ರೈಲುಗಳ ಮೇಲೆ ಕಾರ್ಗಿಲ್‌ ಸಾಹಸ!

Published : Jul 16, 2019, 09:55 AM IST
ರೈಲುಗಳ ಮೇಲೆ ಕಾರ್ಗಿಲ್‌ ಸಾಹಸ!

ಸಾರಾಂಶ

ರೈಲುಗಳ ಮೇಲೆ ಕಾರ್ಗಿಲ್‌ ಯುದ್ಧದ ಸಾಹಸ ಚಿತ್ರಗಳು| ವಿನೈಲ್‌ ಸ್ಟಿಕ್ಕರ್‌ ಅಂಟಿಸಿ ಜನರಿಗೆ ಮಾಹಿತ| ವೀರಯೋಧರ ಸ್ಮರಣಾರ್ಥ ಈ ಕಾರ್ಯ

ನವದೆಹಲಿ[ಜು.16]: ಕಾರ್ಗಿಲ್‌ ವಿಜಯೋತ್ಸವದ 20 ನೇ ವರ್ಷಾಚರಣೆ ಅಂಗವಾಗಿ ಮತ್ತು ಯುದ್ಧದ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ನೀಡಲು ದೆಹಲಿ- ವಾರಾಣಸಿ ಕಾಶಿ ವಿಶ್ವನಾಥ ಎಕ್ಸ್‌ಪ್ರೆಸ್‌ ರೈಲಿಗೆ ಕಾರ್ಗಿಲ್‌ ಯುದ್ಧದ ಘಟನೆಗಳು ಮತ್ತು ಸೈನಿಕರ ಸಾಹಸಮಯ ಚಿತ್ರಗಳನ್ನು (ವಿನೈಲ್‌ ಸ್ಟಿಕ್ಕರ್‌)ಅಂಟಿಸಲಾಗಿದೆ.

ಕೇಂದ್ರ ಆರೋಗ್ಯ ಖಾತೆ ಸಚಿವ ಹರ್ಷವರ್ಧನ್‌, ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್‌ ಅಂಗಡಿ, ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಅವರು ಹಸಿರು ನಿಶಾನೆ ತೋರಿಸುವ ಮೂಲಕ ರೈಲು ಓಡಾಟಕ್ಕೆ ಸೋಮವಾರ ಚಾಲನೆ ನೀಡಿದರು. ಈ ವೇಳೆ ಕಾರ್ಗಿಲ್‌ ಯುದ್ಧದಲ್ಲಿ ವೀರಮರಣ ಹೊಂದಿದ ಸೈನಿಕರ ಕುಟುಂಬಸ್ಥರು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಕಾರ್ಗಿಲ್‌ ಯುದ್ಧದ ರೋಚಕ ಘಟನೆಗಳು ಮತ್ತು ಸೈನಿಕರ ಸಾಹಸಗಳನ್ನು ಜನಸಾಮಾನ್ಯರಿಗೆ ತಿಳಿಸಲು ಬ್ರಹ್ಮಪುತ್ರ ಮೇಲ್‌, ಸೀಮಾಂಚಲ್‌ ಎಕ್ಸಪ್ರೆಸ್‌, ಗೊಂಡ್ವಾನಾ ಎಕ್ಸಪ್ರೆಸ್‌, ಗೋವಾ ಸಂಪರ್ಕ ಕ್ರಾಂತಿ ಎಕ್ಸಪ್ರೆಸ್‌ ಸೇರಿ 10 ರೈಲುಗಳಿಗೆ ಈ ರೀತಿಯಾದ ಚಿತ್ರ ಅಂಟಿಸಲಾಗುತ್ತಿದೆ. ಈ ಪೈಕಿ ಕಾಶಿ ವಿಶ್ವನಾಥ ಎಕ್ಸಪ್ರೆಸ್‌ ರೈಲು ಮೊದಲನೆಯದಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಅತ್ಯಂತ ಕಡಿಮೆ ಬೆಲೆಯ ಹ್ಯಾಪಿ ನ್ಯೂ ಇಯರ್‌ ಪ್ಲ್ಯಾನ್‌ ರಿಲೀಸ್‌ ಮಾಡಿದ ಜಿಯೋ!
ಪೊಲೀಸ್‌ ಚೆಕಿಂಗ್‌ ವೇಳೆ ಹೋಟೆಲ್‌ ಬಾಲ್ಕನಿಯಿಂದ ಹಾರಿದ ಬೆಂಗಳೂರು ಮಹಿಳೆ, ಸ್ಥಿತಿ ಗಂಭೀರ!