ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ, ಸೂಪರ್ ಪಾಯಿಂಟ್ಸ್

Published : Sep 27, 2019, 09:42 PM ISTUpdated : Sep 27, 2019, 10:09 PM IST
ವಿಶ್ವ ಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮೋದಿ ಭಾಷಣ, ಸೂಪರ್ ಪಾಯಿಂಟ್ಸ್

ಸಾರಾಂಶ

ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ಮೋದಿ ಭಾಷಣ/ ಭಯೋತ್ಪಾದನೆ ವಿರುದ್ಧ ದೇಶದ ಸಮರ ನಿರಂತರ/ 2019ರ ಭಾರತದ ಚುನಾವಣೆ ಇಡೀ ಜಗತ್ತಿಗೆ ಮಾದರಿ/ ಅತಿದೊಡ್ಡ ಪ್ರಜಾಪ್ರಭುತ್ವದ ರಾಷ್ಟ್ರ ಎನ್ನಲು ಹೆಮ್ಮೆ ಇದೆ.

ನ್ಯೂಯಾರ್ಕ್[ಸೆ. 27]  ಭಯೋತ್ಪಾದನೆ ಮತ್ತು ಉಗ್ರ ಚಟುವಟಿಕೆ ವಿರುದ್ಧ ಇಡೀ ಪ್ರಪಂಚ ಒಂದಾಗಬೇಕು ಎಂದು ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಅಭಿವೃದ್ಧಿ, ಶಾಂತಿ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ವಿಶ್ವ ವೇದಿಕೆಯಲ್ಲಿ ಭಾರತದ ಪಾತ್ರ ಹೇಗಿದೆ? ಉಳಿದ ದೇಶಗಳು ಯಾವ ಪಾತ್ರ ನಿರ್ವಹಿಸಬೇಕು ಎಂಬುದನ್ನು ಹೇಳಿದ್ದಾರೆ.

ಬಡತನ ನಿರ್ಮೂಲನೆ, ಪ್ಲಾಸ್ಟಿಕ್ ಗೆ ಕಡಿವಾಣ, ಜಾಗತಿಕ ತಾಪಮಾನ ನಿಯಂತ್ರಣ ಮತ್ತು ಭಯೋತ್ಪಾದನೆ ಸೇರಿದಂತೆ ಹಲವಾರು ವಿಷಯಗಳ ಮೇಲೆ ಮಾತನಾಡಿದ ಪ್ರಧಾನಿ ಮೋದಿ ಅವರು ವಿಶ್ವಸಂಸ್ಥೆಯಲ್ಲಿ ರಾಷ್ಟ್ರನಾಯಕರ ಗಮನ ಸೆಳೆಯುವ ಪ್ರಯತ್ನವನ್ನು ಮಾಡಿದರು.

ನೀವೆಲ್ಲಾ ಭಾರತಕ್ಕೆ ಬಂದ್ರೆ 4D ತೋರಿಸ್ತಿನಿ: ಪ್ರಧಾನಿ ಮೋದಿ!...

ಮೋದಿ ಭಾಷಣದ ಹೈಲೈಟ್ಸ್

* ಭಯೋತ್ಪಾದನೆ ಎಂಬುದು ವಿಶ್ವಸಂಸ್ಥೆ ಸ್ಥಾಪನೆಗೆ ಕಾರಣವಾದ ಆಶೋತ್ತರಗಳಿಗೂ ವಿರುದ್ಧ. ಭಾರತ ಉಗ್ರ ಚಟುವಟಿಕೆ ವಿರುದ್ಧ ಸದಾ ಹೋರಾಡುತ್ತಾ ಬಂದಿದ್ದು ಮುಂದಿನ ದಿನಗಳಲ್ಲಿ ನಮ್ಮ ನಿಲುವು ಮತ್ತಷ್ಟು ಗಟ್ಟಿಯಾಗಲಿದೆ.

* ಸ್ವಾಮಿ ವಿವೇಕಾನಂದರು ಧರ್ಮ ಸಾಮರಸ್ಯ ಮತ್ತು ಶಾಂತಿಯ ಸಂದೇಶವನ್ನು ಇಡಿ ಜಗತ್ತಿಗೆ ನೀಡಿದ್ದರು. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ ಇಂದಿಗೂ ಸಹ ಅದೇ ಸಂದೇಶದಲ್ಲಿಯೆ ಮುನ್ನಡೆಯುತ್ತಿದೆ.

* ಭಾರತ ಜಗತ್ತಿಗೆ ಯುದ್ಧದ ಬದಲು ಬುದ್ಧನನ್ನು ಕೊಟ್ಟಿದೆ ಎನ್ನುತ್ತ ಭಯೋತ್ಪಾದನೆಯ ವಿರುದ್ಧದ ಭಾರತ ನಿಲುವನ್ನು ವಿಶ್ವವೇದಿಕೆಯಲ್ಲಿ ಬಲವಾಗಿ ಪ್ರತಿಪಾದಿಸಿದರು.

ಪ್ರಧಾನಿ ಮೋದಿ ‘ಫಾದರ್ ಆಫ್ ಇಂಡಿಯಾ’ ಇದ್ದಂಗೆ ಎಂದ ಟ್ರಂಪ್!...

* ನಾನು ಮಾತನಾಡುತ್ತಿರುವುದು ಭಾರತದ 130 ಕೋಟಿ ಪ್ರಜೆಗಳ ಪರವಾಗಿ. ಇಡಿ ಜಗತ್ತು ನಮ್ಮ ಕಡೆ ನೋಡುತ್ತಿರುವುದು ಸಂತಸ ತಂದಿದೆ.

* ಭಾರತದಲ್ಲಿ ನಡೆದ 2019ರ ಚುನಾವಣೆ ಒಂದು ದೊಡ್ಡ ಮೈಲುಗಲ್ಲು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸಿದ್ದು ಇಡೀ ಜಗತ್ತಿಗೆ ಮಾದರಿ.

*ಪರಿಸರ ಸಂರಕ್ಷಣೆಯಲ್ಲಿ ದೊಡ್ಡ ದೊಡ್ಡ ಹೆಜ್ಜೆ ಇಟ್ಟಿದ್ದೇವೆ. ಜಾಗತಿಕ ತಾಪಮಾನ ಏರಿಕೆ ತಡೆಯಲ್ಲಿ ಮೊದಲಿನಿಂದಲೂ ಮುಂದಿದ್ದೇವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಟಾಕ್ಸಿಕ್ ಸಿನಿಮಾ ರಿಲೀಸ್ ಸಮೀಪಿಸುತ್ತಿದ್ದಂತೆ ಐಟಿ ಪ್ರಕರಣದಲ್ಲಿ ನಟ ಯಶ್‌ಗೆ ಹೈಕೋರ್ಟ್ ರಿಲೀಫ್
ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಪೊಲೀಸ್ ಸಿಬ್ಬಂದಿಗೆ ಡಿಜಿ ಐಜಿಪಿ ಡಾ ಸಲೀಂ ಖಡಕ್ ಎಚ್ಚರಿಕೆ