ನಾಳೆ ಯೋಧರಿಗೆ ಯೋಗ ಪಾಠ ಮಾಡಲಿದ್ದಾರೆ ಜಗ್ಗಿ ವಾಸುದೇವ್

First Published Jun 20, 2018, 12:28 PM IST
Highlights

ಜೂನ್  21 ರಂದು ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಸದ್ಗುರು ಜಗ್ಗಿ ವಾಸುದೇವ್ ಅವರು ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೆ ತೆರಳಿ ಅಲ್ಲಿನ ಯೋಧರಿಗೆ ಯೋಗದ ಪಾಠ ಹೇಳಿಕೊಡಲಿದ್ದಾರೆ. 

ಜಮ್ಮು (ಜೂ. 20):  ಜೂನ್ 21 ರಂದು ನಡೆಯುವ ಅಂತಾ ರಾಷ್ಟ್ರೀಯ ಯೋಗ ದಿನಾಚರಣೆ ವೇಳೆ ಸದ್ಗುರು ಜಗ್ಗಿ ವಾಸುದೇವ್ ಅವರು ಜಗತ್ತಿನ ಅತಿ ಎತ್ತರದ ಯುದ್ಧ ಭೂಮಿ ಸಿಯಾಚಿನ್‌ಗೆ ತೆರಳಿ ಅಲ್ಲಿನ ಯೋಧರಿಗೆ ಯೋಗದ ಪಾಠ ಹೇಳಿಕೊಡಲಿದ್ದಾರೆ.

ಸಮುದ್ರ ಮಟ್ಟದಿಂದ 21,000 ಅಡಿ  ಎತ್ತರದಲ್ಲಿರುವ ಸಿಯಾಚಿನ್‌ನ ವಿವಿಧೆಡೆ ಭಾರತ ೨೦೦ ಯೋಧರನ್ನು ನಿಯೋಜಿಸಿದೆ. ಅತ್ಯಂತ ಎತ್ತರದ ಪ್ರದೇಶದಲ್ಲಿ ಯೋಧರು ಎದುರಿಸುವ ಸಮಸ್ಯೆಗಳನ್ನು ನಿವಾರಿಸಿಕೊಳ್ಳುವ ಕುರಿತು ಸದ್ಗುರು ಸಿಯಾಚಿನ್ ಬೇಸ್  ಕ್ಯಾಂಪ್‌ನಲ್ಲಿ ವಿಶೇಷ ಪಾಠ ಮಾಡಲಿದ್ದಾರೆ. ಮಂಗಳವಾರ ಕೂಡಾ ಜಗ್ಗಿ ಅವರು ಲೇಹ್ ಬೇಸ್‌ಕ್ಯಾಂಪ್‌ನಲ್ಲಿ 350 ಕ್ಕೂ ಹೆಚ್ಚು ಯೋಧರ ಜೊತೆ ಸಂವಾದ ನಡೆಸಿದರು. 

click me!