ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತ

By Web DeskFirst Published Apr 19, 2019, 8:12 AM IST
Highlights

ಎಲ್‌ಒಸಿ ಬಳಿ ಪಾಕ್‌ ಜೊತೆ ವಹಿವಾಟು ಸ್ಥಗಿತಕ್ಕೆ ನಿರ್ಧಾರ| ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತು, ನಕಲಿ ನೋಟುಗಳ ಕಳ್ಳಸಾಗಣೆಗೆ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ನಿರ್ಧಾರ

ನವದೆಹಲಿ[ಏ.19]: ಜಮ್ಮು ಮತ್ತು ಕಾಶ್ಮೀರದಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನದೊಂದಿಗೆ ನಡೆಸುತ್ತಿದ್ದ ವಹಿವಾಟನ್ನು ಭಾರತ ಸರ್ಕಾರ ಸ್ಥಗಿತಗೊಳಿಸಿದೆ.

ಈ ಮಾರ್ಗವನ್ನು ಶತ್ರುದೇಶದ ಕೆಲ ವಿಧ್ವಂಸಕ ಶಕ್ತಿಗಳು, ಭಾರತಕ್ಕೆ ಶಸ್ತ್ರಾಸ್ತ್ರ ಕಳ್ಳಸಾಗಣೆ, ಮಾದಕ ವಸ್ತು, ನಕಲಿ ನೋಟುಗಳ ಕಳ್ಳಸಾಗಣೆಗೆ ಬಳಸುತ್ತಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಈ ಕಠಿಣ ಕ್ರಮ ಕೈಗೊಂಡಿದೆ.

ಇವುಗಳನ್ನು ತಡೆಯಲು ಸೂಕ್ತ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ಮತ್ತೆ ವಹಿವಾಟು ಪುನಾರಂಭದ ಬಗ್ಗೆ ನಿರ್ಧರಿಸಲಾಗುವುದು ಎಂದು ಸರ್ಕಾರ ಹೇಳಿದೆ. ವಾರದಲ್ಲಿ ನಾಲ್ಕು ದಿನ ಉಭಯ ದೇಶಗಳ ಗಡಿ ಪ್ರದೇಶದಲ್ಲಿ ಯಾವುದೇ ಸುಂಕ ಇಲ್ಲದೆಯೇ ವ್ಯಾಪಾರ ವಹಿವಾಟಿಗೆ ಉಭಯ ದೇಶಗಳು ಅವಕಾಶ ಕಲ್ಪಿಸಿವೆ.

click me!