
ನವದೆಹಲಿ[ಜೂ.16]: ಜಾಗತಿಕ ಮಟ್ಟದಲ್ಲಿ ತೆರಿಕೆ ಸಮರ ಶುರುವಾಗುವ ಲಕ್ಷಣಗಳು ಕಾಣಿಸುತ್ತಿವೆ.
ಅಮೆರಿಕಾಕ್ಕೆ ರಫ್ತಾಗುವ 30 ಉತ್ಪನ್ನಗಳ ಮೇಲೆ ಭಾರತವು ಸುಂಕ ವಿಧಿಸಲು ಮುಂದಾಗಿದೆ.ಈ ಹಿನ್ನಲೆಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಗೆ ಪರಿಸ್ಕೃತ ಮನವಿ ಸಲ್ಲಿಸಿದೆ. ಅಮೆರಿಕಾ ಕೂಡ ಭಾರತಕ್ಕೆ 241 ಮಿಲಿಯನ್ ಡಾಲರ್ ಮೊತ್ತದ ಆಮದು ಸುಂಕ ವಿಧಿಸಿತ್ತು. ಭಾರತ ವಿಧಿಸುವ ಮೊತ್ತವು ಅಷ್ಟೆ ಮೊತ್ತದ್ದಾಗಿರುತ್ತದೆ ಎಂದು ಹೇಳಲಾಗಿದೆ.
ಅಮೆರಿಕಾ ಸರ್ಕಾರದಿಂದ ಆಮದು ಮಾಡಿಕೊಳ್ಳುವ ಮೋಟರ್ ಸೈಕಲ್, ಉಕ್ಕು, ಬೋರಿಕ್ ಆಮ್ಲ,ಲೆಂಟಿಲ್ ಉತ್ಪನ್ನಗಳ ಶೇ.50 ರಷ್ಟು ರಫ್ತು ಸುಂಕವನ್ನು ಹೆಚ್ಚಿಸಲು ಉದ್ದೇಶಿಸಿದೆ. ಈ ಹಿನ್ನಲೆಯಲ್ಲಿ ವಿಶ್ವ ವ್ಯಾಪಾರ ಸಂಸ್ಥೆಯೊಂದಿಗೆ ಮಾತನಾಡಲು ಭಾರತವು ಸಿದ್ದವಾಗಿದೆ.
ಮೇ ಮೊದಲ ವಾರದಲ್ಲಿ ಅಮೆರಿಕಾದಿಂದ ರಪ್ತಾಗುವ ಬಾದಾಮಿ,ಆಪಲ್ ಸೇರಿದಂತೆ 20 ಉತ್ಪನ್ನಗಳ ಮೇಲೆ ಶೇ.10ರಿಂದ 100ರವರೆಗೆ ಆಮದು ಸುಂಕವನ್ನು ಹೆಚ್ಚಿಸಿತ್ತು. ಭಾರತವು ಸ್ಟೀಲ್ ಉತ್ಪನ್ನಗಳ ಮೇಲೆ ಹೆಚ್ಚು ಸುಂಕ ವಿಧಿಸಿರುವುದಕ್ಕೆ ಡೊನಾಲ್ಡ್ ಟ್ರಂಪ್ ಆಕ್ಷೇಪ ವ್ಯಕ್ತಪಡಿಸಿ ಇಲ್ಲಿಗೆ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಸುಂಕವನ್ನು ಏರಿಸಿದ್ದರು. ಈ ನಡುವೆ ಟ್ರಂಪ್ ಸರ್ಕಾರ ಚೀನಾದಿಂದ ಆಮದಾಗುವ ಉತ್ಪನ್ನಗಳ ಮೇಲೆ 50 ಬಿಲಿಯನ್ ಡಾಲರ್ ಸುಂಕ ವಿಧಿಸುವ ನಿರ್ಧಾರ ಕೈಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.