ಕಳ್ಳನೋಟು ಪ್ರಿಂಟ್ ಮಾಡುತ್ತಿದ್ದ ಬಿಜೆಪಿ ನಾಯಕನ ಬಂಧನ

By Suvarna Web DeskFirst Published Jun 23, 2017, 3:33 PM IST
Highlights

ಮನೆಯಲ್ಲೇ ರೂ.2000 ಹಾಗೂ ರೂ.500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದ ಬಿಜೆಪಿ ನಾಯಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ. ಬಿಜೆಪಿ  ಯುವ ಮೋರ್ಚಾದ ಅಧ್ಯಕ್ಷನಾಗಿರುವ ರಾಜೇಶ್ ಎರ್ಚೆರಿ ಎಂಬಾತ ತ್ರಿಶೂರ್’ನಲ್ಲಿ ಮನೆಯೊಂದರಲ್ಲಿ ಪ್ರಿಂಟಿಂಗ್ ಯಂತ್ರವನ್ನಿಟ್ಟುಕೊಂಡು ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಎನ್ನಲಾಗಿದೆ.

ತಿರುವನಂತಪುರಂ: ಮನೆಯಲ್ಲೇ ರೂ.2000 ಹಾಗೂ ರೂ.500 ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದ ಬಿಜೆಪಿ ನಾಯಕನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಬಿಜೆಪಿ  ಯುವ ಮೋರ್ಚಾದ ಅಧ್ಯಕ್ಷನಾಗಿರುವ ರಾಜೇಶ್ ಎರ್ಚೆರಿ ಎಂಬಾತ ತ್ರಿಶೂರ್’ನಲ್ಲಿ ಮನೆಯೊಂದರಲ್ಲಿ ಪ್ರಿಂಟಿಂಗ್ ಯಂತ್ರವನ್ನಿಟ್ಟುಕೊಂಡು ನೋಟುಗಳನ್ನು ಪ್ರಿಂಟ್ ಮಾಡುತ್ತಿದ್ದ ಎನ್ನಲಾಗಿದೆ.

 

ಪೊಲೀಸರು ಆತನ ಮನೆಗೆ ದಾಳಿ ಮಾಡಿದ ಸಂದರ್ಭದಲ್ಲಿ ಕಂಪ್ಯೂಟರ್, ಪ್ರಿಂಟರ್, ಮಸಿ, ಹಾಳೆಗಳು ಹಾಗೂ ರೂ. 1,37, 590 ಮೌಲ್ಯದ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ, ಅವುಗಳಲ್ಲಿ ರೂ. 20, ರೂ. 50, ರೂ. 100 ಸೇರಿದಂತೆ ಹೊಸದಾಗಿ ಬಿಡುಗಡೆಯಾಗಿರುವ ರೂ.500 ಹಾಗೂ 2000 ಮುಖಬೆಲೆಯ ಕಳ್ಳನೋಟುಗಳು ಕೂಡಾ ಇವೆ ಎಂದು ತ್ರಿಶೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್. ವಿಜಯ್ ಕುಮಾರ್ ಹೇಳಿದ್ದಾರೆ.

ಅಕ್ರಮ ಹಣದ ವ್ಯವಹಾರ ಹಾಗೂ ಲೇವಾದೇವಿ ಮಾಡುವವರ ವಿರುದ್ಧ ಕೇರಳ ಪೊಲೀಸರು ಆಪರೇಶನ್ ಕುಬೇರ ನಡೆತ್ತಿದ್ದಾರೆ. ಆ ಸಂದರ್ಭದಲ್ಲಿ ಜನರಿಗೆ ಬಡ್ಡಿಯಾಧಾರದಲ್ಲಿ ಸಾಲ ನೀಡುತ್ತಿದ್ದ ರಾಜೇಶ್ ಮನೆ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ.

ನೋಟು ಮುದ್ರಿಸಲು ಆತ ತನ್ನ ಮನೆಯ ಎರಡನೇ ಅಂತಸ್ತಿನಲ್ಲಿರುವ ಕೋಣೆಯನ್ನು ವಿಶೇಷ ರೀತಿಯಲ್ಲಿ ವಿನ್ಯಾಸ ಮಾಡಿಕೊಂಡಿದ್ದನು ಎಂದು ಹೇಳಲಾಗಿದೆ.

(ಸಾಂದರ್ಭಿಕ ಚಿತ್ರ)

click me!