ಗಡಿ ಅಂಚಿನ ದೇಗುಲ ಮೇಲೆ ನೆರೆರಾಜ್ಯಗಳ ಕಣ್ಣು: ವಿವಾದದಕ್ಕೀಡಾದ ಕೋಲಾರದ ಐತಿಹಾಸಿಕ ಮಲ್ಲೇಶ್ವರ ದೇವಾಲಯ

By Suvarna Web DeskFirst Published Mar 14, 2017, 2:14 AM IST
Highlights

ಸಾಮಾನ್ಯವಾಗಿ ನರೆ ರಾಷ್ಟ್ರಗಳ ನಡುವೆ ಗಡಿ ವಿವಾದ ಕೇಳಿದ್ದೇವೆ. ಆದ್ರೆ ನಮ್ಮ ರಾಜ್ಯದ  ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇಗುಲವೊಂದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಇನ್ನೂರು ವರ್ಷಗಳ ಇತಿಹಾಸವಿದ್ದರೂ, ಈಗ ಮೂರು ರಾಜ್ಯಗಳ ಪೊಲೀಸರ ನಡುವೆ ಗಡಿ ವಾರ್ ಶುರುವಾಗಿದೆ. ಹಾಗಾದ್ರೆ ಯಾವುದು ಈ ದೇವಸ್ಥಾನ? ಏನಿದು ವಿವಾದ ನೀವೆ ನೋಡಿ.

ಕೋಲಾರ(ಮಾ.14): ಸಾಮಾನ್ಯವಾಗಿ ನರೆ ರಾಷ್ಟ್ರಗಳ ನಡುವೆ ಗಡಿ ವಿವಾದ ಕೇಳಿದ್ದೇವೆ. ಆದ್ರೆ ನಮ್ಮ ರಾಜ್ಯದ  ಮುಜರಾಯಿ ಇಲಾಖೆಯ ಅಧೀನದಲ್ಲಿ ಬರುವ ದೇಗುಲವೊಂದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಇನ್ನೂರು ವರ್ಷಗಳ ಇತಿಹಾಸವಿದ್ದರೂ, ಈಗ ಮೂರು ರಾಜ್ಯಗಳ ಪೊಲೀಸರ ನಡುವೆ ಗಡಿ ವಾರ್ ಶುರುವಾಗಿದೆ. ಹಾಗಾದ್ರೆ ಯಾವುದು ಈ ದೇವಸ್ಥಾನ? ಏನಿದು ವಿವಾದ ನೀವೆ ನೋಡಿ.

ಕೋಲಾರ ಅಂಚಿನಲ್ಲಿ ಬರುವ ಮಲ್ಲಪ್ಪನ ಬೆಟ್ಟದಲ್ಲಿನ ಮಲ್ಲೇಶ್ವರ ದೇಗುಲವೇ ಇದೀಗ ವಿವಾದ ಸೃಷ್ಟಿಸಿದೆ. ಬಂಗಾರಪೇಟೆ ತಾಲ್ಲೂಕು ಗಡಿ ಅಂಚಿನ ದೋಣಿ ಮೊಡಗು  ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಸುಮಾರು ಇನ್ನೂರು ವರ್ಷಗಳ ಇತಿಹಾಸವಿರುವ ಐತಿಹಾಸಿಕ ಗಡಿ ಬೆಟ್ಟ ಮಲ್ಲೇಶ್ವರ ದೇಗುಲ ಈಗ ವಿವಾದದ ಹುತ್ತವಾಗಿದೆ.

ಈ ದೇವಾಲಯಕ್ಕೆ ನೆರೆಯ ರಾಜ್ಯಗಳಾದ ಆಂಧ್ರ, ತಮಿಳುನಾಡಿನಿಂದಲೂ ಭಕ್ತರು ಆಗಮಿಸ್ತಾರೆ. ಆದ್ರೆ ಆಂಧ್ರ ಅಥವಾ ತಮಿಳುನಾಡಿನವರಿಂದ ದೇವಸ್ಥಾನಕ್ಕೆ ಅಭಿವೃದ್ಧಿಯ  ಕೊಡಗೆ ಮಾತ್ರ ಶೂನ್ಯ. ಹೀಗಿದ್ದರೂ ಸದ್ಯ ಆಂಧ್ರದ ಕಣ್ಣು ದೇವಾಲಯದ ಮೇಲೆ ಬಿದ್ದಿದೆ. ದೇವಾಲಯವು ತಮಗೆ ಸೇರಬೇಕು ಎಂದು ಹುಂಡಿ ಇಡುವ ವಿಚಾರದಲ್ಲಿ ತಗಾದೆ ತೆಗೆದಿದೆ. ಇತ್ತ ತಮಿಳುನಾಡಿನವರು ದೇವಾಲಯ ನಮಗೂ ಸೇರಿದೆ ಎನ್ನುತ್ತಿದ್ದಾರೆ. ದೋಣಿಮೊಡಗು ಗ್ರಾಮ ಪಂಚಾಯಿತಿಯಲ್ಲಿ ಹುಂಡಿ ಇಡುವಾಗ ಆಂಧ್ರ ಪೊಲೀಸರು ತಗಾದೆ ತೆಗೆದಿದ್ದಾರೆ.

ಇನ್ನೂ ಕಂದಾಯ ಇಲಾಖೆಯಲ್ಲಿಯೂ ಇನ್ನೂರು ವರ್ಷಗಳ ಭೂ ದಾಖಲಾತಿ ಸಹ ಇದೆ. ನಕ್ಷೆ ಸೇರಿದಂತೆ ಎಲ್ಲವೂ ದಾಖಲೆ ಇದೆ. ಆದ್ರೆ ದೇವಾಲಯದ ಗರ್ಭಗುಡಿ ಮಾತ್ರ ಕರ್ನಾಟಕದ್ದು, ಮುಂಭಾಗದ ಹೊರಾಂಗಣ ಮಾತ್ರ ಆಂಧ್ರಗಡಿಗೆ ಸೇರುತ್ತೆ ಅಂತಿದ್ದಾರೆ. ಹೀಗಾಗಿ ಮಲ್ಲಯ್ಯನ ಬೆಟ್ಟಮಲ್ಲೇಶ್ವರ ದೇವಾಲಯ ವಿವಾದಕ್ಕೆ ತೆರೆ ಎಳೆಯಲು ಕೋಲಾರ ಜಿಲ್ಲಾಧಿಕಾರಿ ಮುಂದಾಗಿದ್ದಾರೆ.

ಮಾರ್ಚ್​ 16 ರನಂತರ ಜಂಟಿ ಸರ್ವೇ ನಡೆಸೋಕೆ ನಿರ್ಧರಿಸಲಾಗಿದೆ. ಬಳಿಕ ಮಲ್ಲೇಶ್ವರ ದೇಗುಲ ಯಾರಿಗೆ ಸೇರಿದ್ದು  ಅನ್ನೋದು ಅಧಿಕೃತವಾಗಿ ತಿಳಿಯಲಿದೆ.

click me!