ಡೊನಾಲ್ಡ್ ಟ್ರಂಪ್ ನಿರ್ಣಯಕ್ಕೆ ಭಾರತದ ವಿರೋಧ

By Suvarna Web DeskFirst Published Dec 22, 2017, 12:59 PM IST
Highlights

ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ವಿವಾದಾತ್ಮಕ ನಗರ ಜೆರುಸೆಲೇಂ ಅನ್ನು ಇಸ್ರೇಲ್ ರಾಷ್ಟ್ರದ ರಾಜಧಾನಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಹಿನ್ನಡೆಯಾಗಿದೆ.

ವಿಶ್ವಸಂಸ್ಥೆ (ಡಿ.22): ಪ್ಯಾಲೆಸ್ತೀನ್ ಮತ್ತು ಇಸ್ರೇಲ್ ನಡುವಿನ ವಿವಾದಾತ್ಮಕ ನಗರ ಜೆರುಸೆಲೇಂ ಅನ್ನು ಇಸ್ರೇಲ್ ರಾಷ್ಟ್ರದ ರಾಜಧಾನಿ ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿರ್ಣಯಕ್ಕೆ ವಿಶ್ವಸಂಸ್ಥೆಯಲ್ಲಿ ಭಾರೀ ಹಿನ್ನಡೆಯಾಗಿದೆ.

ಜೆರುಸೆಲೇಂ ಅನ್ನು ಇಸ್ರೇಲ್ ರಾಜಧಾನಿಯಾಗಿ ಘೋಷಿಸಿದ ಟ್ರಂಪ್ ಅವರ ನಿರ್ಣಯದ ವಿರುದ್ಧದ ವಿಶ್ವಸಂಸ್ಥೆಯ ಗೊತ್ತುವಳಿ ಪರ ಭಾರತ ಸೇರಿ 128 ರಾಷ್ಟ್ರಗಳು ಮತ ಚಲಾಯಿಸಿವೆ. ಈ ಘೋಷಣೆಯನ್ನು ಬೆಂಬಲಿಸಿ ಕೇವಲ 9 ರಾಷ್ಟ್ರಗಳು ಮತ ಚಲಾಯಿಸಿವೆ.

ಗೊತ್ತುವಳಿ ಮೇಲಿನ ಮತ ನಿರ್ಣಯದಿಂದ 35 ರಾಷ್ಟ್ರಗಳು ದೂರ ಉಳಿದವು. ಆದರೆ ನಿರ್ಣಯವನ್ನು ಅಮೆರಿಕ ಪಾಲಿಸಲೇಬೇಕೆಂದಿಲ್ಲ. ತಮ್ಮ ಪರ ಮತ ಚಲಾಯಿಸದ ರಾಷ್ಟ್ರಗಳ ಅನುದಾನ ಕಡಿತಗೊಳಿಸುದಾಗಿ ಅಮೆರಿಕ ಬೆದರಿಕೆಯೊಡ್ಡಿತ್ತು.

click me!