
ವಿವಾದಗಳಲ್ಲೇ ಸದಾ ಬ್ಯುಸಿಯಾಗಿರುವ ಹಾಗೂ ರಾಷ್ಟ್ರ ರಾಜಕಾರಣಕ್ಕೆ ಅಚ್ಚರಿಯ ತಿರುವು ತಂದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅತ್ಯಾಚಾರದ ಆರೋಪಿಯಾಗಿದ್ದರೆ? ಇಂತಹದೊಂದು ಸುದ್ದಿ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಕೇಜ್ರೀವಾಲ್ ಎಂಬ ಹೆಸರಿನ ವ್ಯಕ್ತಿ 1987 ರಲ್ಲಿ ಐಐಟಿ ಖಾರಗ್'ಪುರ್'ದಲ್ಲಿ ವಿದ್ಯಾರ್ಥಿಯಾಗಿದ್ದಾಗ ಸ್ಥಳೀಯ ಬಾಲಕಿಯೋರ್ವಳ ಮೇಲೆ ಅತ್ಯಾಚಾರವೆಸಗಿದ್ದರು ಎಂಬ ಪತ್ರಿಕಾ ವರದಿಯ ಕ್ಲಿಪಿಂಗ್ ಚರ್ಚೆಗೆ ಗ್ರಾಸವಾಗಿದೆ. ಈ ಸುದ್ದಿಯನ್ನು 'ಜಾಗೃಕ್ ಭಾರ'ತ್ ಎಂಬ ವೆಬ್'ಸೈಟ್ ವರದಿ ಮಾಡಿದೆ.
ಪ್ರತಿಷ್ಟಿತ ಆಂಗ್ಲ ಪತ್ರಿಕೆ 'ದಿ ಟೆಲಿಗ್ರಾಪ್' ನ ಕ್ಲಿಪಿಂಗ್'ನಲ್ಲಿರುವ ವರದಿಯಂತೆ (1987, ಜೂನ್ 8, ಸೋಮವಾರ) ಐಐಟಿ ಖಾರಗ್'ಪುರ್'ನಲ್ಲಿ ಅರವಿಂದ್ ಕೇಜ್ರಿವಾಲ್ ಎಂಬ ಹೆಸರಿನ ವಿದ್ಯಾರ್ಥಿ( ಕಾಕತಾಳೀಯವೆಂಬಂತೆ ಈಗಿನ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅದೇ ಸಮಯದಲ್ಲಿ ಐಐಟಿ'ಯಲ್ಲಿ ವ್ಯಾಸಂಗ ಮಾಡಿದ್ದು, 1968ರಲ್ಲಿ ಜನಿಸಿದವರು). 1987ರಲ್ಲಿ ಐಐಟಿ ವ್ಯಾಸಂಗ ಮಾಡುತ್ತಿದ್ದ ಅರವಿಂದ್ ಕೇಜ್ರಿವಾಲ್ ಎಂಬ ವಿದ್ಯಾರ್ಥಿ ತನ್ನ ಸ್ನೇಹಿತರ ಜೊತೆ ಶುಕ್ರವಾರ ರಾತ್ರಿ ಅಂದರೆ 1987, ಜೂನ್ 5 ರಂದು ಪಿಕ್'ನಿಕ್'ಗೆ ಹೋಗಿದ್ದಾರೆ.ಸ್ನೇಹಿತರೆಲ್ಲರೂ ಶನಿವಾರ ರಾತ್ರಿಯೇ ವಾಪಸ್ ಆದರೂ ವಿದ್ಯಾರ್ಥಿ ಅರವಿಂದ್ ಕೇಜ್ರೀವಾಲ್ ವಾಪಸ್ ಆಗಿದ್ದು ಭಾನುವಾರ ರಾತ್ರಿ.
ಇದೇ ಸಂದರ್ಭದಲ್ಲಿ ಗೋಪಾಲ'ನಗರ್ ಪೊಲೀಸ್ ಠಾಣೆಯಲ್ಲಿ ಸ್ಥಳೀಯ ನಿವಾಸಿಯಾದ 19 ವರ್ಷದ ಹುಡುಗಿಯೊಬ್ಬಳು ಅರವಿಂದ ಕೇಜ್ರಿವಾಲ್ ಎಂಬ ವ್ಯಕ್ತಿ ನನ್ನ ಮೇಲೆ ಅತ್ಯಾಚಾರ ಮಾಡಿರುವುದಾಗಿ ದೂರು ದಾಖಲಿಸುತ್ತಾಳೆ ಜೊತೆಗೆ ಆರೋಪಿಯ ಗುರುತಿನ ಚೀಟಿಯನ್ನು ಪೊಲೀಸರಿಗೆ ನೀಡುತ್ತಾಳೆ. ದೂರಿನ ಆಧಾರದ ಮೇಲೆ ಪೊಲೀಸರು ಐಐಟಿ ಕ್ಯಾಂಪಸಿಗೆ ಆಗಮಿಸುತ್ತಾರೆ. ಪೊಲೀಸರು ಅರವಿಂದ್ ಕೇಜ್ರಿವಾಲ್ ಅವರನ್ನು ಬಂಧಿಸಲು ಮುಂದಾದಾಗ ಹಾಸ್ಟೆಲ್ ವಾರ್ಡ್'ನ್ ಅವರಿಗೂ ಗಾಬರಿಯಾಗುತ್ತದೆ. ಅಲ್ಲದೆ ಮಾಹಿತಿಗಾಗಿ ಪೊಲೀಸರೊಂದಿಗೆ ಸಹಕರಿಸುವುದಾಗಿ ಸಹ ತಿಳಿಸುತ್ತಾರೆ.
ಸೂಚನೆ: ಜಾಗೃಕ್ ಭಾರತ್ ವೆಬ್'ಸೈಟ್ ಸುದ್ದಿಯ ಕ್ಲಿಪಿಂಗ್ ಯಂತೆ ಸಂಕ್ಷಿಪ್ತವಾಗಿ ವರದಿ ಮಾಡಲಾಗಿದೆ. ಸುದ್ದಿ ಅಧಿಕೃತವಾಗಿ ಸತ್ಯವಾಗಿರದೆ ಅಪೂರ್ಣವಾಗಿರುವ ಕಾರಣ ನಮ್ಮ ವೆಬ್'ಸೈಟ್'ಗೂ ಸಂಬಂಧವಿರುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ಜಾಗೃಕ್ ಭಾರತ್ ವೆಬ್'ಸೈಟ್ ಅನ್ನು ಸಂಪರ್ಕಿಸುವುದು.
ಮೂಲ ಸುದ್ದಿಯ ಕೊಂಡಿಯ ಲಿಂಕ್: http://jagrukbharat.com/10462/arvind-kejriwal-rape-accused-shocking-1987-newspaper-clipping-sheds-light
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.