ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ತಲೈವಾ ರಜನಿಕಾಂತ್!

Published : Feb 02, 2017, 02:42 PM ISTUpdated : Apr 11, 2018, 12:44 PM IST
ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ತಲೈವಾ ರಜನಿಕಾಂತ್!

ಸಾರಾಂಶ

ಸೂಪರ್ ಸ್ಟಾರ್ ರಜನಿ ಕಾಂತ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇದೀಗ, ಈ ಸ್ಟೈಲ್ ಕಿಂಗ್ ರಾಜಕೀಯಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಈ ಮೂಲಕ ತಮ್ಮ ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ತಯಾರಾಗಿದ್ದಾರೆ.

ಬೆಂಗಳೂರು (ಫೆ.02): ಸೂಪರ್ ಸ್ಟಾರ್ ರಜನಿ ಕಾಂತ್ ಯಾರಿಗೆ ಗೊತ್ತಿಲ್ಲ ಹೇಳಿ? ಭಾರತೀಯ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದವರು. ಇದೀಗ, ಈ ಸ್ಟೈಲ್ ಕಿಂಗ್ ರಾಜಕೀಯಕ್ಕೆ ಎಂಟ್ರಿ ಕೊಡಲು ತಯಾರಿ ನಡೆಸಿದ್ದಾರೆ. ಈ ಮೂಲಕ ತಮ್ಮ ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡಲು ತಯಾರಾಗಿದ್ದಾರೆ.

ತಮಿಳುನಾಡಿನ ರಾಜಕೀಯದ ಇತಿಹಾಸ ಬಲು ರೋಚಕ. ಎಂ.ಜಿ.ಆರ್ ನಿಂದ ಮೊದಲಾಗಿ ಇತ್ತೀಚಿಗೆ ನಿಧನರಾದ ಜೆ.ಜಯಲಲಿತಾವರೆಗಿನ ಆಡಳಿತ ಇತಿಹಾಸದ ಪುಟ ಸೇರಿಹೋಗಿದೆ. ಇದೀಗ, ಇದೇ ಹಾದಿಯಲ್ಲಿ ಮತ್ತೊಬ್ಬ ಚಿತ್ರರಂಗದ ದಿಗ್ಗಜ ರಾಜಕೀಯ ಪರ್ವದ ಆರಂಭಕ್ಕೆ ಮುನ್ನುಡಿ ಬರೆಯಲು ಹೊರಟಿದ್ದಾರೆ ಸ್ಟೈಲ್ ಕಿಂಗ್ ರಜನಿಕಾಂತ್.

ಹೌದು, ರಜನಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಂತೆ ಎಂಬ ಸುದ್ದಿ ದಶಕಗಳಿಂದಲೇ ಕೇಳಿಬರುತ್ತಿತ್ತು. ಇತ್ತೀಚಿಗೆ ನಿಧನರಾದ ತಮ್ಮ ಹಿತೈಷಿ, ತುಘಲಕ್ ಪತ್ರಿಕೆಯ ಸಂಪಾದಕ ಚೋ.ರಾಮಸ್ವಾಮಿಯವರು ರಜನಿಗೆ ರಾಜಕೀಯ ಪ್ರವೇಶಿಸುವಂತೆ ಹೇಳುತ್ತಲೇ ಬಂದಿದ್ದರು. ಆದರೆ, ಅದಕ್ಕೆ ಕಾಲ ಕೂಡಿಬಂದಿರಲಿಲ್ಲ. ಇದೀಗ ರಾಜಕೀಯ ಎಂಟ್ರಿ ಕುರಿತಂತೆ ಗಂಭೀರವಾಗಿ ಯೋಚಿಸಿರುವ ತಲೈವಾ ತಮ್ಮ ಪೊಲಿಟಿಕಲ್ ಜರ್ನಿ ಆರಂಭಿಸುವ ನಿರ್ಧಾರಕ್ಕೆ ಬಂದಂತಿದೆ.

ರಜನಿ ರಾಜಕೀಯ ಪ್ರವೇಶಕ್ಕೆ ಈ ಹಿಂದಿನಿಂದಲೇ ಭಾರಿ ವಿರೋಧಗಳು ಕೇಳಿಬರುತ್ತಲೇ ಇದೆ. ಇತ್ತೀಚಿಗಷ್ಟೆ ನಟ ಹಾಗೂ AISMK ಪಕ್ಷದ ಸ್ಥಾಪಕ ಶರತ್ ಕುಮಾರ್ ರಜನಿ ವಿರುದ್ಧ ಹರಿಹಾಯ್ದಿದ್ದರು. ಒಂದು ವೇಳೆ ರಜನಿ ರಾಜಕೀಯಕ್ಕೆ ಎಂಟ್ರಿ ಕೊಟ್ರೆ ಅದನ್ನ ಮೊದಲಿಗೆ ವಿರೋಧಿಸುವವನು ನಾನೇ ಎಂದು ಬಹಿರಂಗವಾಗಿ ಹೇಳಿದ್ದರು. ಇದನ್ನೇ, ಚಾಲೆಂಜ್ ಆಗಿ ತೆಗೆದುಕೊಂಡಿರುವ ರಜನಿಕಾಂತ್, ವಿರೋಧಿಗಳಿಗೆ ಸೆಡ್ಡು ಹೊಡೆಯಲು ತಯಾರಾಗಿದ್ದಾರೆ.

ಒಟ್ಟಿನಲ್ಲಿ, ಸೂಪರ್ ಸ್ಟಾರ್ ರಜನಿಕಾಂತ್ ಪೊಲಿಟಿಕ್ಸ್ ಗೆ ಎಂಟ್ರಿ ಕೊಡ್ತಾರೆ ಎಂಬ ಸುದ್ದಿ ಮತ್ತೆ ಸದ್ದು ಮಾಡ್ತಿದೆ. ರಜನಿ ತಮ್ಮದೇ ಪಕ್ಷ ಕಟ್ಟಿ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೋ ಅಥವಾ ಯಾವುದಾದರೂ ಪಕ್ಷಕ್ಕೆ ಸೇರುತ್ತಾರಾ ಕಾದು ನೋಡಬೇಕು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಿಸೇರಿಯನ್‌ ಹೆರಿಗೆ ಹೆಚ್ಚಳ ಏಕೆ ಎಂದು ತಿಳಿಯಲು ಆಡಿಟ್‌: ಸಚಿವ ದಿನೇಶ್‌ ಗುಂಡೂರಾವ್
ಮಂಗಳಮುಖಿಯರಿಂದ ಯುವಕನ ಅಪಹರಣ; ಶಸ್ತ್ರಚಿಕಿತ್ಸೆ ನಡೆಸಿ ಪರಿವರ್ತನೆಗೆ ಯತ್ನ?