(ವೈರಲ್ ಚೆಕ್) ದಟ್ಟ ಮಂಜಿನಲ್ಲಿ ರಾತ್ರಿಯಿಡೀ ಮಲಗುವ ಭಾರತೀಯ ಯೋಧರು..!

By Suvarna Web DeskFirst Published Dec 22, 2017, 12:39 PM IST
Highlights

ಇಬ್ಬರು ಯೋಧರು ಮಂಜಿನ ಮೇಲೆಯೇ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಇದರ ಬಗೆಗಿನ ಮಾಹಿತಿಯನ್ನು ಈ ಕೆಳಕಂಡಂತೆ ನೋಡಬಹುದಾಗಿದೆ.

ನವದೆಹಲಿ(ಡಿ.22): ಇಬ್ಬರು ಯೋಧರು ಮಂಜಿನ ಮೇಲೆಯೇ ಮಲಗಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋದಲ್ಲಿ ‘ಭಾರತೀಯ ಸೈನಿಕರು ಇಡೀ ರಾತ್ರಿ ದಟ್ಟ ಮಂಜಿನ ಮೇಲೆಯೇ ಮಲಗಿ ದೇಶಕ್ಕಾಗಿ ದುಡಿಯುತ್ತಿದ್ದಾರೆ. ನಮ್ಮ ಸೈನಿಕರ ಧೈರ್ಯ ನಿಜಕ್ಕೂ ಶ್ಲಾಘನೀಯ’ ಎಂಬ ಅಡಿಬರಹವನ್ನೂ ಬರೆಯಲಾಗಿದೆ.

ಹಾಗೆಯೇ ಪ್ರತಿಯೊಬ್ಬರೂ ಕೂಡ ಹೆಮ್ಮೆಯಿಂದ ಇದನ್ನು ಶೇರ್ ಮಾಡಿ ಎಂದೂ ಕೂಡ ಹೇಳಲಾಗಿದೆ. ಡಿಸೆಂಬರ್ 16ರ ವಿಜಯ ದಿವಸ್‌ನಿಂದ ಈ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಹಲವರು ಈ ಫೋಟೋವನ್ನು ಶೇರ್ ಮಾಡಿದ್ದಾರೆ.

Latest Videos

ಹಾಗಾದರೆ ನಿಜಕ್ಕೂ ಇದು ಭಾರತೀಯ ಯೋಧರ ಫೋಟೋವೇ ಎಂದು ಇದರ ಸತ್ಯಾಸತ್ಯತೆಯನ್ನು ತಿಳಿಯಲು ಹೊರಟಾಗ ಬಯಲಾದ ಸತ್ಯವೇ ಬೇರೆ. ಇದು ಭಾರತೀಯ ಯೋಧರ ಫೋಟೋವೇ ಅಲ್ಲ. ಈ ಫೋಟೋಗಳು 2012ರಿಂದಲೇ ಇಂಟರ್ ನೆಟ್‌ನಲ್ಲಿ ಹರಿದಾಡುತ್ತಿವೆ. ರಷ್ಯಾ ಮತ್ತು ಉರ್ಕೇನಿಯಾದ ನಡುವೆ ಯುದ್ಧ ನಡೆದ ಸಂದರ್ಭದಲ್ಲಿ ಅಲ್ಲಿನ ಯೋಧರು ಹಿಮದಲ್ಲಿ ತಂಗಿದ್ದರು. ಆಗಿನ ಪೋಟೋ 2014ರಲ್ಲೇ ವೈರಲ್ಆಗಿತ್ತು.

ಅಲ್ಲದೆ, ಪೋಸ್ಟ್ ಮಾಡಲಾಗಿರುವ ಎರಡನೇ ಫೋಟೋದ ಕೆಳಗೆ ರಷ್ಯಾ ಭಾಷೆಯಲ್ಲಿ ಬರೆಯಲಾಗಿದ್ದ ಅಡಿಬರಹವನ್ನು ಅನುವಾದಿಸಲಾಗಿದೆ. ಆದರೆ ಆ ಫೋಟೋವನು ಅಪ್‌ಲೋಡ್ ಮಾಡಿರುವ ಬ್ಲಾಗ್‌ನ್ನು ಅಳಿಸದೇ ಬಿಟ್ಟಿದ್ದರು. ಹೀಗಾಗಿ ಭಾರತೀಯ ಸೈನಿಕರು ಸಿಯಾಚಿನ್ ಪ್ರದೇಶದಲ್ಲಿ ರಾತ್ರಿ ಇಡೀ ಕಾಲಕಳೆಯುತ್ತಿದ್ದಾರೆ ಎಂದು ಪೋಸ್ಟ್ ಮಾಡಲಾಗಿದ್ದ ಈ ಫೋಟೋ ಭಾರತೀಯ ಸೈನಿಕರದ್ದಲ್ಲ ಎಂಬಂತಾಯಿತು.

click me!