
ಕೋಲ್ಕತಾ: ವಿಐಪಿ ಸಂಸ್ಕೃತಿಗೆ ಮಂಗಳ ಹಾಡಲು ಸರ್ಕಾರಿ ವಾಹನಗಳಲ್ಲಿ ಕೆಂಪುದೀಪ ಬಳಕೆಯನ್ನು ಕೇಂದ್ರ ಸರ್ಕಾರ ನಿಷೇಧಿಸಿದ ಬೆನ್ನಲ್ಲೇ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಡ್ಡದಾರಿ ಹುಡುಕಿದ್ದಾರೆ.
ಐಎಎಸ್ ಅಧಿಕಾರಿಗಳು ಸಂಚರಿಸುವ ವಾಹನಗಳಿಗೆ ದೀಪ ಬದಲು ಮೂರು ಬಗೆಯ ಧ್ವಜಗಳನ್ನು ಅಳವಡಿಸಲು ನಿರ್ಧರಿಸಿದ್ದಾರೆ. ಈ ಮೂರೂ ಧ್ವಜಗಳು ಮಮತಾ ಅವರ ನೆಚ್ಚಿನ ನೀಲಿ ಬಣ್ಣದವಾಗಿದ್ದು, ಅದನ್ನು ಸ್ವತಃ ಮುಖ್ಯಮಂತ್ರಿಯೇ ವಿನ್ಯಾಸಗೊಳಿಸಿದ್ದಾರೆ.
ಕೇಂದ್ರ ಸರ್ಕಾರ ಸರ್ಕಾರಿ ವಾಹನಗಳ ಮೇಲೆ ಕೆಂಪು ದೀಪ ಬಳಸುವುದಕ್ಕೆ ನಿಷೇಧ ಹೇರಿದ ಬಳಿಕ ಮಮತಾ ಬ್ಯಾನರ್ಜಿ ಪರ್ಯಾಯ ದಾರಿ ಹುಡುಕುತ್ತಿದ್ದರು. ಅಧಿಕಾರಿಗಳು ಬಳಸುವ ಕಾರನ್ನು ಶಿಷ್ಟಾಚಾರ ಅಥವಾ ನಿಯಮಗಳನ್ನು ಉಲ್ಲಂಘಿಸದೇ ಗುರುತಿಸುವುದು ಹೇಗೆ ಎಂಬುದನ್ನು ಆಲೋಚಿಸುತ್ತಿದ್ದಾಗ ಅವರಿಗೆ ಧ್ವಜ ಹೊಳೆದಿದೆ.
ಹೀಗಾಗಿ ಮೂರು ಬಗೆಯ ಧ್ವಜಗಳನ್ನು ವಿನ್ಯಾಸಗೊಳಿಸಿದ್ದಾರೆ. ಧ್ವಜ ಬಳಕೆ ಸಂಬಂಧ ಬಂಗಾಳ ಸರ್ಕಾರ ಜೂ.20ರಂದು ಅಧಿಸೂಚನೆಯನ್ನೂ ಹೊರಡಿಸಿದೆ. ಬಂಗಾಳ ಕೇಡರ್‌ನ ಐಎಎಸ್ ಅಧಿಕಾರಿಗಳಿಗೆ ಎಷ್ಟು ಧ್ವಜಗಳು ಬೇಕಾಗುತ್ತವೆ ಎಂಬುದರ ಅಧ್ಯಯನ ನಡೆಯುತ್ತಿದೆ. ಆನಂತರ ಧ್ವಜ ತಯಾರಿಕೆ ಗುತ್ತಿಗೆ ನೀಡಲಾಗುತ್ತದೆ. ಜೂನ್ ಅಂತ್ಯದ ವೇಳೆಗೆ ಬಂಗಾಳದ ಅಧಿಕಾರಿಗಳ ವಾಹನಗಳ ಮೇಲೆ ಅವರ ಹುದ್ದೆ, ಶ್ರೇಣಿಗೆ ಅನುಗುಣವಾಗಿ ಧ್ವಜಗಳು ಹಾರಾಡಲಿವೆ ಎಂದು ಸಾರಿಗೆ ಸಚಿವ ಸುವೇಂದು ಅಧಿಕಾರಿ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.