ಈದ್ ಹಬ್ಬದ ವೇಳೆ ಪಾಕ್ ಯುವಕರು ಒಳನುಸುಳಿದ್ದು ಯಾಕೆ?

Published : Jun 16, 2018, 03:59 PM ISTUpdated : Jun 16, 2018, 04:01 PM IST
ಈದ್ ಹಬ್ಬದ ವೇಳೆ ಪಾಕ್ ಯುವಕರು ಒಳನುಸುಳಿದ್ದು ಯಾಕೆ?

ಸಾರಾಂಶ

ಈದ್ ಹಬ್ಬದ ವೇಳೆಯಲ್ಲಿಯೇ ಭಾರತದೊಳಗೆ ನುಸುಳಿದ್ದ ಇಬ್ಬರು ಯುವಕರನ್ನು ಬಿ ಎಸ್ ಎಫ್ ಯೋಧರು ಬಂಧಿಸಿದ್ದಾರೆ. ಪಾಕ್ ಯುವಕರ ಬಂಧನವನ್ನು ಬಿಎಸ್ಎಫ್ ದೃಢಪಡಿಸಿದೆ.

ಶ್ರೀನಗರ [ಜೂನ್ 16]  ಈದ್ ಹಬ್ಬದ ವೇಳೆಯಲ್ಲಿಯೇ ಭಾರತದೊಳಗೆ ನುಸುಳಿದ್ದ ಇಬ್ಬರು ಯುವಕರನ್ನು ಬಿ ಎಸ್ ಎಫ್ ಯೋಧರು ಬಂಧಿಸಿದ್ದಾರೆ. ಪಾಕ್ ಯುವಕರ ಬಂಧನವನ್ನು ಬಿಎಸ್ಎಫ್ ದೃಢಪಡಿಸಿದೆ.

ಜಮ್ಮು ಮತ್ತು ಕಾಶ್ಮೀರದ  ನಾರ್ವಾಲ್‌‌ ಜಿಲ್ಲೆಯಲ್ಲಿ ಸೋಹಿಲ್‌ ಕುಮಾರ್‌ ಹಾಗೂ ಶೈಲ್ಕೊಟ್‌ ಪ್ರದೇಶದಲ್ಲಿ ಅಹಮ್ಮದ್‌ ಎಂಬುವವರನ್ನು ಬಂಧಿಸಲಾಗಿದೆ. ಸುದ್ದಿ ಸಂಸ್ಥೆಗಳಿಗೂ ಬಂಧಿತ ಯುವಕರ ಫೋಟೋ ಬಿಡುಗಡೆ ಮಾಡಲಾಗಿದೆ.

ದೀಪಾವಳಿ ಮತ್ತು ರಂಜಾನ್  ಹಬ್ಬಗಳ ಸಂದರ್ಭ ಭಾರತ ಮತ್ತು ಪಾಕಿಸ್ತಾನದ ಸೈನಿಕರು ಸಿಹಿ ವಿನಿಮಯ ಮಾಡಿಕೊಳ್ಳುವುದು ಸಾಮಾನ್ಯ ಪದ್ಧತಿ. ಕದನ ವಿರಾಮ ಉಲ್ಲಂಘನೆ ಹಿನ್ನೆಲೆಯಲ್ಲಿ ಈ ಸಾರಿ ಪಾಕಿಸ್ತಾನ ಸೈನಿಕರು ನೀಡಿದ ಸಿಹಿಯನ್ನು ಭಾರತೀಯ ಯೋಧರು ಸ್ವೀಕರಿಸಿರಲಿಲ್ಲ. ಇದೀಗ ಇಬ್ಬರು ಯುವಕರನ್ನು ವಶಕ್ಕೆ ಪಡೆದಿರುವ ಸೇನೆಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಹಾಸನದ ತಿರುಪತಿಹಳ್ಳಿ ಬೆಟ್ಟದ ಮೇಲೆ 50ಕ್ಕೂ ಅಧಿಕ ಉಲ್ಕೆಗಳ ಸುರಿಮಳೆ!
India Latest News Live: ಪಹಲ್ಗಾಂ ಉಗ್ರ ದಾಳಿ: ಕೋರ್ಟ್‌ಗೆ 1597 ಪುಟಗಳ ಚಾರ್ಜ್‌ಶೀಟ್‌ ಸಲ್ಲಿಕೆ