
ಮುಂಬೈ (ಜೂ. 20): ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ)ಯ ಪ್ರತಿಕೂಲ ಪರಿಣಾಮಗಳ ಹೊರತಾಗಿಯೂ 2017 ನೇ ಸಾಲಿನಲ್ಲಿ ಭಾರತದಲ್ಲಿ ಮಿಲಿಯನೇಯರ್ (6.8 ಕೋಟಿ ರು.ಗೂ ಅಧಿಕ ಸಂಪತ್ತು ಉಳ್ಳವರು)ಗಳ ಸಂಖ್ಯೆ ಹಾಗೂ ಅವರ ಆಸ್ತಿ ಶೇ.20 ರಷ್ಟು ಏರಿಕೆಯಾಗಿದೆ.
ಜಾಗತಿಕ ಸರಾಸರಿಗಿಂತ ಇದು ಅತ್ಯಧಿಕವಾಗಿರುವ ಹಿನ್ನೆಲೆಯಲ್ಲಿ ಭಾರತದಲ್ಲಿ ಸಿರಿವಂತರ ಸಂಖ್ಯೆ ವಿಶ್ವದಲ್ಲೇ ಅತ್ಯಂತ ವೇಗವಾಗಿ ಏರುತ್ತಿದೆ ಎಂದು ಅಧ್ಯಯನ ವರದಿಯೊಂದು ಮಂಗಳವಾರ ತಿಳಿಸಿದೆ. 10 ಲಕ್ಷ ಅಮೆರಿಕನ್ ಡಾಲರ್ (ಅಂದರೆ, 6.8 ಕೋಟಿ ರು.) ಹೂಡಿಕೆ ಮಾಡುವಷ್ಟು ಆಸ್ತಿ ಹೊಂದಿರುವವರನ್ನು ಅಧಿಕ ಸಂಪತ್ತಿನ ವ್ಯಕ್ತಿಗಳು ಎಂದು ವ್ಯಾಖ್ಯಾನಿಸಲಾಗುತ್ತದೆ. ಅಂಥವರ ಸಂಖ್ಯೆ ಭಾರತದಲ್ಲಿ ಕಳೆದ ವರ್ಷ 2.63 ಲಕ್ಷದಷ್ಟು ಹೆಚ್ಚಾಗಿದೆ.
ಅಂದರೆ ಶೇ.20.4 ರಷ್ಟು ಏರಿಕೆಯಾಗಿದೆ. ಇದೇ ವೇಳೆ, ಅವರ ಸಂಪತ್ತು ಶೇ.21 ರಷ್ಟು ಹೆಚ್ಚಳ ಕಂಡು, 68 ಲಕ್ಷ ಕೋಟಿ ರು.ಗೆ ಜಿಗಿದಿದೆ ಎಂದು ಫ್ರಾನ್ಸ್‌ನ ಐಟಿ ಕಂಪನಿ ಕ್ಯಾಪ್‌ಜೆಮಿನಿ ಸಿದ್ಧಪಡಿಸಿರುವ ವರದಿ ತಿಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.