ್ ಪ್ರತ್ಯಕ್ಷ!

By Suvarna Web DeskFirst Published Mar 9, 2017, 9:09 PM IST
Highlights

ಬರಗಾಲದಿಂದ ಹನಿ ನೀರಿಗೂ ಪರದಾಡುವ ಸ್ಥಿತಿ. ನದಿ, ಕೆರೆಗಳು ಬತ್ತಿ ಹೋಗಿವೆ. ಬೊರ್​​​​ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ ಹಾವೇರಿಯಲ್ಲಿ ರೈತರು ನೀರಿಲ್ಲದೆ ಬತ್ತಿ ಹೋಗಿರುವ ತುಂಗಭದ್ರ ನದಿಯಲ್ಲೇ ಅಕ್ರಮವಾಗಿ ಬೋರವೆಲ್ ಕೊರೆದಿದ್ದಾರೆ. ಈ ಬೋರ್ವೆಲ್ ಮೂಲಕ ಹೊಲಕ್ಕೆ ನೀರು ಹಾಯಿಸುತ್ತಿದ್ದಾರೆ.

ಹಾವೇರಿ(ಮಾ.10): ಬರಗಾಲದಿಂದ ಹನಿ ನೀರಿಗೂ ಪರದಾಡುವ ಸ್ಥಿತಿ. ನದಿ, ಕೆರೆಗಳು ಬತ್ತಿ ಹೋಗಿವೆ. ಬೊರ್​​​​ವೆಲ್ ಕೊರೆದರೂ ನೀರು ಸಿಗುತ್ತಿಲ್ಲ. ಆದರೆ ಹಾವೇರಿಯಲ್ಲಿ ರೈತರು ನೀರಿಲ್ಲದೆ ಬತ್ತಿ ಹೋಗಿರುವ ತುಂಗಭದ್ರ ನದಿಯಲ್ಲೇ ಅಕ್ರಮವಾಗಿ ಬೋರವೆಲ್ ಕೊರೆದಿದ್ದಾರೆ. ಈ ಬೋರ್ವೆಲ್ ಮೂಲಕ ಹೊಲಕ್ಕೆ ನೀರು ಹಾಯಿಸುತ್ತಿದ್ದಾರೆ.

ಹಾವೇರಿ ಜಿಲ್ಲೆಯ ರೈತರಿಗೆ ತುಂಗಭದ್ರ ನದಿ ಜೀವನಾಡಿ. ಆದರೆ, ಈ ವರ್ಷ ಭೀಕರ ಬರಗಾಲದಿಂದಾಗಿ ತುಂಗಭದ್ರೆಯ ಒಡಲು ನೀರಿಲ್ಲದೆ ಬರಿದಾಗಿದೆ. ನೀರಿಗಾಗಿ ಪರದಾಡುತ್ತಿರುವ ರಾಣೇಬೆನ್ನೂರ ತಾಲೂಕಿನ ಚೌಡಯ್ಯದಾನಪುರ ಗ್ರಾಮದ ರೈತರು ನೀರಿಲ್ಲದೆ ಬರಿದಾಗಿರುವ ತುಂಗಭದ್ರ ನದಿಯ ಒಡಲಾಳವನ್ನೇ ಬಗಿದು ನೀರು ಪಡೆಯುತ್ತಿದ್ದಾರೆ. ರಾತ್ರೋ ರಾತ್ರಿ ತುಂಗಭದ್ರ ನದಿಯಲ್ಲಿ ಯಾರಿಗೂ ಗೊತ್ತಾಗದಂತೆ ಒಂದಿಷ್ಟು ರೈತರು ಸೇರಿಕೊಂಡು 4 ಬೋರವೆಲ್ ಕೊರೆಸಿದ್ದಾರೆ.

ಹಾವೇರಿ ಜಿಲ್ಲೆಯಲ್ಲಿ 500 ಅಡಿ ಆಳ ಬೋರ್​​​ವೆಲ್ ಕೊರೆದರೂ, ನೀರು ಸಿಗುತ್ತಿಲ್ಲ. ಆದರೆ ತುಂಗಭದ್ರ ನದೀಲಿ ಕೇವಲ 50 ರಿಂದ 60 ಅಡಿ ಆಳಕ್ಕೆ ನೀರು ಸಿಕ್ಕಿದೆ. ಪಂಪಸೆಟ್​​ಗಳ ಮೂಲಕ ರೈತರು ತಮ್ಮ ಹೊಲಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದಾರೆ. ಆದರೆ, ನದಿಯಲ್ಲಿ ಬೋರ್​​​​'ವೆಲ್ ಕೊರೆಯಲು ಅವಕಾಶಗಳಿಲ್ಲ.

ಈ ಸಂಬಂಧ ಸುವರ್ಣ ನ್ಯೂಸ್ ತಂಡ ಹಾವೇರಿ ಉಪ ವಿಭಾಗಾಧಿಕಾರಿಗಳಿಗೆ ಈ ಪ್ರಕರಣದ ಬಗ್ಗೆ ಮಾಹಿತಿ ಕೇಳಿತು. ಸ್ಥಳಕ್ಕೆ ಭೇಟಿ ನೀಡಿದ ಉಪ ವಿಭಾಗಾಧಿಕಾರಿ ಸೋಮಣ್ಣನವರ್, PDO ಹಾಗು ಗ್ರಾಮ ಲೆಕ್ಕಾಧಿಕಾರಿಗೆ ತರಾಟೆ ತೆಗೆದುಕೊಂಡಿದ್ದಾರೆ. ಬಳಿಕ ಇಬ್ಬರನ್ನ ವಶಕ್ಕೆ ಪಡೆದು ಬೋರ್'ವೆಲ್ ಗಳನ್ನು ತಮ್ಮ ವಶಕ್ಕೆ ಪಡೆದಿದ್ದಾರೆ. ಆದ್ರೆ ಪಿಡಿಒ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದ ಉಪ ವಿಭಾಗಾಧಿಕಾರಿ.

ಒಟ್ಟಿಲ್ಲಿ ನದಿಯಲ್ಲಿ ಬೋರ್​ವೆಲ್​ ಕೊರೆದಿದ್ದರೂ ಅಧಿಕಾರಿಗಳು ಸುಮ್ಮನಿದ್ದಾರೆ. ಆದರೆ ಮುಂದೆ ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎನ್ನುವುದೇ ಕುತೂಹಲ..

click me!