ಇನ್ಫೋಸಿಸ್'ಗೆ ಅಮೆರಿಕ ರೂ. 6.5 ಕೋಟಿ ದಂಡ

By Suvarna Web DeskFirst Published Jun 24, 2017, 10:25 AM IST
Highlights

ವೀಸಾ ನಿಯಮ ಉಲ್ಲಂಘಿಸಿ ವಿದೇಶೀ ನೌಕರರನ್ನು ಅಮೆರಿಕದಲ್ಲಿ ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಐಟಿ ದಿಗ್ಗಜ ಇಸ್ಫೋಸಿಸ್‌ಗೆ ಅಮೆರಿಕದ ನ್ಯೂಯಾರ್ಕ್ ರಾಜ್ಯ ಸರ್ಕಾರ 6.5 ಕೋಟಿ ರು. ದಂಡ ವಿಧಿಸಿದೆ.

ಬೆಂಗಳೂರು: ವೀಸಾ ನಿಯಮ ಉಲ್ಲಂಘಿಸಿ ವಿದೇಶೀ ನೌಕರರನ್ನು ಅಮೆರಿಕದಲ್ಲಿ ನೇಮಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾರತದ ಐಟಿ ದಿಗ್ಗಜ ಇಸ್ಫೋಸಿಸ್‌ಗೆ ಅಮೆರಿಕದ ನ್ಯೂಯಾರ್ಕ್ ರಾಜ್ಯ ಸರ್ಕಾರ 6.5 ಕೋಟಿ ರು. ದಂಡ ವಿಧಿಸಿದೆ.

ಬಿ1 ವೀಸಾ ನಿಯಮಕ್ಕೆ ವಿರುದ್ಧವಾಗಿ ಹೊರಗುತ್ತಿಗೆ ಸೇವೆಗಳಲ್ಲಿ ಸತತವಾಗಿ ವಿದೇಶೀ ಐಟಿ ನೌಕರರನ್ನು ನೇಮಕ ಮಾಡಿಕೊಂಡ ಅರೋಪದ ಕಾರಣಕ್ಕೆ ಇಸ್ಫೋಸಿಸ್‌ 6.5 ಕೋಟಿ ರು. ದಂಡ ತೆರಲು ಒಪ್ಪಿಕೊಂಡಿದೆ ಎಂದು ನ್ಯೂಯಾರ್ಕ್ ಅಟಾರ್ನಿ ಜನರಲ್‌ ಎರಿಕ್‌ ಶ್ನೈಡರ್ಮನ್‌ ಹೇಳಿದ್ದಾರೆ.

ಯಾವುದೇ ಕ್ರಿಮಿನಲ್‌ ಅಥವಾ ಸಿವಿಲ್‌ ಪ್ರಕರಣ ಇಲ್ಲದೇ ಸಂಧಾನದ ಮೂಲಕ ದಂಡ ತೆರುವ ಒಪ್ಪಂದಕ್ಕೆ ಬರಲಾಗಿದೆ ಎಂದು ಇಸ್ಫೋಸಿಸ್‌ ಹೇಳಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ಆದರೆ 4 ವರ್ಷ ಹಿಂದೆ 215 ಕೋಟಿ ರು. ತೆರಲು ಇಸ್ಫೋಸಿಸ್‌ ಒಪ್ಪಿತ್ತು. ಆದರೆ ಇಷ್ಟುದಂಡ ತೆರಬೇಕೆಂದರೆ ತನಿಖೆಯಲ್ಲಿ ಆರೋಪ ಸಾಬೀತಾಗಬೇಕೆಂಬ ಷರತ್ತು ವಿಧಿಸಿತ್ತು.

click me!