
ಹಾಸನ (ಏ. 06): ಇಲ್ಲೊಂದು ಅಮಾನವೀಯ ಘಟನೆ ನಡೆದಿದೆ. ವ್ಯಕ್ತಿಯೊಬ್ಬ ದಂಪತಿ ಮೇಲೆ ದಾಳಿ ಮಾಡಿ ಮನಸೋ ಇಚ್ಚೆ ಥಳಿಸಿದ್ದಾನೆ. ಗಂಡನ ರಕ್ಷಿಸಿಕೊಳ್ಳಲು ಬಂದ ಪತ್ನಿಯ ಮೇಲೆಯೂ ಹಲ್ಲೆ ನಡೆಸಿದ್ದಾನೆ.
ನಗರದ ಪಾಂಡುರಂಗ ದೇವಸ್ಥಾನ ರಸ್ತೆಯ ಗರಡಿ ಸರ್ಕಲ್’ನಲ್ಲಿ ವ್ಯಕ್ತಿಯೊಬ್ಬ ಅಮಾನವೀಯವಾಗಿ ವರ್ತಿಸಿ ಹಲ್ಲೆ ಮಾಡಿದ್ದಾನೆ. ಮಾರ್ಚ್ 30 ರಂದು ಈ ಘಟನೆ ನಡೆದಿದೆ. ಅಂದು ಸಂಜೆ ವೇಳೆ ದ್ವಿಚಕ್ರ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನ ವಾಹನ ಅಲ್ಲೇ ಸರ್ಕಲ್ ನಲ್ಲಿದ್ದ ಉತ್ತರ ಪ್ರದೇಶ ಮೂಲದ ಪಾನೀಪುರಿ ಮಾರುವ ವಾಹನಕ್ಕೆ ಡಿಕ್ಕಿ ಹೊಡೆದಿದೆ. ನಂತರ ಆ ಗಾಡಿ ರಸ್ತೆ ಮಧ್ಯೆ ನಿಲ್ಲಿಸಲಾಗಿದೆ ಎಂದು ದರ್ಪದಿಂದ ಆ ಅಮಾಯಕ ಪಾನಿಪುರಿ ವ್ಯಾಪಾರಿಯನ್ನು ರಸ್ತೆ ಮದ್ಯಕ್ಕೆಳೆದು ಹಿಗ್ಗಾ ಮುಗ್ಗಾ ಥಳಿಸಿದ್ದಾನೆ. ವ್ಯಾಪಾರಿ ಮತ್ತು ಆತನ ಪತ್ನಿ ಕೈ ಮುಗಿದು ಕೇಳಿಕೊಂಡರೂ ಅವನ ಮೇಲೆ ಎರಗಿ ಹೊಡೆಯುತ್ತಾನೆ. ಅಲ್ಲೇ ನಿಂತಿದ್ದ ಹಲವು ಜನರು ಮೂಖರಂತೆ ನೋಡುತ್ತಾರೆಯೆ ಹೊರತು ಯಾರೂ ರಕ್ಷಣೆಗೆ ಬರುವುದಿಲ್ಲ.
ಈ ಬಗ್ಗೆ ಹಾಸನ ಎಸ್ಪಿ ರಾಹುಲ್ ಕುಮಾರ್ ಗಮನಹರಿಸಿ ಪುಡಿರೌಡಿಗಳಿಗೆ ಪಾಠ ಕಲಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.