ಮೋದಿಗೆ ಸಿದ್ದು ಪತ್ರ: ಗೋ ಅಧಿಸೂಚನೆಗೆ ವಿರೋಧ

By Suvarna Web DeskFirst Published Jun 10, 2017, 2:17 PM IST
Highlights

‘ಕೇಂದ್ರ ಜಾರಿಗೊಳಿಸಿರುವ 2017ರ ಪ್ರಾಣಿ ಹಿಂಸೆ ಮತ್ತು ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯ ಅಧಿಸೂಚನೆಯು, ಸಂವಿಧಾನದ ವಿಧಿ 301 ಹಾಗೂ 302 ಮತ್ತು ಅನುಸೂಚಿ 7ರಲ್ಲಿ ಕಲ್ಪಿಸಲಾಗಿರುವ ಜಾನುವಾರುಗಳ ಮುಕ್ತ ಮಾರಾಟ ವ್ಯವಸ್ಥೆಗೆ ವಿರುದ್ಧವಾಗಿದ್ದು, 1964ರ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರುಗಳ ಹತ್ಯೆ ಕಾಯ್ದೆಗೆ ಕೂಡ ವ್ಯತಿರಿಕ್ತವಾಗಿದೆ. ಹೀಗಾಗಿ ಸಂವಿಧಾನದ ವಿಧಿ 249 ಮತ್ತು 250ರ ಅನ್ವಯ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಯ್ದೆಗಳಿಗೆ ಅನ್ವಯವಾಗಲ್ಲ' ಎಂದು ಆಕ್ಷೇಪ ಸಲ್ಲಿಸಿದ್ದಾರೆ.

ಬೆಂಗಳೂರು: 'ಜಾನುವಾರು ಪೇಟೆಗಳಲ್ಲಿ ಹತ್ಯೆಯ ಉದ್ದೇಶಕ್ಕೆ ಪಶುಗಳನ್ನು ಮಾರಾಟ ಮಾಡಬಾರದು' ಎಂಬ ಕೇಂದ್ರ ಸರ್ಕಾರದ ಅಧಿಸೂಚನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಶುಕ್ರವಾರ ಪತ್ರ ಬರೆದಿದ್ದಾರೆ.

‘ಕೇಂದ್ರ ಜಾರಿಗೊಳಿಸಿರುವ 2017ರ ಪ್ರಾಣಿ ಹಿಂಸೆ ಮತ್ತು ಜಾನುವಾರು ಮಾರಾಟ ನಿಯಂತ್ರಣ ಕಾಯ್ದೆಯ ಅಧಿಸೂಚನೆಯು, ಸಂವಿಧಾನದ ವಿಧಿ 301 ಹಾಗೂ 302 ಮತ್ತು ಅನುಸೂಚಿ 7ರಲ್ಲಿ ಕಲ್ಪಿಸಲಾಗಿರುವ ಜಾನುವಾರುಗಳ ಮುಕ್ತ ಮಾರಾಟ ವ್ಯವಸ್ಥೆಗೆ ವಿರುದ್ಧವಾಗಿದ್ದು, 1964ರ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರುಗಳ ಹತ್ಯೆ ಕಾಯ್ದೆಗೆ ಕೂಡ ವ್ಯತಿರಿಕ್ತವಾಗಿದೆ. ಹೀಗಾಗಿ ಸಂವಿಧಾನದ ವಿಧಿ 249 ಮತ್ತು 250ರ ಅನ್ವಯ ಕೇಂದ್ರ ಸರ್ಕಾರದ ಕಾಯ್ದೆ ರಾಜ್ಯದ ಕಾಯ್ದೆಗಳಿಗೆ ಅನ್ವಯವಾಗಲ್ಲ' ಎಂದು ಆಕ್ಷೇಪ ಸಲ್ಲಿಸಿದ್ದಾರೆ.

‘ರಾಜ್ಯದ ಕಾಯ್ದೆ ಅನ್ವಯ 12 ವರ್ಷ ಮೀರಿದ ಜಾನುವಾರುಗಳನ್ನು ಮಾರಾಟ ಮಾಡಲು ಅವಕಾಶವಿದೆ. ಕೇಂದ್ರ ಜಾರಿಗೊಳಿಸಿರುವ ಹೊಸ ಕಾಯ್ದೆಯಿಂದ ರೈತರು ಅಗತ್ಯ ದಾಖಲಾತಿಗಳೊಂದಿಗೆ ಜಾನುವಾರುಗಳು ಖರೀದಿ, ಮಾರದೇ ಸಾಧ್ಯವೇ ಇಲ್ಲ. ಇದರಿಂದ ಗ್ರಾಮೀಣ ಆರ್ಥಿಕ ವ್ಯವಸ್ಥೆಯ ಮೇಲೆ ಭಾರಿ ದುಷ್ಪರಿಣಾಮ ಬೀರಲಿದೆ' ಎಂದಿದ್ದಾರೆ.

click me!