ನನ್ಗೆ ತಿಲಕ ಸಹವಾಸ ಬೇಡವೆಂದ ಎಂ.ಬಿ.ಪಾಟೀಲ್

Published : Mar 08, 2019, 04:09 PM IST
ನನ್ಗೆ ತಿಲಕ ಸಹವಾಸ ಬೇಡವೆಂದ ಎಂ.ಬಿ.ಪಾಟೀಲ್

ಸಾರಾಂಶ

ಉದ್ದಗೆ ನಾಮ ಎಳೆದುಕೊಂಡವರನ್ನು ಕಂಡ್ರೆ ಭಯವಾಗುತ್ತೆಂಬ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಇನ್ನು ಈ ಬಗ್ಗೆ ಗೃಹ ಸಚಿವ ಎಂ.ಬಿ.ಪಾಟೀಲ್ ಪ್ರತಿಕ್ರಿಯಿಸಿದ್ದು ಹೀಗೆ.

ವಿಜಯಪುರ, [ಮಾ.08]: ಉದ್ದಗೆ ನಾಮ ಎಳೆದುಕೊಂಡವರನ್ನು ಕಂಡ್ರೆ ಭಯವಾಗುತ್ತೆಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕುರಿತು ನಾನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. 

ಮೇಲಾಗಿ ಅಂತಹ ಕಾಂಟರ್ವರ್ಸಿ ಮೈಮೇಲೆ ಹಾಕಿಕೊಳ್ಳಲು ನನಗೆ ಇಷ್ಟವಿಲ್ಲವೆಂದು ಹೇಳುವ ಮೂಲಕ ಗೃಹ ಸಚಿವ ಎಂ ಬಿ ಪಾಟೀಲ್ ತಿಲಕದ ವಿವಾದದಿಂದ ದೂರ ಸರೆದಿದ್ದಾರೆ. 

ತಿಲಕ ಇಟ್ಟವರ ಕಂಡರೆ ಭಯ, ಸಿದ್ದರಾಮಯ್ಯ ಅವರೇ ಕೊಟ್ಟ ಸ್ಪಷ್ಟನೆ

ವಿಜಯಪುರದ ತುಬಚಿ-ಬಬಲೇಶ್ವರ ಜಾಕ್ವೆಲ್ ಕಾಮಗಾರಿ ವಿಕ್ಷಿಸಿದ ಬಳಿಕ ಮಾತನಾಡಿದ ಎಂಬಿಪಿ, ತಿಲಕದ ಬಗ್ಗೆ ನನಗೆ ಗೊತ್ತಿಲ್ಲ. ಅಲ್ಲದೇ ಅನಗತ್ಯ ವಿವಾದಗಳು ನನಗೆ  ಬೇಕಿಲ್ಲ ಎಂದು ಹೇಳಿ ತಿಲಕದ ಸಹವಾಸದಿಂದ ದೂರ ಉಳಿದರು. 

ಸಿದ್ದರಾಮಯ್ಯ ವಿರುದ್ಧ 'ಸೆಲ್ಫಿ ವಿತ್ ತಿಲಕ' ಅಭಿಯಾನ!

ಉದ್ದ ನಾಮ ಇಟ್ಟವರನ್ನು ಕಂಡರೆ ನನಗೆ ಭಯ ಎಂದು ಬಿಜೆಪಿ ಬಗ್ಗೆ ವ್ಯಂಗ್ಯವಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಆರಂಭಿಸಿರುವ 'ಸೆಲ್ಫಿ ವಿತ್‌ ತಿಲಕ್‌ ' ಸಾಮಾಜಿಕ ಜಾಲ ತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುದ್ದಿನ ಶ್ವಾನಗಳಿಗಾಗಿ ಅನಿಮೇಟೆಡ್ ಸಿನಿಮಾ ಶೋ ಆಯೋಜಿಸಿದ ಥಿಯೇಟರ್: ರೆಡ್ ಕಾರ್ಪೆಟ್ ಹಾಸಿ ಸ್ವಾಗತ
ಇಂಡಿಗೋ ವಿಮಾನ ರದ್ದಾಗಿ ಪರದಾಡುತ್ತಿರುವ ಪ್ರಯಾಣಿಕರ ನೆರವಿಗೆ ಧಾವಿಸಿದ ಭಾರತೀಯ ರೈಲ್ವೆ