ವಿಶ್ವಸಂಸ್ಥೆಗೆ ಬಂದು ಮತ್ತೆ  ಮೋದಿ ಭಾಷಣ ಕೇಳಿದ ಟ್ರಂಪ್!

By Web Desk  |  First Published Sep 24, 2019, 8:45 AM IST

ಹವಾಮಾನ ಸಂರಕ್ಷಣೆಗೆ ವಿಶ್ವವ್ಯಾಪಿ ಆಂದೋಲನ ಅಗತ್ಯ | ಹವಾಮಾನ ಬದಲಾವಣೆ ತಡೆಯಲು ಭಾರತದಿಂದ ಎಲ್ಲಾ  ಕ್ರಮ ಬಳಕೆ | ಪ್ಲಾಸ್ಟಿಕ್ ವಿರುದ್ಧ ದೇಶಾದ್ಯಂತ ಜನಾಂದೋಲನ ನಡೆಯುತ್ತಿದೆ 


ನ್ಯೂಯಾರ್ಕ್ (ಸೆ.24): ವಿಶ್ವದಾದ್ಯಂತ ಹವಾಮಾನ ಬದಲಾವಣೆಗೆ ವಿವಿಧ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಅವುಗಳನ್ನು ಮತ್ತಷ್ಟು ಬಲಪಡಿಸುವ ಅಗತ್ಯ ಇದೆ ಎಂದು ಪ್ರಧಾನಿ ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.

ಇಲ್ಲಿನ ವಿಶ್ವಸಂಸ್ಥೆಯ 74 ನೇ ಹವಾಮಾನ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ, ಪ್ರಕೃತಿಯ ಉಳಿಗಾಗಿ ಮಾತನಾಡುವ ಸಮಯ ಮುಗಿದಿದ್ದು, ಕೆಲಸ ಮಾಡುವ ಸಮಯ ಬಂದಿದೆ. ಅಗತ್ಯಗಳ ಬಗ್ಗೆ  ಗಮನ ಹರಿಸಬೇಕೆ ಹೊರೆತು ದುರಾಸೆಗಳ ಬಗ್ಗೆ ಅಲ್ಲ ಎಂದಿರುವ ಮೋದಿ, ಹವಮಾನ ಬದಲಾವಣೆ ಕುರಿತಾಗಿ ವಿಶ್ವವ್ಯಾಪಿ ಆಂದೋಲನ ನಡೆಸಬೇಕು ಎಂದು ವಿಶ್ವ ರಾಷ್ಟ್ರಗಳಿಗೆ ಕರೆ ಕೊಟ್ಟಿದ್ದಾರೆ.

Latest Videos

ಹೌಡಿ-ಮೋಡಿ..ಮೊದಲು ಈ ಪ್ರಶ್ನೆಗಳಿಗೆ ಉತ್ತರ ಕೊಡಿ, ಕರ್ನಾಟಕ ಕಾಂಗ್ರೆಸ್ ಕಿಡಿ

ಹವಮಾನ ಬದಲಾವಣೆಯಿಂದಾಗುವ ಸಮಸ್ಯೆಗಳನ್ನು ತಡೆಯಲು ಭಾರತ ಕೈಗೊಂಡ ನೀತಿಗಳನ್ನು ವಿವರಿಸಿದ ಪ್ರಧಾನಿ, ಭಾರತ ಈ ಬಗ್ಗೆ ಕೇವಲ ಮಾತುಕತೆ ಮಾತ್ರವಲ್ಲ ಸ್ಪಷ್ಟ ಗುರಿಯೊಂದಿಗೆ ಕೆಲಸ ಮಾಡುತ್ತಿದೆ. ಈ ವಿಚಾರದಲ್ಲ ಟನ್‌ಗಟ್ಟಲೆ ಮಾತನಾಡುವುದಕ್ಕಿಂತ ಒಂದು ಔನ್ಸ್‌ನಷ್ಟು ಕೆಲಸ ಮಾಡುವುದೇ ನಮ್ಮ ಧ್ಯೇಯ. ಇತ್ತೀಚಿನ ದಿನಗಳಲ್ಲಿ ನಾವು ಪಳೆಯುಳಿಕೆ ಇಂಧನ ಬಳಕೆಗೆ ಮಹತ್ವ ನೀಡುತ್ತಿದ್ದು, 2020 ರ ವೇಳೆಗೆ ನವೀಕರಿಸಬಹುದಾದ ಇಂಧನ ತಯಾರಿಕೆಲ್ಲಿ ನಮ್ಮ ಸಾಮರ್ಥ್ಯವನ್ನು 175 ಗಿಗಾ ವ್ಯಾಟ್‌ಗೆ ಹೆಚ್ಚಿಸಿಕೊಳ್ಳುತ್ತೇವೆ.

ಸಾರಿಗೆ ಕ್ಷೇತ್ರವನ್ನು ಪರಿಸರ ಸ್ನೇಹಿಯನ್ನಾಗಿಸಲು ನಾವು ಇ- ಮೊಬಿಲಿಟಿಗೆ ಪ್ರಾಮು ಖ್ಯತೆ ಕೊಡುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್‌ಗೆ ಬದಲಾಗಿ ಜೈವಿಕ ಇಂಧನ ಬಳಕೆ ಆರಂಭಿಸಲಾಗಿದೆ. ಸೌರಶಕ್ತಿ ಬಳಕೆ ವರ್ಧನೆಗೆ ೮೦ ದೇಶಗಳು ನಮ್ಮೊಂದಿಗೆ ಕೈ ಜೋಡಿಸಿದೆ. ಸ್ವಾತಂತ್ರ ದಿನಾಚರಣೆಯಂದು ಪ್ಲಾಸ್ಟಿಕ್ ಬಳಕೆ ವಿರುದ್ಧ ಜನಾಂದೋಲನ ಪ್ರಾರಂಭಿಸಿದ್ದು, ಇದರಿಂದ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಲಿದೆ ಎಂದರು.

ಭಾರತದ ಒಪ್ಪಿಗೆ ಇಲ್ಲದೆ ಕಾಶ್ಮೀರ ಮಧ್ಯಸ್ಥಿಕೆ ಇಲ್ಲ:  ಟ್ರಂಪ್

ನ್ಯೂಯಾರ್ಕ್: 370 ನೇ ವಿಧಿ ರದ್ದಾದ ಬಳಿಕ, ಕಾಶ್ಮೀರ ವಿಚಾರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಧ್ಯಸ್ಥಿಕೆ ವಹಿಸಬೇಕು ಎಂದು ಹಲವು ಬಾರಿ ಮನವಿ ಮಾಡಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್‌ಗೆ ಮತ್ತೆ ಮುಖಭಂಗವಾಗಿದೆ. ಈ ವಿಚಾರದಲ್ಲಿ ಭಾರತ ಒಪ್ಪಿದರೆ ಮಾತ್ರ ಮಧ್ಯಸ್ಥಿಕೆಗೆ ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ. ಸೋಮವಾರ ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಮತ್ತೆ ಟ್ರಂಪ್‌ರೊಂದಿಗೆ ಇಮ್ರಾನ್ ಈ ಮನವಿ ಮಾಡಿದ್ದಾರೆ. ಕಾಶ್ಮೀರ ಸಂಕೀರ್ಣ ವಿಚಾರವಾಗಿದ್ದು, ಮಧ್ಯಸ್ಥಿಕೆ ಮೂಲಕ ಸಹಾಯ ಮಾಡಲು ಸಿದ್ಧ ಎಂದು ಟ್ರಂಪ್ ಹೇಳಿದ್ದಾರೆ. 
Video: ಸೆನೆಟರ್ ಕಾರ್ನಿನ್ ಪತ್ನಿ ಬಳಿ ಕ್ಷಮೆ ಯಾಚಿಸಿದ ಮೋದಿ: ಕಾರಣವೇನು?

ವಿಶ್ವಸಂಸ್ಥೆಗೆ ಬಂದು ಮತ್ತೆ  ಮೋದಿ ಭಾಷಣ ಕೇಳಿದ ಟ್ರಂಪ್!

ಭಾನುವಾರ ಹೂಸ್ಟನ್‌ನಲ್ಲಿ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಮೋದಿ ಭಾಷಣಕ್ಕೆ ತಲೆದೂಗಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಸೋಮವಾರ ವಿಶ್ವಸಂಸ್ಥೆಗೂ ದಿಢೀರ್ ಭೇಟಿ ಕೊಟ್ಟು ಮೋದಿ ಭಾಷಣ ಆಲಿಸಿದರು. ಸೋಮವಾರ ವಿಶ್ವಸಂಸ್ಥೆಯಲ್ಲಿ ಹವಾಮಾನ ಬದಲಾವಣೆ ಕುರಿತ ಕಾರ್ಯಕ್ರಮದಲ್ಲಿ ಮೋದಿ ಸೇರಿದಂತೆ ಹಲವು ದೇಶಗಳ ನಾಯಕರು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗಿಯಾಗುವ ಪೂರ್ವನಿಗಧಿತ ಕಾರ್ಯಕ್ರಮ ಇರಲಿಲ್ಲ. ಆದರೆ ದಿಢೀರನೆ ಕಾರ್ಯಕ್ರಮ ಸ್ಥಳಕ್ಕೆ ಆಗಮಿಸಿದ ಟ್ರಂಪ್, ಮೋದಿ ಮತ್ತು ಜರ್ಮನಿ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರ ಭಾಷಣ ಆಲಿಸಿ ತೆರಳಿದರು.

 

click me!