ಇನ್ಫಿಯಿಂದ ಮೂರ್ತಿ ಸೇರಿ ಐವರು ಪ್ರವರ್ತಕರು ಹೊರಕ್ಕೆ?

Published : Jun 10, 2017, 02:23 PM ISTUpdated : Apr 11, 2018, 12:49 PM IST
ಇನ್ಫಿಯಿಂದ ಮೂರ್ತಿ ಸೇರಿ ಐವರು ಪ್ರವರ್ತಕರು ಹೊರಕ್ಕೆ?

ಸಾರಾಂಶ

ಸಂಸ್ಥಾಪಕರಾದ ನಾರಾಯಣಮೂರ್ತಿ, ಕ್ರಿಸ್‌ ಗೋಪಾಲಕೃಷ್ಣನ್‌, ನಂದನ್‌ ನಿಲೇಕಣಿ, ಕೆ. ದಿನೇಶ್‌ ಹಾಗೂ ಎಸ್‌.ಡಿ. ಶಿಬುಲಾಲ್‌ ಅವರು ತಮ್ಮ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ 28 ಸಾವಿರ ಕೋಟಿ ರು. ಮೌಲ್ಯದ ಶೇ.12.75ರಷ್ಟುಷೇರು ಹೊಂದಿದ್ದಾರೆ. ಅದನ್ನೆಲ್ಲಾ ಮಾರಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಬೆಂಗಳೂರು/ಮುಂಬೈ: ಸಿಇಒ ವಿಶಾಲ್‌ ಸಿಕ್ಕಾ ನೇತೃತ್ವದ ನಿರ್ದೇಶಕ ಮಂಡಳಿ ಜತೆ ಭಿನ್ನಾಭಿಪ್ರಾಯ ಹೊಂದಿರುವ ಇಸ್ಫೋಸಿಸ್‌ನ 5 ಸಂಸ್ಥಾಪಕರು ಆ ಕಂಪನಿ ಜತೆಗೆ ಸಂಬಂಧ ಕಡಿದುಕೊಳ್ಳಲು ಮುಂದಾಗಿದ್ದಾರೆ.

ಸಂಸ್ಥಾಪಕರಾದ ನಾರಾಯಣಮೂರ್ತಿ, ಕ್ರಿಸ್‌ ಗೋಪಾಲಕೃಷ್ಣನ್‌, ನಂದನ್‌ ನಿಲೇಕಣಿ, ಕೆ. ದಿನೇಶ್‌ ಹಾಗೂ ಎಸ್‌.ಡಿ. ಶಿಬುಲಾಲ್‌ ಅವರು ತಮ್ಮ ಮತ್ತು ತಮ್ಮ ಕುಟುಂಬದ ಹೆಸರಿನಲ್ಲಿ 28 ಸಾವಿರ ಕೋಟಿ ರು. ಮೌಲ್ಯದ ಶೇ.12.75ರಷ್ಟುಷೇರು ಹೊಂದಿದ್ದಾರೆ. ಅದನ್ನೆಲ್ಲಾ ಮಾರಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.

ಈ ಸುದ್ದಿ ಕಾರ್ಪೊರೆಟ್‌ ಲೋಕದಲ್ಲಿ ಅಲ್ಲೋಲ- ಕಲ್ಲೋಲಕ್ಕೆ ಕಾರಣವಾಗಿದೆ. ಇದು ಸತ್ಯವಲ್ಲ ಎಂದು ಸ್ವತಃ ನಾರಾಯಣಮೂರ್ತಿ ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಲು ಗೋಪಾಲಕೃಷ್ಣನ್‌ ಹಾಗೂ ನಿಲೇಕಣಿ ನಿರಾಕರಿಸಿದ್ದಾರೆ. ಅಂತಹ ಯಾವುದೇ ಬೆಳವಣಿಗೆ ನಡೆದಿಲ್ಲ ಎಂದು ಇಸ್ಫೋಸಿಸ್‌ ಕೂಡ ಸ್ಪಷ್ಟನೆ ನೀಡಿದೆ.

ಸಂಸ್ಥಾಪಕರು ಕಂಪನಿಯಿಂದ ನಿರ್ಗಮಿಸುವ ಸುದ್ದಿಯ ಬೆನ್ನಲ್ಲೇ ಷೇರುಪೇಟೆಯಲ್ಲಿ ಇಸ್ಫೋಸಿಸ್‌ ಷೇರುಗಳು ಒಂದು ಹಂತದಲ್ಲಿ ಶೇ.3ರಷ್ಟುಕುಸಿತ ಕಂಡವು. ಬಳಿಕ ಚೇತರಿಸಿಕೊಂಡು ಶೇ.0.78ರಷ್ಟುಇಳಿಕೆ ದಾಖಲಿಸಿದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ದುರ್ಗೆಯ ಜಾಗೋ ಮಾ ಸಾಕು ಜಾತ್ಯಾತೀತ ಗೀತೆ ಹಾಡಿ: ಪಶ್ಚಿಮ ಬಂಗಾಳದಲ್ಲಿ ಗಾಯಕಿಗೆ ಕಿರುಕುಳ: ಬಂಧನ
ಮಹಿಳಾ ಮೀಸಲಾತಿ ಜಾರಿಯಾದರೆ ಸದನದಲ್ಲಿ 75 ಮಹಿಳಾ ಶಾಸಕಿಯರು: ಸಚಿವ ಶಿವರಾಜ ತಂಗಡಗಿ