ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರ ಹಣ ದಾಖಲೆ ಕುಸಿತ

By Suvarna Web DeskFirst Published Jun 30, 2017, 2:15 AM IST
Highlights

ಸ್ವಿಸ್ ಬಾಂಕ್ ಖಾತೆದಾರರ ಹೆಸರನ್ನು ಸ್ವಿಸರ್‌ಲ್ಯಾಂಡ್ ಬಹಿರಂಗ ಪಡಿಸುತ್ತಿರುವುದು ಮತ್ತು ಕಾಳಧನಿಕರ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಸ್ವಿಸ್ ಬಾಂಕುಗಳಲ್ಲಿ ಕಾಳಧನದ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಜೂರಿಚ್/ ನವದೆಹಲಿ(ಜೂ.30): ಸ್ವಿಸ್ ಬ್ಯಾಂಕುಗಳಲ್ಲಿ ಕಾಳಧನ ಇಟ್ಟವರ ಹೆಸರು ಬಹಿರಂಗವಾಗುತ್ತಿದ್ದಂತೆ, ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣದಲ್ಲೂ ಗಣನೀಯ ಇಳಿಕೆಯಾಗಿದೆ. ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣ 2016ರಲ್ಲಿ ದಾಖಲೆಯ 4500 ಕೋಟಿ ರು.ಗಳಿಗೆ ಇಳಿದಿದೆ. 2015ರಲ್ಲಿ ಭಾರತೀಯರು 8392 ಕೋಟಿ ರು.ಗಳನ್ನು ಸ್ವಿಸ್ ಬ್ಯಾಂಕುಗಳಲ್ಲಿ ಇಟ್ಟಿದ್ದರು. ಅಂದರೆ ಶೇ.45ರಷ್ಟು ಇಳಿಕೆಯಾಗಿದೆ.

2006ರಲ್ಲಿ ಸ್ವಿಸ್ ಬ್ಯಾಂಕುಗಳಲ್ಲಿ ಭಾರತೀಯರು ಇಟ್ಟಿರುವ ಹಣದ ಪ್ರಮಾಣ ಗರಿಷ್ಠ 23,೦೦೦ ಕೋಟಿ ರು.ಗಳಷ್ಟಿತ್ತು. 1982ರಿಂದ ಲಭ್ಯವಿರುವ ದಾಖಲೆಗಳ ಪ್ರಕಾರ 1995ರಲ್ಲಿ ಭಾರತೀಯರು ೪೮೪೪ ಕೋಟಿ ರು.ಇಟ್ಟಿದ್ದು ಇದುವರೆಗಿನ ಕನಿಷ್ಠ ಮೊತ್ತ ಎನಿಸಿಕೊಂಡಿತ್ತು.

ಸ್ವಿಸ್ ಬಾಂಕ್ ಖಾತೆದಾರರ ಹೆಸರನ್ನು ಸ್ವಿಸರ್‌ಲ್ಯಾಂಡ್ ಬಹಿರಂಗ ಪಡಿಸುತ್ತಿರುವುದು ಮತ್ತು ಕಾಳಧನಿಕರ ವಿರುದ್ಧ ಮೋದಿ ಸರ್ಕಾರ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಸ್ವಿಸ್ ಬಾಂಕುಗಳಲ್ಲಿ ಕಾಳಧನದ ಪ್ರಮಾಣ ಇಳಿಕೆಗೆ ಪ್ರಮುಖ ಕಾರಣ ಎಂದು ವಿಶ್ಲೇಷಿಸಲಾಗಿದೆ.

ಇದೇ ವೇಳೆ, ಸ್ವಿಸ್ ಬ್ಯಾಂಕುಗಳಲ್ಲಿ ಇತರ ದೇಶದವರು ಇಟ್ಟಿರುವ ಹಣದ ಪ್ರಮಾಣ 2016ರಲ್ಲಿ 94 ಲಕ್ಷ ಕೋಟಿ ರು.ಗಳಿಂದ 96 ಲಕ್ಷ ಕೋಟಿ ರು.ಗಳಿಗೆ ಏರಿಕೆಯಾಗಿದೆ.

click me!