ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ

Kannadaprabha News   | Asianet News
Published : Jan 01, 2021, 02:32 PM IST
ಇನ್ನು ಮೂರು ತಿಂಗಳು ಸಣ್ಣ ಉಳಿತಾಯಗಳ ಬಡ್ಡಿ ದರ ಇಳಿಕೆಯಿಲ್ಲ

ಸಾರಾಂಶ

ಕೇಂದ್ರ ಸರ್ಕಾರ ಪಿಪಿಎಫ್‌, ಎನ್‌ಎಸ್‌ಸಿ ಮುಂತಾದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 2021ರ ಜನವರಿ - ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಇಳಿಕೆ ಮಾಡದಿರಲು ನಿರ್ಧರಿಸಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

ನವದೆಹಲಿ(ಜ.01): ಬ್ಯಾಂಕ್‌ನಲ್ಲಿನ ನಿಶ್ಚಿತ ಠೇವಣಿಗಳ ಮೇಲಿನ ಬಡ್ಡಿ ದರಗಳು ಗಣನೀಯವಾಗಿ ಇಳಿಯುತ್ತಿದ್ದರೂ ಕೇಂದ್ರ ಸರ್ಕಾರ ಪಿಪಿಎಫ್‌, ಎನ್‌ಎಸ್‌ಸಿ ಮುಂತಾದ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು 2021ರ ಜನವರಿ - ಮಾರ್ಚ್ ನಡುವಿನ ತ್ರೈಮಾಸಿಕದಲ್ಲಿ ಇಳಿಕೆ ಮಾಡದಿರಲು ನಿರ್ಧರಿಸಿದೆ.

ಈ ಹಿಂದಿನ ತ್ರೈಮಾಸಿಕದಂತೆ ಪಿಪಿಎಫ್‌ಗೆ ಶೇ.7.1, ಎನ್‌ಎಸ್‌ಸಿಗೆ ಶೇ.6.8, ಹಿರಿಯ ನಾಗರಿಕರ 5 ವರ್ಷದ ಉಳಿತಾಯ ಯೋಜನೆಗೆ ಶೇ.7.4, ಉಳಿತಾಯ ಠೇವಣಿಗೆ ಶೇ.4, ಸುಕನ್ಯಾ ಸಮೃದ್ಧಿ ಯೋಜನೆಗೆ ಶೇ.7.6, ಕಿಸಾನ್‌ ವಿಕಾಸ ಪತ್ರಕ್ಕೆ ಶೇ.6.9, 1-5 ವರ್ಷಗಳ ನಿಶ್ಚಿತ ಠೇವಣಿಗೆ ಶೇ.5.5-6.7 ಹಾಗೂ 5 ವರ್ಷಗಳ ಆರ್‌ಡಿಗೆ ಶೇ.5.8ರ ಬಡ್ಡಿ ದರವೇ ಮುಂದುವರೆಯಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.

ಆದಾಯ ತೆರಿಗೆ ವಿವರ ಗಡುವು ವಿಸ್ತರಣೆ!

ಇನ್ನು, ಕಾರ್ಮಿಕರ ಭವಿಷ್ಯ ನಿಧಿ(ಇಪಿಎಫ್‌) ಸಂಸ್ಥೆ 2019-20ನೇ ಸಾಲಿಗೆ ಈ ಹಿಂದೆಯೇ ನಿಗದಿಪಡಿಸಿದ್ದಂತೆ ತನ್ನ 6 ಕೋಟಿಗೂ ಹೆಚ್ಚು ಸದಸ್ಯರಿಗೆ ಶೇ.8.5ರಷ್ಟು ಬಡ್ಡಿ ದರ ಪಾವತಿಸಲು ಆರಂಭಿಸಿದ್ದು, ಜನವರಿ 1ಕ್ಕೆ ಖಾತೆಗೆ ಪಾವತಿಯಾಗಲಿದೆ ಎಂದು ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ಏಯ್, ಹಾಗೆಲ್ಲಾ ನಾಟಿ ಕೋಳಿ ಬಿಡಬಾರದು, ಏನೂ ಆಗೊಲ್ಲ ತಿನ್ನಬೇಕು': ಆರ್. ಅಶೋಕ್‌ಗೆ ಸಿದ್ದರಾಮಯ್ಯ ಕಿವಿಮಾತು!
ದ್ವೇಷ ಭಾಷಣ ತಡೆಗೆ ಹೊಸ ಕಾನೂನು: ಈ ಕಾಯ್ದೆ ತರ್ತಿರೋ ಟಾರ್ಗೆಟ್ ನಾನೇ ಎಂದ ಯತ್ನಾಳ್!