
ಬೆಂಗಳೂರು(ಎ.21): ಮಂತ್ರಿ ಮಾಲ್ ಗೋಡೆ ಕುಸಿದು ಅವಾಂತರ ಸೃಷ್ಟಿಯಾಗಿದ್ದು ಗೊತ್ತಿರುವ ವಿಚಾರವೇ. ಆದರೆ ಈ ಘಟನೆ ಮಾಸುವ ಮುನ್ನವೇ ಈಗ ಪ್ರತಿಷ್ಠಿತ ಬೌರಿಂಗ್ ಆಸ್ಪತ್ರೆ ಕುಸಿಯಲು ತಯಾರಾಗಿ ನಿಂತಿದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಒದಗಿಸೋ ಬೌರಿಂಗ್ ಆಸ್ಪತ್ರೆ ಈಗ ಜನರ ಪ್ರಾಣ ನುಂಗಲು ರೆಡಿಯಾಗಿದೆ. ಆ ಕುರಿತು ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ.
ಬೌರಿಂಗ್ ಆಸ್ಪತ್ರೆಗೆ ದಿನನಿತ್ಯ ನೂರಾರು ಜನ ಚಿಕಿತ್ಸೆಗಾಗಿ ಹೋಗುತ್ತಾರೆ. ಯಾವುದೇ ಅಪಘಾತಗಳಾದ್ರು ಬಡಜನರ ಮೊದಲ ಆಯ್ಕೆಯೇ ಬೌರಿಂಗ್ ಆಸ್ಪತ್ರೆ ಆಗಿರುತ್ತದೆ. ಆದರೆ ಇದೀಗ ರೋಗಿಗಳು ಬೌರಿಂಗ್ ಆಸ್ಪತ್ರೆಗೆ ಬರಲು ಭಯ ಬೀಳುತ್ತಿದ್ದಾರೆ. ಅದಕ್ಕೆ ಕಾರಣ ಆಸ್ಪತ್ರೆ ಗೋಡೆಗಳು ಪೂರ್ತಿ ಬಿರುಕು ಬಿಟ್ಟಿರುವುದು. ಅದರಲ್ಲೂ ತುರ್ತು ಚಿಕಿತ್ಸೆ ಹಾಗೂ ಮಕ್ಕಳ ವಾರ್ಡ್ ಇದಾಗಿದ್ದು ರೋಗಿಗಳು ಇನ್ನೂ ಭಯಬೀಳುವಂತಾಗಿದೆ. ಆಸ್ಪತ್ರೆಗೆ ಫಿಲ್ಟರ್ ಮರಳು ಬಳಸಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಒಂದೆಡೆ ಗೋಡೆ ಬಿರುಕು ಬಿಟ್ಟಿದ್ದರೆ, ಇನ್ನೊಂದೆಡೆ ನೀರಿನ ಪೂರೈಕೆಗೆ ಅಳವಡಿಸಿರುವ ಪೈಪ್ ಸೋರಿಕೆಯಾಗುತ್ತಿದೆ. ಹೀಗಾಗಿ ಮೇಲಿನ ಅಂತಸ್ತಿಂದ ಕೆಳ ಮಹಡಿವರೆಗೂ ನೀರಿನ ಸೋರಿಕೆಯಾಗುತ್ತಿದ್ದು ಗೋಡೆ ಇನ್ನಷ್ಟು ಬಿರುಕು ಬಿಡುತ್ತಿದೆ. ಈ ಬಗ್ಗೆ ಸ್ಥಳೀಯ ಕಾರ್ಪೋರೇಟರ್ ಕೂಡ ಕ್ರಮ ಜರುಗಿಸುವುದಾಗಿ ಹೇಳಿದ್ದಾರೆ. ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಂಡು ಬಡ ಜೀವಗಳು ಬಲಿಯಾಗುವುದನ್ನು ತಪ್ಪಿಸಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.