
ನವದೆಹಲಿ(ಅ. 14): ಪಂಜಾಬ್ ಚುನಾವಣೆಯನ್ನು ಕ್ಲೀನ್ ಸ್ವೀಪ್ ಮಾಡುತ್ತೇವೆ ಎಂದು ಹೇಳಿಕೊಳ್ಳುತ್ತಿರುವ ಆಮ್ ಆದ್ಮಿಗೆ ಕೊಂಚ ನಿರಾಶೆ ಮೂಡಿಸುವಂಥ ಚುನಾವಣಾ ಸಮೀಕ್ಷೆಯೊಂದು ಹೊರಬಂದಿದೆ. ಇಂಡಿಯಾ ಟುಡೇ ವಾಹಿನಿ ಹಾಗೂ ಆ್ಯಕ್ಸಿಸ್ ಸಂಸ್ಥೆ ಜಂಟಿಯಾಗಿ ನಡೆಸಿದ ಚುಣಾವಣಾ ಪೂರ್ವ ಸಮೀಕ್ಷೆಯಲ್ಲಿ ಕಾಂಗ್ರೆಸ್ ಪಕ್ಷ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಎಂಬ ಅಂದಾಜು ಸಿಕ್ಕಿದೆ. ಸಮೀಕ್ಷೆ ಪ್ರಕಾರ 117 ಸದಸ್ಯಬಲದ ಪಂಜಾಬ್ ವಿಧಾನಸಭೆಯಲ್ಲಿ ಕಾಂಗ್ರೆಸ್ ಪಕ್ಷ 49-55 ಸೀಟುಗಳನ್ನು ಗೆಲ್ಲಬಹುದೆನ್ನಲಾಗಿದೆ. ಬಹುಮತಕ್ಕೆ ಬೇಕಾದ 59 ಸ್ಥಾನ ಪಡೆಯಲು ಕಾಂಗ್ರೆಸ್'ಗೆ ಸ್ವಲ್ಪ ಸ್ಥಾನಗಳ ಕೊರತೆ ಉಂಟಾಗಬಹುದು. ಮಾಜಿ ಕ್ರಿಕೆಟಿಗ ನವಜ್ಯೋತ್ ಸಿಧು ಅವರ ಆವಾಜ್ ಇ-ಪಂಜಾಬ್ ಪಕ್ಷ ಕೆಲ ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದ್ದು, ಸರಕಾರ ರಚನೆಯಲ್ಲಿ ಸಿಧು ಅವರೇ ಕಿಂಗ್ ಮೇಕರ್ ಆಗುವ ಸಾಧ್ಯತೆ ಇದೆ ಎಂದು ಸಮೀಕ್ಷೆ ಸೂಚಿಸಿದೆ. ಇನ್ನೊಂದೆಡೆ, ಆಡಳಿತಾರೂಢ ಬಿಜೆಪಿ-ಅಕಾಲಿದಳ ಮೈತ್ರಿಕೂಟಕ್ಕೆ ಮುಖಭಂಗವಾಗಲಿದ್ದು, ಮೂರನೇ ಸ್ಥಾನಕ್ಕೆ ತಳ್ಳಲ್ಪಡಬಹುದೆನ್ನಲಾಗಿದೆ.
ಆಕ್ಸಿಸ್ ಚುನಾವಣೆಪೂರ್ವ ಸಮೀಕ್ಷೆ:
ಪಂಜಾಬ್ ವಿಧಾನಸಭೆ ಬಲ: 117 ಕ್ಷೇತ್ರ
ಬಹುಮತಕ್ಕೆ: 59
ಕಾಂಗ್ರೆಸ್: 49-55
ಆಮ್ ಆದ್ಮಿ: 42-46
ಅಕಾಲಿದಳ-ಬಿಜೆಪಿ: 17-21
ಇತರರು: 3-7
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.