ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಭಾರತದ ಪೋರನ ದಾಖಲೆ

By Suvarna Web DeskFirst Published Jan 27, 2018, 9:35 AM IST
Highlights

ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ದಶಕದ ಬಳಿಕ ಅತಿಹೆಚ್ಚು ಅಂಕಗಳನ್ನು ಪಡೆದ ಅತಿ ಕಿರಿಯ ಎಂಬ ಕೀರ್ತಿಗೆ ಭಾರತ ಮೂಲದ 10 ವರ್ಷದ ಬಾಲಕ ಪಾತ್ರನಾಗಿದ್ದಾನೆ. ಬ್ರಿಟನ್‌ನಲ್ಲಿರುವ ಮಹುಲ್ ಗರ್ಗ್ ಐಕ್ಯೂ ಪರೀಕ್ಷೆ ಎದುರಿಸಿ 162 ಅಂಕಗಳನ್ನು ಪಡೆದಿದ್ದಾನೆ.

ಲಂಡನ್: ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ದಶಕದ ಬಳಿಕ ಅತಿಹೆಚ್ಚು ಅಂಕಗಳನ್ನು ಪಡೆದ ಅತಿ ಕಿರಿಯ ಎಂಬ ಕೀರ್ತಿಗೆ ಭಾರತ ಮೂಲದ 10 ವರ್ಷದ ಬಾಲಕ ಪಾತ್ರನಾಗಿದ್ದಾನೆ. ಬ್ರಿಟನ್‌ನಲ್ಲಿರುವ ಮಹುಲ್ ಗರ್ಗ್ ಐಕ್ಯೂ ಪರೀಕ್ಷೆ ಎದುರಿಸಿ 162 ಅಂಕಗಳನ್ನು ಪಡೆದಿದ್ದಾನೆ.

ಈ ಮೂಲಕ ಐಕ್ಯೂನಲ್ಲಿ ಅಗ್ರ ಶ್ರೇಣಿ ಪಡೆದಿದ್ದ ವಿಜ್ಞಾನಿಗಳಾದ ಐನ್‌ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಅವರುಗಳಿಗಿಂತ ಮಹುಲ್ ಎರಡು ಅಂಕಗಳನ್ನು ಹೆಚ್ಚು ಪಡೆದಿದ್ದಾನೆ.

ಕಳೆದ ವರ್ಷ ನಡೆದ ಮೆನ್ಸಾ ಐಕ್ಯೂ ಪರೀಕ್ಷೆಯಲ್ಲಿ ಮಹುಲ್ ಅವರ ಹಿರಿಯ ಸಹೋದರ ಧ್ರುವ ಗರ್ಗ್(13) ಸಹ 162 ಅಂಕಗಳನ್ನು ಪಡೆದಿದ್ದಾನೆ.

click me!