5ರೂ.ತಿಂಡಿ,10 ರೂಗೆ ಊಟ! ಇಂದು ಇಂದಿರಾ ಕ್ಯಾಂಟೀನ್ ಓಪನ್: ರಾಹುಲ್ ಗಾಂಧಿ ನೀಡಲಿದ್ದಾರೆ ಹಸಿರು ನಿಶಾನೆ

Published : Aug 16, 2017, 09:34 AM ISTUpdated : Apr 11, 2018, 01:05 PM IST
5ರೂ.ತಿಂಡಿ,10 ರೂಗೆ ಊಟ! ಇಂದು ಇಂದಿರಾ ಕ್ಯಾಂಟೀನ್ ಓಪನ್: ರಾಹುಲ್ ಗಾಂಧಿ ನೀಡಲಿದ್ದಾರೆ ಹಸಿರು ನಿಶಾನೆ

ಸಾರಾಂಶ

5 ರೂಪಾಯಿಗೆ ತಿಂಡಿ, 10 ರೂಪಾಯಿಗೆ ಊಟ ಸಿಗುವ ದಿನೇ ಬಂದೆ ಬಿಟ್ಟಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಇಂದಿರಾ ಕ್ಯಾಂಟಿನ್ ಯೋಜನೆಗೆ ಇಂದು ಹಸಿರು ನಿಶಾನೆ ಸಿಗಲಿದೆ. ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಇಂದು  ಇಂದಿರಾ ಕ್ಯಾಂಟೀನ್ ಲೋಕಾರ್ಪಣೆ ಮಾಡಲಿದ್ದಾರೆ.

ಬೆಂಗಳೂರು(ಆ.16): ಸಿಎಂ ಸಿದ್ದರಾಮಯ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಇಂದಿರಾ ಕ್ಯಾಂಟೀನ್ ಇಂದಿನಿಂದ ಆರಂಭವಾಗಲಿದೆ. ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಇಂದಿರಾ ಕ್ಯಾಂಟಿನ್ ಗಳನ್ನು ತೆರಯಲು ನಿರ್ಧರಿಸಲಾಗಿದ್ದು, ಇಂದು 101 ಕ್ಯಾಂಟಿನ್ ಗಳು ಲೋಕಾರ್ಪಣೆಯಾಗಲಿವೆ. ಇಂದು  ಬೆಂಗಳೂರಿಗೆ ಆಗಮಿಸುತ್ತಿರುವ  ರಾಹುಲ್ ಗಾಂಧಿ, ಜಯನಗರ ವಾರ್ಡ್ನ ಕನಕನಪಾಳ್ಯದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟಿನ್ ಅನ್ನು ಲೋಕಾರ್ಪಣೆ ಮಾಡಲಿದ್ದಾರೆ. ಹೀಗಾಗಿ ಇವತ್ತು ಸಚಿವ ಜಾರ್ಜ್, ಮೇಯರ್ ಜಿ. ಪದ್ಮಾವತಿ ಸೇರಿದಂತೆ ಪಾಲಿಕೆ ಅಧಿಕಾರಿಗಳು ನಗರದ ಬಹುತೇಕ ಕ್ಯಾಂಟೀನ್ಗಳ ಪರಿಶೀಲನೆ ನಡೆಸಿ, ಆಹಾರ ಪರೀಕ್ಷಿಸಿದರು.

ಇಂದಿರಾ ಕ್ಯಾಂಟೀನ್ 

28 ಲಕ್ಷ ರೂಪಾಯಿ ವೆಚ್ಚದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಾಣ ಮಾಡಿಲಾಗಿದೆ. ಪ್ರತಿದಿನ 500 ರಿಂದ 600 ಜನರಿಗೆ ಊಟ ನೀಡಲಾಗುತ್ತೆ. ಹಾಗೇಯೆ 10 ರೂಗೆ ಹೊಟ್ಟೆ ತುಂಬಾ ಊಟ, 5 ರೂಗೆ ತಿಂಡಿ ಕೊಡಲಾಗುತ್ತೆ. ಬೆಳಗ್ಗೆ 7.30ರಿಂದ 10.30ರವರೆಗೆ ಉಪಾಹಾರ, ಮಧ್ಯಾಹ್ನ 12.30ರಿಂದ 2.30ರವರೆಗೆ ಊಟ ಮತ್ತು ರಾತ್ರಿ 7.30ರಿಂದ 8.30ರವರೆಗೆ ರಾತ್ರಿ ಊಟ ಇಂದಿರಾ ಕ್ಯಾಂಟಿನ್ ನಲ್ಲಿ ಲಭ್ಯವಿರುತ್ತದೆ. ಹೈಟೆಕ್ ಟೋಕನ್ನ ವ್ಯವಸ್ಥೆಯನ್ನು ಮಾಡಲಾಗಿದೆ. ಅಲ್ಲದೇ ಌಪ್ ಕೂಡಾ ಬಿಡುಗಡೆ ಮಾಡಲಾಗಿದೆ.

ಒಟ್ಟಿನಲ್ಲಿ 5 ರೂಪಾಯಿಗೆ  ತಿಂಡಿ, 10 ರೂಪಾಯಿಗೆ ಊಟ ಸಿಗುವ ದಿನ ಬಂದೆಬಿಟ್ಟಿದ್ದು,ಸಾವಿರಾರು ಜನರಿಗೆ ಇದರ ಸದುಪಯೋಗ ಪಡೆಯಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌
ಡಿಸಿಎಂ ಡಿಕೆ ಶಿವಕುಮಾರ್ ಆಪ್ತ ಕಾರ್ಯದರ್ಶಿ ಕಾರು ಅಪಘಾತ, ಬೈಕ್ ಸವಾರ ಸ್ಥಳದಲ್ಲೇ ಸಾವು