ದುಬೈ: ಮಸೀದಿ ನಿರ್ಮಿಸಿ 800 ಮಂದಿಗೆ ಇಫ್ತಾರ್ ಆಯೋಜಿಸುವ ಭಾರತೀಯ

By Web DeskFirst Published May 10, 2019, 12:30 PM IST
Highlights

ದುಬೈನಲ್ಲಿ  ಮಸೀದಿ ನಿರ್ಮಾಣ ಮಾಡಿ ಭಾರತೀಯ ಮೂಲದ ವ್ಯಕ್ತಿಯೋರ್ವರು ನಿತ್ಯ 800 ಮಂದಿಗೆ ಇಫ್ತಾರ್ ಆಯೋಜನೆ ಮಾಡುತ್ತಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಉದಾರ ಸೇವೆ ನಡೆಸುತ್ತಿದ್ದಾರೆ.

ದುಬೈ :  ಭಾರತೀಯ ಮೂಲಕ  ದುಬೈ ಬ್ಯುಸಿನೆಸ್ ಮನ್ ಓರ್ವರು ರಂಜಾನ್ ಸಂದರ್ಭದಲ್ಲಿ ಸುದ್ದಿಯಾಗಿದ್ದಾರೆ. 

ಇದಕ್ಕೆ ಕಾರಣ ತಾವು ಬಾಡಿಗೆಗ ನೀಡಿದ ಕಟ್ಟದಲ್ಲಿ ನಡೆಯುವ  53 ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ ಮುಸ್ಲಿಮರಿಗೆ ಮಸೀದಿ ಕಟ್ಟಿಸಿಕೊಟ್ಟಿದ್ದು,  800 ಸಿಬ್ಬಂದಿಗೆ ನಿತ್ಯ ಇಫ್ತಾರ್ ಆಯೋಜಿಸುತ್ತಿದ್ದಾರೆ. 

ಸಾಜಿ ಚೆರಿಯನ್ ಎಂಬ 49 ವರ್ಷದ ಕ್ರಿಶ್ಚಿಯನ್ ವ್ಯಕ್ತಿ ಕೇರಳದ ಕನ್ಯಾ ಕುಮಾರಿಯಿಂದ ಕೇಲವೇ ರುಗಳನ್ನಿಟ್ಟುಕೊಂಡು 2003ರಲ್ಲಿ ದುಬೈಗೆ ತೆರಳಿದ್ದರು. 

ಅಲ್ಲಿ ತಮ್ಮದೇ ಆದ ಹಲವು ವ್ಯವಹಾರ ಆರಂಭಿಸಿ ಹಲವರಿಗೆ ಉದ್ಯೋಗ ಒದಗಿಸಿದ್ದಾರೆ. ಪವಿತ್ರ ರಂಜಾನ್ ಮಾಸದಲ್ಲಿ ಸಾಜಿ ನಿತ್ಯ ತಮ್ಮದೇ ಆದ ಕಟ್ಟಡದಲ್ಲಿ ಇಫ್ತಾರ್ ಆಯೋಜಿಸುತ್ತಿದ್ದಾರೆ. 

ಸಾಜಿ ನಿರ್ಮಾಣ ಮಾಡಿದ ಮಸೀದಿ ಕಳೆದ ವರ್ಷ ಪೂರ್ಣಗೊಂಡಿದ್ದು, ಇಲ್ಲಿ ನಿತ್ಯ ಹಲವರು ಸೇರಿ ಪ್ರಾರ್ಥನೆ ಸಲ್ಲಿಸಲಾಗುತ್ತಿದೆ. 

ಹಲವು ದೇಶಗಳಿಂದ ದುಬೈಗೆ ಉದ್ಯೋಗದ  ಹಲವು ದೇಶಗಳಿಂದ ತೆರಳಿರುವ ಮುಸ್ಲಿಮರು ಇಫ್ತಾರ್ ಕೂಟದಲ್ಲಿ ಪಾಲ್ಗೊಳ್ಳುತ್ತಾರೆ. ನಿತ್ಯ 800 ಮಂದಿಗರೆ ಕೂಟ ಆಯೋಜನೆ ಮಾಡಲಾಗುತ್ತದೆ.

click me!