
ನವದೆಹಲಿ(ಫೆ.02): ಅಮೆರಿಕದಲ್ಲಿ ಕ್ರಿಕೆಟ್ ಆಟವನ್ನು ಜನಪ್ರಿಯಗೊಳಿಸಲು ಇಂಡೋ-ಅಮೆರಿಕನ್ ನಿವಾಸಿ ಜಿಗ್ನೇಶ್ ಪಾಂಡ್ಯ ಸರಿಸುಮಾರು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ ಅಮೆರಿಕಾದ್ಯಂತ ಎಂಟು ಕ್ರಿಕೆಟ್ ಕ್ರೀಡಾಂಗಣಗಳನ್ನು ನಿರ್ಮಿಸಲು ಮುಂದಾಗಿದ್ದಾರೆ.
ಯುಎಸ್'ನಲ್ಲಿರುವ ಗುಜರಾತ್ ಮೂಲದ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಪಾಂಡ್ಯ, ನ್ಯೂಯಾರ್ಕ್, ನ್ಯೂಜೆರ್ಸಿ, ವಾಷಿಂಗ್ಟನ್ ಡಿಸಿ, ಜಾರ್ಜಿಯಾ, ಫ್ಲೋರಿಡಾ, ಟೆಕ್ಸಾಸ್, ಇಲಿನಾಯಿಸ್ ಮತ್ತು ಕ್ಯಾಲಿಫೋರ್ನಿಯಾದಲ್ಲಿ ಸರಿಸುಮಾರು 26 ಸಹಸ್ರ ಪ್ರೇಕ್ಷಕ ಸಾಮರ್ಥ್ಯದ ಕ್ರೀಡಾಂಗಣಗಳನ್ನು ನಿರ್ಮಿಸಲು ರೂಪುರೇಷೆ ಸಿದ್ಧಪಡಿಸಿದ್ದಾರೆ. ಈ ಕ್ರೀಡಾಂಗಣಗಳು ಆಧುನಿಕ ಜೀವನ ಶೈಲಿಗೆ ಅಗತ್ಯವಿರುವ ಶಾಪಿಂಗ್ ಸೆಂಟರ್, ಮನರಂಜನಾ ಕೇಂದ್ರಗಳನ್ನೂ ಒಳಗೊಳ್ಳಲಿವೆ ಎಂದು ತಿಳಿಸಿದ್ದಾರೆ.
ಇದರೊಂದಿಗೆ ಅಮೆರಿಕದಲ್ಲಿ 17,800 ಹೊಸ ಉದ್ಯೋಗಾವಕಾಶಕ್ಕೂ ಅವರು ಮಾರ್ಗ ರೂಪಿಸಿದ್ದಾರೆಂದು ಪಿಟಿಐ ವರದಿ ಮಾಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.