
ಜೈಪುರ: ಮಾವುತನೊಬ್ಬನು ಆನೆಯನ್ನು ಅಮಾನವೀಯ ರೀತಿಯಲ್ಲಿ ಶಿಕ್ಷಸಿ, ಸರ್ಕಸ್‌ಗೆ ತರಬೇತಿ ನೀಡುತ್ತಿರುವ ಪರಿ ನೋಡಿದರೆ ಎಂಥವರಿಗೂ ಕೋಪ ಹೆಚ್ಚಾಗುವುದು ಸಹಜ. ಹೊಡೆದು, ಬಡಿದು ಮಾಡುವ ಈ ಮಾವುತ ಈ ಆನೆಯನ್ನು ನಡೆಸಿಕೊಳ್ಳುತ್ತಿರುವ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈತನ ದುರ್ನಡತೆ ಬೆಳಕಿಗೆ ಬಂದಿದೆ.ಜೈಪುರ ಮೂಲದ ಸವಿರ್ ಬಾಲು ಖಾನ್ ಆನೆಯೊಂದಿಗೆ ದುರ್ನಡತೆ ತೋರುತ್ತಿರುವ ಮಾವುತ. ವೈರಲ್ ಆದ ಪೋಸ್ಟ್‌ನಲ್ಲಿ ಆನೆ ಕಾಲನ್ನು ಕಟ್ಟಿದ್ದು, ಬೆಂಕಿಯಲ್ಲಿ ಕಾದ ಕೋಲಿನಿಂದ ಹೊಡೆಯುತ್ತಿರುವುದು ಎಂಥವರ ಕಣ್ಣಲ್ಲೂ ನೀರು ತರಿಸುತ್ತದೆ. ಕಳೆದ ಆರು ವರ್ಷಗಳಿಂದಲೂ ಇಂಥದ್ದೇ ಕೃತ್ಯವೆಸಗುತ್ತಿದ್ದ ಖಾನ್ ಕತ್ತಲ ಕೋಣೆಯೊಂದರಲ್ಲಿ ಆನೆಯನ್ನು ಇರಿಸಿ, ಸರ್ಕಸ್‌ಗೆ ಪಳಗಿಸುತ್ತಿದ್ದ. ನಂತರ ಸರ್ಕಸ್ ಕಂಪನಿಗಳಿಗೆ ಮಾರುತ್ತಿದ್ದ. ಈ ಆನೆಗೆ ಸುಮನ್ ಎಂದು ಹೆಸರಿಡಲಾಗಿತ್ತು.
ವಿಚಿತ್ರವಾಗಿ ಕಾಣೆಯಾಗುವ ಕಥೆಯುಳ್ಳ 'ವೇರ್ ದ ಎಲೆಫೆಂಟ್ ಸ್ಲೀಪ್ಸ್...' ಎಂಬ ಡಾಕ್ಯುಮೆಂಟರಿ 2006ರಲ್ಲಿ ಪ್ರಸಾರ ಮಾಡಲಾಗಿತ್ತು. ಆದರೆ, ಇದೀಗ ಸವಿರ್‌ನಂಥ ಮಾವುತರ ವಿಕೃತ ಕೃತ್ಯ ಬೆಳಕಿಗೆ ಬಂದಿದ್ದು, ಎಲ್ಲಿಂದಲೋ ಆನೆ ತಂದು, ಕದ್ದು ಮುಚ್ಚಿ ಸಾಕಿ ಮಾರುತ್ತಿದ್ದರೆಂಬುವುದು ಬಹಿರಂಗಗೊಂಡಿದೆ.
ಆ ಆನೆ ಮರಿ ಸುಮನ್ ತಾಯಿ ಚಂದನಾ ಹಾಗೂ ಬಿಚ್ಲಿಯನ್ನೂ ಮಾರಲಾಗಿದೆ. ಸುಮನ್ ಮತ್ತು ಪೋಷಕರನ್ನು ರಕ್ಷಿಸಿದ್ದು, ಉತ್ತರಪ್ರದೇಶದಲ್ಲಿ ಬಿಡಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.