ಮೇಡ್ ಇನ್ ಇಂಡಿಯಾ ಗನ್’ಗಳನ್ನು ತಿರಸ್ಕರಿಸಿದ ಸೇನೆ!

By Suvarna Web DeskFirst Published Jun 23, 2017, 4:11 PM IST
Highlights

ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಭಾರತದಲ್ಲೇ ತಯಾರಿಸಲಾದ ರೈಫಲ್’ಗಳನ್ನುಖರೀದಿಸಲು ನಿರಾಕರಿಸಿದೆ.  ಈ ರೀತಿ ಸ್ವದೇಶಿ ನಿರ್ಮಿತ ರೈಫಲ್’ಗಳನ್ನು ಸೇನೆಯು ತಿರಸ್ಕರಿಸುತ್ತಿರುವುದು ಸತತ ಎರಡನೇ ಬಾರಿಯಾಗಿದೆ.

ನವದೆಹಲಿ: ಕಳಪೆ ಗುಣಮಟ್ಟದ ಹಿನ್ನೆಲೆಯಲ್ಲಿ ಭಾರತೀಯ ಸೇನೆಯು ಭಾರತದಲ್ಲೇ ತಯಾರಿಸಲಾದ ರೈಫಲ್’ಗಳನ್ನುಖರೀದಿಸಲು ನಿರಾಕರಿಸಿದೆ.  ಈ ರೀತಿ ಸ್ವದೇಶಿ ನಿರ್ಮಿತ ರೈಫಲ್’ಗಳನ್ನು ಸೇನೆಯು ತಿರಸ್ಕರಿಸುತ್ತಿರುವುದು ಸತತ ಎರಡನೇ ಬಾರಿಯಾಗಿದೆ.

ಸೇನೆಗಾಗಿ 7.62X51 mmನ ರೈಫಲ್’ಗಳನ್ನು ಈಶಪೋರ್’ನಲ್ಲಿರುವ ರೈಫಲ್ ಫ್ಯಾಕ್ಟರಿ  ತಯಾರಿಸಿದ್ದು, ಅದರ ಗುಂಡು ಹಾರಿಸುವ ಕ್ಷಮತೆ ಕಳಪೆಯಾಗಿದೆ ಎನ್ನಲಾಗಿದೆ. ಕಳೆದ ವಾರ ನಡೆದ ಫೈರಿಂಗ್ ಟೆಸ್ಟ್’ನಲ್ಲಿ ಅದು ಅರ್ಹತೆ ಪಡೆಯುವಲ್ಲಿ ವಿಫಲವಾಗಿದೆ ಎನ್ನಲಾಗಿದೆ.

ರೈಫಲ್’ಗಳಲ್ಲಿ ಬಹಳಾರು ಕುಂದುಕೊರತೆಗಳಿದ್ದವು ಹಾಗೂ ಸೇನೆಯ ಬಳಕೆಗೆ ಅವುಗಳನ್ನು ಸಂಪೂರ್ಣವಾಗಿ ಮರುವಿನ್ಯಾಸಗೊಳಿಸುವ ಅಗತ್ಯವಿದೆ ಎಂದು ಹೇಳಲಾಗಿದೆ.

ಕಳೆದ ವರ್ಷ ಸೇನೆಯು ಸ್ವದೇಶಿ ನಿರ್ಮಿತ 5.56mm ಎಕ್ಸ್-ಕ್ಯಾಲಿಬರ್ ಗನ್’ಗಳನ್ನು ಕಳಪೆ ಗುಣಮಟ್ಟದಾಧಾರದಲ್ಲಿ ತಿರಸ್ಕರಿಸಿತ್ತು.

(ಸಾಂದರ್ಭಿಕ ಚಿತ್ರ)

 

click me!