ಪತಿ ಜೊತೆ ಮಾತನಾಡುತ್ತಾ ಸರಸದ ಹಾವಿನ ಮೇಲೆ ಕುಳಿತು ಬಲಿ!

Published : Sep 13, 2019, 09:27 AM IST
ಪತಿ ಜೊತೆ ಮಾತನಾಡುತ್ತಾ ಸರಸದ ಹಾವಿನ ಮೇಲೆ ಕುಳಿತು ಬಲಿ!

ಸಾರಾಂಶ

ಪತಿ ಜೊತೆ ಮೊಬೈಲಲ್ಲಿ ಮಾತಾಡುತ್ತಾ ಗೊತ್ತಿಲ್ಲದೇ ಹಾವಿನ ಮೇಲೆ ಕುಳಿತಳು, ಹಾವು ಕಚ್ಚಿ ಸತ್ತಳು| ಸರಸವಾಡುತ್ತಿದ್ದ ಹಾವುಗಳ ಕೋಪಕ್ಕೆ ಮಹಿಳೆ ಬಳಿ

ಗೋರಖ್‌ಪುರ[ಸೆ.13]: ಸರಸವಾಡುತ್ತಿದ್ದ ಹಾವುಗಳ ಮೇಲೆ ಗೊತ್ತಿಲ್ಲದೇ ಕುಳಿತ ಮಹಿಳೆಯೊಬ್ಬರು ಹಾವು ಕಚ್ಚಿ ಸಾವನ್ನಪ್ಪಿದ ದಾರುಣ ಘಟನೆ ಉತ್ತರಪ್ರದೇಶದ ಗೋರಖ್‌ಪುರ ಜಿಲ್ಲೆಯಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಗೀತಾ ಎಂದು ಗುರುತಿಸಲಾಗಿದೆ.

ಗೀತಾ, ಥಾಯ್ಲೆಂಡ್‌ನಲ್ಲಿರುವ ತನ್ನ ಪತಿ ಜೈಸಿಂಗ್‌ ಯಾದವ್‌ ಜೊತೆ ಮಾತನಾಡುತ್ತಲೇ, ಮನೆಯಲ್ಲಿ ಹಾಸಿಗೆ ಮೇಲೆ ಕುಳಿತುಕೊಂಡಿದ್ದಾಳೆ. ಆದರೆ ಅದೇ ವೇಳೆ ಎರಡು ಹಾವುಗಳ ಅದೇ ಹಾಸಿಗೆ ಮೇಲೆ ಸರಸವಾಡುತ್ತಿದ್ದುದ್ದು ಆಕೆಯ ಗಮನಕ್ಕೆ ಬಂದಿಲ್ಲ. ಹಾಸಿಗೆ ಮೇಲೆ ಹಾಕಿದ್ದ ಬೆಡ್‌ಶೀಟ್‌ ಬಣ್ಣಬಣ್ಣ ಹೊಂದಿದ್ದ ಕಾರಣ, ಹಾವುಗಳ ಇರುವಿಕೆ ಆಕೆಗೆ ಗೊತ್ತಾಗಿಲ್ಲ. ಹೀಗಾಗಿ ಏನಾಗುತ್ತಿದೆ ಎಂದು ಗೊತ್ತಾಗುವುದರ ಒಳಗೆ ಹಾವು ಗೀತಾಗೆ ಕಚ್ಚಿದೆ.

ಕೆಲ ಕ್ಷಣಗಳಲ್ಲಿ ಆಕೆ ಅಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ. ಬಳಿಕ ಗೀತಾಳನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಆಕೆ ಸಾವನ್ನಪ್ಪಿದ್ದಾಳೆ.

ಇಷ್ಟೆಲ್ಲಾ ಆದರೂ ಅಲ್ಲೇ ಸರಸವಾಡುತ್ತಿದ್ದ ಹಾವುಗಳನ್ನು ಕಂಡು ಕೋಪಗೊಂಡ ಸ್ಥಳಿಯರು ಹಾವುಗಳನ್ನು ಬಡಿದು ಕೊಂದು ಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೇದಿಕೆಯಲ್ಲಿ ವಧು ಸದ್ದಿಲ್ಲದೆ ಮಾಡಿದ ಅದೊಂದು ಕೆಲಸ ಇಂಟರ್‌ನೆಟ್‌ನಲ್ಲಿ ಫುಲ್ ವೈರಲ್ ಆಯ್ತು..
ಹೆದ್ದಾರಿಯಲ್ಲಿ ಇಳಿದು ಕಾರಿಗೆ ಡಿಕ್ಕಿ ಹೊಡೆದ ವಿಮಾನ: ವೀಡಿಯೋ