ಕರ್ತಾರ್'ಪುರ್ ಸಮಿತಿಯಲ್ಲಿ ಖಲಿಸ್ತಾನಿಗಳು: ಸಭೆ ಮುಂದೂಡಿದ ಭಾರತ!

Published : Mar 29, 2019, 04:50 PM IST
ಕರ್ತಾರ್'ಪುರ್ ಸಮಿತಿಯಲ್ಲಿ ಖಲಿಸ್ತಾನಿಗಳು: ಸಭೆ ಮುಂದೂಡಿದ ಭಾರತ!

ಸಾರಾಂಶ

ಕರ್ತಾರ್'ಪುರ್ ಹೆಸರಲ್ಲಿ ಪ್ರತ್ಯೇಕತಾವಾದಿಗಳಿಗೆ ಕುಮ್ಮಕ್ಕು ನೀಡುತ್ತಿರುವ ಪಾಕ್| ಕರ್ತಾರ್'ಪುರ್ ಕಾರಿಡಾರ್ ಸಮಿತಿಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳು| ಪಾಕ್ ಹುನ್ನಾರವನ್ನು ತೀವ್ರವಾಗಿ ವಿರೋಧಿಸಿದ ಭಾರತ| ಕರ್ತಾರ್'ಪುರ್ ಕಾರಿಡಾರ್ ಸಭೆ ಮುಂದೂಡಿದ ಭಾರತ| ಭಾರತ ವಿರೋಧ ಅರ್ಥವಾಗುತ್ತಿಲ್ಲ ಎಂದ ಪಾಕಿಸ್ತಾನ|

ನವದೆಹಲಿ(ಮಾ.29): ಮಹತ್ವದ ಬೆಳವಣಿಗೆಯೊಂದರಲ್ಲಿ ಕರ್ತಾರ್'ಪುರ್ ಕಾರಿಡಾರ್ ಸಮಿತಿಯಲ್ಲಿ, ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿರುವ ಪಾಕಿಸ್ತಾನದ ನಡೆಗೆ ಭಾರತ ತೀವ್ರ ಅಸಮಾಧಾನ ಹೊರಹಾಕಿದೆ. 

ಕರ್ತಾರ್'ಪುರ್ ಕಾರಿಡಾರ್ ಗೆ ಸಂಬಂಧಪಟ್ಟ ಸಮಿತಿಯಲ್ಲಿ ಪಾಕಿಸ್ತಾನ ಸಚಿವ ಸಂಪುಟ 10 ಸದಸ್ಯರನ್ನೊಳಗೊಂಡ, ಪಾಕಿಸ್ತಾನ ಸಿಖ್ ಗುರುದ್ವಾರ ಪ್ರಬಂಧಕ್ ಸಮಿತಿಯನ್ನು ರಚಿಸಿತ್ತು. ಈ ಸಮಿತಿಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೂ ಸ್ಥಾನ ನೀಡಿದೆ.

ಪಾಕಿಸ್ತಾನದ ಉಪ ಹೈಕಮಿಷನರ್ ಸಯೀದ್ ಹೈದರ್ ಶಾ ಜೊತೆಗೆ ಮಾತನಾಡಿರುವ ಭಾರತ, ಸಮಿತಿಯಲ್ಲಿ ಖಲಿಸ್ತಾನ್ ಪ್ರತ್ಯೇಕತಾವಾದಿಗಳಿಗೆ ಸ್ಥಾನ ನೀಡಿದ್ದಕ್ಕೆ ಅಸಮಾಧಾನ ಹೊರಹಾಕಿದೆ.

ಇನ್ನು ಭಾರತದ ವಿರೋಧವನ್ನು ತಳ್ಳಿ ಹಾಕಿರುವ ಪಾಕಿಸ್ತಾನ, ಭಾರತ ಈ ವಿಷಯದಲ್ಲಿ ಏಕೆ ವಿರೋಧಿಸುತ್ತಿದೆ ಎಂಬುದೇ ಅರ್ಥವಾಗುತ್ತಿಲ್ಲ ಎಂದು ಪ್ರತಿಕ್ರಿಯೆ ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಾಬ್ರಿ ಮಸೀದಿಗೆ ಅಡಿಗಲ್ಲು ವಿವಾದ ಬೆನ್ನಲ್ಲೇ ಬಂಗಾಳದಲ್ಲಿ 5 ಲಕ್ಷ ಹಿಂದೂಗಳಿಂದ ಭಗವದ್ಗೀತೆ ಪಠಣ
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ