ಇಂದು ವಿಶ್ವ ಆನೆ ದಿನ : ಗಜರಾಜನ ಬಗ್ಗೆ ತಿಳಿದುಕೊಳ್ಳಬೇಕಾದ 6 ಸಂಗತಿಗಳು

By Web DeskFirst Published Aug 12, 2018, 4:52 PM IST
Highlights

ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷಮುಂತಾದ ಕಾರಣಗಳಿಂದಾಗಿ ಆನೆಯ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಪ್ರಾರಂಭಿಸಲಾಯಿತು.

ಜಗತ್ತಿನಲ್ಲಿ ಬಲಿಷ್ಟ ಪ್ರಾಣಿಯೆಂದರೆ ಆನೆ. ಗಜರಾಜನಷ್ಟು ಶಕ್ತಿಶಾಲಿಯಾದ ಪ್ರಾಣಿ ವನ್ಯಜೀವಿಗಳಲ್ಲಿ ಮತ್ತೊಂದಿಲ್ಲ. ಆದರೆ  ಅರಣ್ಯ ನಾಶ, ದಂತದ ಬೇಡಿಕೆ, ಮಾನವ ಆನೆಯ ಸಂಘರ್ಷಮುಂತಾದ ಕಾರಣಗಳಿಂದಾಗಿ ಆನೆಯ ಸಂತತಿ ವಿಶ್ವದಲ್ಲಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಅವಸಾನದ ಅಂಚಿನಲ್ಲಿ ಸಾಗುತ್ತಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಪ್ರಾರಂಭಿಸಲಾಯಿತು.


ವಿಶ್ವ ಆನೆ ದಿನದ ಪ್ರಯುಕ್ತ ತಿಳಿದುಕೊಳ್ಳಬೇಕಾದ ಪ್ರಮುಖ 6 ವಿಚಾರಗಳು        

1] ಅವಸಾನದ ಅಂಚಿನಲ್ಲಿರುವ ಆನೆಗಳನ್ನು ರಕ್ಷಿಸುವ ಸಲುವಾಗಿ 2011, ಆಗಸ್ಟ್ 12 ರಿಂದ ವಿಶ್ವ ಆನೆ ದಿನವನ್ನು ಆಚರಿಸಲು ಆರಂಭಿಸಲಾಯಿತು. ಇದಕ್ಕೆ ಪ್ರಮುಖ ಕಾರಣಕರ್ತರು ಕೆನಡಾದ ಚಿತ್ರ ನಿರ್ದೇಶಕರಾದ ಪ್ಯಾಟ್ರೀಷಿಯಾ ಸಿಮ್ಸ್ ಮತ್ತು ಮೈಕಲ್ ಕ್ಲಾರ್ಕ್ ಹಾಗೂ ಥೈಲ್ಯಾಂಡಿನ ಆನೆ ಉಳಿಯುವಿಕೆ  ಪ್ರಧಾನ ಕಾರ್ಯದರ್ಶಿಯಾದ ಶಿವಪೋರ್ನ್ ದರ್ದಾರನಂದ.

2] ಆನೆಯ ಕುರಿತಾಗಿಯೇ  ಮೊದಲ ವಿಶ್ವ ಆನೆ ದಿನಾಚರಣೆಯ ದಿನದಂದು ಹಾಲಿವುಡ್ ನಟ ವಿಲಿಯಂ ಶಟ್ನೇರ್  'ರಿಟರ್ನ್ಸ್ ಟೂ ಫಾರೆಸ್ಟ್' ಎಂಬ ಸಾಕ್ಷಚಿತ್ರ ನಿರ್ಮಿಸಿದ್ದರು.

3] ವಿಶ್ವದ ವಿವಿಧ ದೇಶಗಳಲ್ಲಿರುವ 65 ವನ್ಯಜೀವಿ ಸಂಸ್ಥೆಗಳು ಹಾಗೂ ಲಕ್ಷಾಂತರ ಮಂದಿ ವನ್ಯಜೀವಿ ತಜ್ಞರಿಂದ ಗಜರಾಜನ ದಿನಾಚರಣೆಗೆ ಬೆಂಬಲ ವ್ಯಕ್ತವಾಗಿದೆ.

4] ಭಾರತದಲ್ಲಿ 27312 ಆನೆಗಳಿದ್ದು ಕರ್ನಾಟಕದಲ್ಲಿ ಅತೀ ಹೆಚ್ಚು [6072] ಆನೆಗಳಿದ್ದರೆ 2ನೇ ಸ್ಥಾನದಲ್ಲಿ ಅಸ್ಸಾಂ[5709] ರಾಜ್ಯವಿದೆ.

5] ವಿಶ್ವದಲ್ಲಿ ಇವುಗಳ ಸಂಖ್ಯೆ  8 ಲಕ್ಷಗಳಿದ್ದು, ಆಫ್ರಿಕಾ ಖಂಡದಲ್ಲಿಯೇ 7 ಲಕ್ಷವಿದ್ದರೆ, ಏಷ್ಯಾದಲ್ಲಿ 1 ಲಕ್ಷ ಆನೆಗಳಿವೆ ಎಂದು ಅಂದಾಜಿಸಲಾಗಿದೆ.

6] ಕರ್ನಾಟಕದಲ್ಲಿ ಆನೆಗಳ ಕಾರಿಡಾರ್ ಗಳನ್ನು ರಕ್ಷಿಸಲು ’ಖಾಸಗಿ ರಕ್ಷಿತ ಅರಣ್ಯ'ಗಳ ಅಭಿವೃದ್ಧಿಗೆ ರಾಜ್ಯ ಸರ್ಕಾರ ನಿರ್ಧರಿಸಿದ್ದು ಈಬಗ್ಗೆ ಸುಪ್ರೀಂ ಕೋರ್ಟ್'ಗೆ ಮಾಹಿತಿ ನೀಡಿದೆ.

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲು ಕ್ಲಿಕ್ಕಿಸಿ : World Elephant Day: 6 things you must know about this annual event in celebration of the pachyderm

click me!