ಕಾಶ್ಮೀರ ವಿಷಯದಲ್ಲಿ ಇಡೀ ವಿಶ್ವ ಭಾರತವನ್ನೇ ನಂಬುತ್ತೆ, ನಮ್ಮನ್ನಲ್ಲ: ಪಾಕ್‌ ಸಚಿವ

By Web Desk  |  First Published Sep 13, 2019, 10:52 AM IST

ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯ ಭಾರತವನ್ನೇ ನಂಬುತ್ತೆ, ನಮ್ಮನ್ನಲ್ಲ: ಪಾಕ್‌| ಪಾಕ್‌ ಒಳಾಡಳಿತ ಸಚಿವ ಇಜಾಜ್‌ ಅಹಮದ್‌ ಶಾ


ಇಸ್ಲಾಮಾಬಾದ್‌[ಸೆ.13]: ಜಮ್ಮು- ಕಾಶ್ಮೀರಕ್ಕೆ ವಿಶೇಷಾಧಿಕಾರ ರದ್ದು ಮಾಡಿದ್ದಕ್ಕೆ ಕೆಂಡ ಕಾರುತ್ತಿರುವ ಪಾಕಿಸ್ತಾನಕ್ಕೆ ಮತ್ತೊಂದು ಮುಖಭಂಗ ಉಂಟಾಗಿದೆ. ಆಡಳಿತಾರೂಢ ಸರ್ಕಾರದ ಸಚಿವರೊಬ್ಬರು ‘ಜಮ್ಮು- ಕಾಶ್ಮೀರ ವಿಷಯದಲ್ಲಿ ವಿಶ್ವ ಸಮುದಾಯದ ನಂಬಿಕೆ ಗಳಿಸಿಕೊಳ್ಳುವಲ್ಲಿ ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರ ಎಡವಿದೆ ಎಂದು ಹೇಳಿಕೆ ಕೊಟ್ಟಿದ್ದಾರೆ.

ಕಾಶ್ಮೀರ ಹಮಾರಾ ಹೈ: ಜಮೈತ್ ಉಲೆಮಾ-ಎ-ಹಿಂದ್ ಘರ್ಜನೆ!

Tap to resize

Latest Videos

ಟಾಕ್‌ ಶೋದಲ್ಲಿ ಮಾತನಾಡಿರುವ ಪಾಕಿಸ್ತಾನ ಒಳಾಡಳಿತ ಸಚಿವ ಇಜಾಜ್‌ ಅಹಮದ್‌ ಶಾ, ದೇಶವನ್ನು ಆಳುತ್ತಿರುವ ನಾಯಕರು ರಾಷ್ಟ್ರದ ಮಾನವನ್ನು ಕಳೆಯುತ್ತಿದ್ದಾರೆ. ನಮ್ಮದು ಜವಾಬ್ದಾರಿಯುತ ರಾಷ್ಟ್ರವಲ್ಲ ಎಂಬ ರೀತಿಯಲ್ಲಿ ವಿಶ್ವ ಸಮುದಾಯ ಪರಿಭಾವಿಸಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ವಿವಾದ: ನಾವು ತಲೆ ಹಾಕಲ್ಲ ಎಂದ ವಿಶ್ವಸಂಸ್ಥೆ ಮುಖ್ಯಸ್ಥ!

ಅಲ್ಲದೇ ಜಮ್ಮು- ಕಾಶ್ಮೀರದಲ್ಲಿ ಭಾರತ ಕರ್ಫ್ಯೂ ಹೇರಿದ್ದರಿಂದ ಜನರಿಗೆ ಸಕಾಲದಲ್ಲಿ ಔಷಧ, ಜೀವನಾವಶ್ಯಕ ವಸ್ತುಗಳು ಸಿಗುತ್ತಿಲ್ಲ ಎಂದು ಪಾಕಿಸ್ತಾನ ವಾದಿಸಿದರೂ, ವಿಶ್ವಸಮುದಾಯ ಮಾತ್ರ ಭಾರತದ ನಿರ್ಧಾರವನ್ನೇ ನಂಬುತ್ತದೆ. ನಮ್ಮನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇದು ನಮ್ಮ ನೈತಿಕ ಸೋಲಾಗಿದೆ. ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ ಎಂದು ಮಾಧ್ಯಮಕ್ಕೆ ಹೇಳಿಕೆ ನೀಡಿದ್ದಾರೆ.

click me!