ಡಿಆರ್'ಡಿಓದಿಂದ ಪೃಥ್ವಿ-2 ಯಶಸ್ವಿ ಉಡಾವಣೆ

By Suvarna Web DeskFirst Published Nov 21, 2016, 12:23 PM IST
Highlights

ಸುಮಾರು 500 ಕೆ.ಜಿ.ಯಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಳಿವೆ.

ಬಲಸೊರ್(ನ.21): ಭಾರತೀಯ ತಂತ್ರಜ್ಞಾನದ ಮೂಲಕ ಅಭಿವೃದ್ಧಿ ಪಡಿಸಲಾದ ಅಣ್ವಸ್ತ್ರ ಸಾಮರ್ಥ್ಯದ ಪೃಥ್ವಿ-2 ಕ್ಷಿಪಣಿ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಒಡಿಶಾದ ಚಂಡಿಪುರದ ಪರೀಕ್ಷಾ ವಲಯದಲ್ಲಿ ಸೇನೆ, ಒಂದರ ಹಿಂದೆ ಒಂದರಂತೆ ಎರಡು ಕ್ಷಿಪ್ರ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದೆ. ಇವು ಸುಮಾರು 350 ಕಿ.ಮೀ. ದೂರ ದಾಳಿ ನಡೆಸಬಲ್ಲ ಚಿಮ್ಮುವ ಕ್ಷಿಪಣಿಗಳಾಗಿವೆ. ಸುಮಾರು 500 ಕೆ.ಜಿ.ಯಿಂದ 1,000 ಕೆ.ಜಿ. ಸಿಡಿತಲೆಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಕ್ಷಿಪಣಿಗಳಿವೆ.

ಸಮಗ್ರ ಪರೀಕ್ಷಾ ವಲಯದ ಉಡಾವಣಾ ಸಂಕೀರ್ಣ-3ರಿಂದ ಸಂಚಾರಿ ಉಡಾವಕದಿಂದ ಉಡಾವಣೆ ನಡೆಸಲಾಗಿದೆ. ಇಂತಹುದೇ ಅವಳಿ ಪ್ರಯೋಗವನ್ನು ಇದೇ ಉಡಾವಣಾ ಕೇಂದ್ರದಿಂದ 2009 ಅ. 12ರಂದು ಯಶಸ್ವಿಯಾಗಿ ನಡೆಸಲಾಗಿತ್ತು. ರಕ್ಷಣಾ ಸಂಶೋಧನಾ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ನ ವಿಜ್ಞಾನಿಗಳ ಮಾರ್ಗದರ್ಶನದಲ್ಲಿ ವಿಶೇಷವಾಗಿ ರೂಪಿಸಲ್ಪಟ್ಟ ಸ್ಟ್ರಾಟಜಿಕ್ ಫೋರ್ಸ್ ಕಮಾಂಡ್ (ಎಸ್‌ಎಫ್'ಸಿ) ಉಡಾವಣಾ ಪ್ರಕ್ರಿಯೆಯ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿರ್ವಹಿಸಿತ್ತು.

click me!