
ಇಸ್ಲಾಮಾಬಾದ್[ಅ.03]: ಪಾಕಿಸ್ತಾನದ ಪ್ರಧಾನಿ 65 ನೇ ವಯಸ್ಸಿನಲ್ಲಿ ತಂದೆಯಾಗುತ್ತಿದ್ದಾರೆಯೇ, ಮಾಜಿ ಕ್ರಿಕೆಟಿಗನ 3ನೇ ಪತ್ನಿ ಬುಶ್ರಾ ಮನೇಕಾ ಗರ್ಭಿಣಿಯಾಗಿದ್ದು ಕೆಲ ತಿಂಗಳಿನಲ್ಲಿ ಮೊದಲ ಮಗುವಿಗೆ ಜನ್ಮ ನೀಡಲಿದ್ದಾರೆ ಎಂಬ ಸುದ್ದಿ ಪಾಕ್ ದೇಶದಾದ್ಯಂತ ಹಬ್ಬಿದೆ.
ಸ್ಥಳೀಯ ಪತ್ರಿಕೆಯೊಂದು ಪ್ರಕಟಿಸಿರುವ ವರದಿಯನ್ನು ಪಾಕ್ ಸರ್ಕಾರ ಅಲ್ಲಗಳೆದಿದ್ದು ಇದು ಸಂಪೂರ್ಣ ಸುಳ್ಳು ಸುದ್ದಿ ಎಂದು ತಿಳಿಸಿದೆ. ಈ ಬಗ್ಗೆ ಸ್ಪಷ್ಟಿಕರಣ ನೀಡಿರುವ ಪ್ರಧಾನಿಯವರ ವಿಶೇಷ ಸಹಾಯಕ ಇಫ್ತಿಕರ್ ದುರ್ರಾನಿ, ಪ್ರಧಾನಿ ಪತ್ನಿ ಗರ್ಭಿಣಿ ಎಂದು ಸುಳ್ಳು ಸುದ್ದಿ ಪ್ರಕಟಿಸಿರುವ ಪತ್ರಿಕೆಯ ವಿರುದ್ಧ ಪ್ರಕರಣ ದಾಖಲಿಸಲಿದ್ದು ಕ್ಷಮಾಪಣೆಗೆ ಆಗ್ರಹಿಸುವುದಾಗಿ ತಿಳಿಸಿದ್ದಾರೆ.
ಪಾಕ್'ನ ವಾರ್ತಾ ಮತ್ತು ಮಾಹಿತಿ ಖಾತೆ ಇಲಾಖೆ ಕೂಡ ದುರುದ್ದೇಶದಿಂದ ಕೂಡಿರುವ ಸುಳ್ಳು ಸುದ್ದಿಯು ಮಾಧ್ಯಮದ ನೀತಿ ಸಂಹಿತಿಯ ಉಲ್ಲಂಘನೆ ಎಂದು ಟೀಕಿಸಿದೆ. ಇಮ್ರಾನ್ ಖಾನ್ ಅವರು 2ನೇ ಪತ್ನಿ ರೆಹೀಮ್ ಖಾನ್ ಅವರಿಗೆ 2014ರಲ್ಲಿ ವಿಚ್ಚೇದನ ನೀಡಿ 2018ರ ಮಾರ್ಚ್ ನಲ್ಲಿ ಅಧ್ಯಾತ್ಮ ನಾಯಕಿ ಬುಶ್ರಾ ಮನೇಕಾ ಅವರನ್ನು ವರಿಸಿದ್ದರು ಆಗಸ್ಟ್ ನಲ್ಲಿ ಇವರ ಪಕ್ಷ ಪಿಟಿಐ ಅಭೂತಪೂರ್ವ ವಿಜಯ ಸಾಧಿಸಿ ಪ್ರಧಾನಿ ಹುದ್ದೆ ಅಲಂಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.