
ಜೂರಿಚ್(ಡಿ.10): ಇದುವರೆಗೂ ಚೈನಾ ತಯಾರಿಕಾ ಸಂಸ್ಥೆಯ ಮೊಬೈಲ್'ಗಳು ಸ್ಫೋಟಗೊಂಡಿದ್ದನ್ನು ಕೇಳಿದ್ದೆವು. ಆದರೆ ಇದೇ ಮೊದಲ ಬಾರಿಗೆ ಐಫೋನ್ ಕೂಡಾ ಸ್ಫೋಟಗೊಂಡಿದ್ದು ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ.
ಐಫೋನ್ ಬ್ಯಾಟರಿ ಬಿಸಿ ಹೆಚ್ಚಾಗಿ ಬ್ಲಾಸ್ಟ್ ಆಗಿದ್ದು, ವ್ಯಕ್ತಿಯೋರ್ವ ತೀವ್ರವಾಗಿ ಗಾಯಗೊಂಡ ಘಟನೆ ಜೂರಿಚ್'ನ ಆ್ಯಪಲ್ ಐಫೋನ್ ಸ್ಟೋರ್'ನಲ್ಲಿ ನಡೆದಿದೆ ಎಂದು ವರದಿಯಾಗಿದೆ. ಜೂರಿಚ್'ನ ಬೆನ್ಆಪ್'ಸ್ಟ್ರೆಸ್'ನ ಆ್ಯಪಲ್ ಸ್ಟೋರ್'ನಲ್ಲಿ ಈ ಅವಘಡ ಸಂಭವಿಸಿದ್ದು, ರಿಪೇರಿ ಮಾಡುವ ವ್ಯಕ್ತಿ ಗಾಯಗೊಂಡಿದ್ದಾನೆ.
ಜೋರಿಚ್ ನಗರ ಪೊಲೀಸರ ಪ್ರಕಾರ, ಐಫೋನ್ ರಿಪೇರಿ ಮಾಡುವಾಗ ಇದ್ದಕ್ಕಿಂದಂತೆ ಸ್ಫೋಟಗೊಂಡಿದೆ. ಈ ವೇಳೆ ಸ್ಟೋರ್'ನಲ್ಲಿದ್ದ 7 ಮಂದಿಗೂ ಚಿಕ್ಕ ಗಾಯಗಳಾಗಿವೆ ಎಂದು ವರದಿಯಾಗಿದೆ. ಈ ವೇಳೆ ಸ್ಟೋರ್'ನಲ್ಲಿ 50ಕ್ಕೂ ಹೆಚ್ಚು ಮಂದಿ ಗ್ರಾಹಕರು ಹಾಗೂ ಸಿಬ್ಬಂದಿಗಳು ಇದ್ದರು ಎನ್ನಲಾಗಿದೆ. ಈ ಘಟನೆ ಕುರಿತಂತೆ ಜೂರಿಚ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಈ ಅವಘಡದ ಕುರಿತಂತೆ ಆ್ಯಪಲ್ ಸಂಸ್ಥೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.