
ನವದೆಹಲಿ: ಅಮೆರಿಕ ಸೇರಿದಂತೆ ಕೆಲವು ದೇಶಗಳಲ್ಲಿ ಇರುವ ರೀತಿ ಭಾರತದಲ್ಲೂ ವಿವಿಧ ಭಾಗಕ್ಕೆ ಪ್ರತ್ಯೇಕ ‘ಸಮಯ ವಲಯ' (ಟೈಮ್ ಜೋನ್) ನಿಗದಿಪಡಿಸುವ ಸಾಧ್ಯಾಸಾಧ್ಯತೆ ಪರಿಶೀಲಿಸುವ ನಿಟ್ಟಿನಲ್ಲಿ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಧ್ಯಯನ ಆರಂಭಿಸಿದೆ.
ಈಶಾನ್ಯ ರಾಜ್ಯಗಳಿಗೆ ಪ್ರತ್ಯೇಕ ಸಮಯ ವಲಯ ನಿಗದಿ ಮಾಡಬೇಕು ಎಂದು ಅರುಣಾಚಲಪ್ರದೇಶ ಮುಖ್ಯಮಂತ್ರಿ ಪೆಮಾ ಖಂಡು ಇತ್ತೀಚೆಗಷ್ಟೇ ಆಗ್ರಹಪಡಿಸಿದ್ದರು. ಇದರ ಬೆನ್ನಲ್ಲೇ ಅಧ್ಯಯನ ನಡೆಯುತ್ತಿರುವ ಕುರಿತು ಘೋಷಣೆಯಾಗಿದೆ. ವೈಜ್ಞಾನಿಕ ಮಾಹಿತಿ ಸಂಗ್ರಹಿಸುವ ಉದ್ದೇಶದಿಂದ ಈ ಅಧ್ಯಯನ ನಡೆಸಲಾಗುತ್ತಿದೆ ಎಂದು ಇಲಾಖೆಯ ಕಾರ್ಯದರ್ಶಿ ಆಶುತೋಷ್ ಶರ್ಮಾ ತಿಳಿಸಿದ್ದಾರೆ.
ಈಶಾನ್ಯ ರಾಜ್ಯಗಳು, ಅಂಡಮಾನ್- ನಿಕೋಬಾರ್‌ಗಳಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಬೇಗನೆ ಆಗುತ್ತದೆ. ದೇಶದ ಉಳಿದ ಭಾಗಗಳಲ್ಲಿ ಬೆಳಗ್ಗೆ 5.30ರಿಂದ 6ರ ವೇಳೆಗೆ ಸೂರ್ಯೋದಯವಾದರೆ, ಅರುಣಾಚಲಪ್ರದೇಶ, ಅಂಡಮಾನ್ ಮತ್ತಿತರೆಡೆ ಬೆಳಗ್ಗೆ 4.30ಕ್ಕೇ ಸೂರ್ಯೋದಯವಾಗುತ್ತದೆ. ಸಂಜೆ 5ರಿಂದ 6 ಗಂಟೆ ವೇಳೆಗೆ ಸೂರ್ಯಾಸ್ತವಾಗುತ್ತದೆ.
ಒಂದೇ ಸಮಯ ವಲಯ ಇರುವುದರಿಂದ ದೇಶದ ಎಲ್ಲೆಡೆ ಕಚೇರಿ ಅವಧಿ ಒಂದೇ ರೀತಿ ಇದೆ. ಆದರೆ ಬೇಗನೆ ಸೂರ್ಯೋದಯವಾಗುವುದರಿಂದ ಕಚೇರಿ ಸಮಯ ಆರಂಭವಾಗುವಷ್ಟರಲ್ಲಿ ಅರ್ಧದಿನ ಮುಗಿದು ಹೋಗಿರುತ್ತದೆ ಎಂಬುದು ಅರುಣಾಚಲಪ್ರದೇಶವನ್ನು ಒಳಗೊಂಡ ಈಶಾನ್ಯ ರಾಜ್ಯಗಳ ಅಳಲು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.