ನಾವು ಯಾರಿಗೇನು ಕಮ್ಮಿಯಿಲ್ಲ: ಉಗ್ರರ ನಾಶಕ್ಕೆ ಮಹಿಳಾ ಪಡೆ ಸನ್ನದ್ಧ

By Web DeskFirst Published Aug 12, 2018, 5:55 PM IST
Highlights

ನೀಲಿ ಬಣ್ಣದ ಸಮವಸ್ತ್ರದಲ್ಲಿವ ಒಟ್ಟು 36 ಮಹಿಳೆಯರ ಕಮಾಂಡೋ  ಪಡೆ ನಗರ ಪ್ರದೇಶಗಳಲ್ಲಿ ಉಗ್ರರು, ಸಂಭಾವ್ಯ ದಾಳಿಗಳನ್ನು ಎದುರಿಸುವುದರ ಜೊತೆ ಹಾಗೂ ಪ್ರವಾಹ, ಅಗ್ನಿ ಅನಾಹುತ ಮುಂತಾದ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಕಾರ್ಯ ನಿರ್ವಹಿಸಲಿದೆ.

ನವದೆಹಲಿ[ಆ.12]: ಇನ್ಮುಂದೆ ಉಗ್ರರ ನಾಶಕ್ಕೆ ಪುರುಷರಷ್ಟೆ ಅಲ್ಲ ಮಹಿಳೆಯರು ಸಿದ್ದವಾಗಲಿದ್ದಾರೆ. ದೇಶದಲ್ಲೇ ಎನ್ ಎಸ್ ಜಿ ರೀತಿಯಲ್ಲಿ ಸಂಪೂರ್ಣ ಮಹಿಳೆಯರಿಂದ ಕೂಡಿದ ಭದ್ರತಾ ಪಡೆಯನ್ನು [ಸ್ವಾಟ್]  ನವದೆಹಲಿಯಲ್ಲಿ ಆರಂಭಿಸಲಾಗಿದೆ. 

ಮಹಿಳೆಯರ ಅತ್ಯಾಧುನಿಕಾ ಪಡೆ ವಿಶೇಷ ಶಸ್ತ್ರಾಸ್ತಗಳೊಂದಿಗೆ ಉತ್ತಮ ಪರಿಣಿತಿಯನ್ನು ಹೊಂದಿರುತ್ತದೆ.  ಆರಂಭಿಕವಾಗಿ ಈ ಪಡೆ ಆಗಸ್ಟ್ 15ರ ಸ್ವಾತಂತ್ರ್ಯೋತ್ಸವದ ದಿನದಂದು ನವದೆಹಲಿಯ ಕೆಂಪು ಕೋಟೆಯಲ್ಲಿ ನಿಯೋಜಿತವಾಗಲಿದೆ. ನೀಲಿ ಬಣ್ಣದ ಸಮವಸ್ತ್ರದಲ್ಲಿವ ಒಟ್ಟು 36 ಮಹಿಳೆಯರ ಸ್ವಾಟ್ ನಗರ ಪ್ರದೇಶಗಳಲ್ಲಿ ಉಗ್ರರು, ಸಂಭಾವ್ಯ ದಾಳಿಗಳನ್ನು ಎದುರಿಸುವುದರ ಜೊತೆ ಹಾಗೂ ಪ್ರವಾಹ, ಅಗ್ನಿ ಅನಾಹುತ ಮುಂತಾದ ಪ್ರಕೃತಿ ವಿಕೋಪಗಳ ಸಂದರ್ಭಗಳಲ್ಲೂ ಕಾರ್ಯ ನಿರ್ವಹಿಸಲಿದೆ.

ಸ್ವಾಟ್'ನ ಎಲ್ಲ ಸದಸ್ಯರು ಈಶಾನ್ಯ ರಾಜ್ಯದವರಾಗಿದ್ದು, ರಾಷ್ಟ್ರೀಯ ಭದ್ರತಾ ಪಡೆ ನಿಪುಣರು ಹಾಗೂ ವಿವಿಧ ವಿದೇಶಗಳಲ್ಲಿ  ತರಬೇತಿ ಪಡೆದುಕೊಂಡಿದ್ದಾರೆ.  ಎಲ್ಲ ರೀತಿಯ ತುರ್ತು ಸಂದರ್ಭಗಳಲ್ಲೂ ಇವರು ಕಾರ್ಯನಿರ್ವಹಿಸಲಿದ್ದಾರೆ. ಕೇಂದ್ರ ಗೃಹ ಸಚಿವ ರಾಜ್ ನಾಥ್ ಸಿಂಗ್ ಸ್ವಾಟ್ ನ ಪಡೆಯನ್ನು ಉದ್ಘಾಟಿಸಲಿದ್ದು, ನಂತರದಿಂದ ಕಾರ್ಯಾಚರಣೆಗೆ ಸಿದ್ಧವಾಗಲಿದೆ.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : India’s first all-woman SWAT team at Red Fort for PM Narendra Modi's Independence Day speech

click me!