‘ಮೈತ್ರಿ ಬಣದಲ್ಲಿ 20 ಅತೃಪ್ತ ಶಾಸಕರು : ಬಿಜೆಪಿಗೆ ಹೆಚ್ಚಲಿದೆ ಸಂಖ್ಯಾಬಲ’

By Web DeskFirst Published May 10, 2019, 11:15 AM IST
Highlights

ಮೈತ್ರಿ ಪಕ್ಷದಲ್ಲಿ 20 ಅತೃಪ್ತ  ಶಾಸಕರಿದ್ದು, ಚುನಾವಣೆ ಫಲಿತಾಂಶದ ಬಳಿಕ ರಾಜ್ಯ ರಾಜಕೀಯದಲ್ಲಿ ಮಹತ್ವದ ಬದಲಾವಣೆ ಆಗಲಿದೆ ಎಂದು ಬಿಜೆಪಿ ನಾಯಕ ಭವಿಷ್ಯ ನುಡಿದಿದ್ದಾರೆ. 

ಹುಬ್ಬಳ್ಳಿ :  ರಾಜ್ಯದ ಎರಡು ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯುತ್ತಿದ್ದು,  ಭ್ರಷ್ಟಾಚಾರದ ಹಣದಿಂದ ಗೆಲುವು ಪಡೆಯುವುದು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಮೈತ್ರಿ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಇದೇ ವೇಳೆ ಡಿ.ಕೆ.ಶಿವಕುಮಾರ್ ವಿರುದ್ಧವೂ ವಾಗ್ದಾಳಿ ನಡೆಸಿದ್ದು, ಅವರು ಬೇಜವಾಬ್ದಾರಿ ಹೇಳಿಕೆ ನೀಡುವುದು ನಿಲ್ಲಿಸಬೇಕು ಎಂದರು. ಅಲ್ಲದೇ ಮೈತ್ರಿ ಸರ್ಕಾರದಲ್ಲಿ ಈಗಾಗಲೇ ಆಂತರಿಕ ಕಚ್ಚಾಟ ಆರಂಭವಾಗಿದ್ದು, ಮತ್ತೆ ಅಪ್ಪ ಮಗ ರೆಸಾರ್ಟ್ ಸೇರಿದ್ದಾರೆ. ಸೋಲಿನ ಭಯದಿಂದ ದೇವೇಗೌಡ, ಕುಮಾರಸ್ವಾಮಿ ಕಂಗಾಲಾಗಿದ್ದಾರೆ ಎಂದರು. 

ಮಂಡ್ಯದಲ್ಲಿ ನಿಖಿಲ್ ಗೆ ಈಗ ಹೊಸ ಜವಾಬ್ದಾರಿ

ಇನ್ನು ರಾಜ್ಯದಲ್ಲಿ ಉಪ ಚುನಾವಣೆ ಬಳಿಕ ಬಿಜೆಪಿ ಸಂಖ್ಯಾಬಲ 106 ಆಗಲಿದೆ. ಮೂವರು ಪಕ್ಷೇತರರು ಬೆಂಬಲ ನೀಡುತ್ತಾರೆ. ಈಗಾಗಲೇ ರಾಜ್ಯದ ಮೈತ್ರಿ ಪಕ್ಷಗಳ 20ಕ್ಕೂ ಹೆಚ್ಚು ಶಾಸಕರು ಅತೃಪ್ತಿ ಹೊಂದಿದ್ದಾರೆ.  ಇದರಿಂದ ಬಿಜೆಪಿ ಸರ್ಕಾರ ಮತ್ತೆ ಅಸ್ತಿತ್ವಕ್ಕೆ ಬರುವ ವಾತಾವರಣ ನಿರ್ಮಾಣವಾಗುತ್ತಿದೆ. 

 ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಯಡಿಯೂರಪ್ಪ ಭರವಸೆ ಮಾತನಾಡಿದರು. 

click me!