ಭೀಕರ ಬಸ್ ಅಪಘಾತ : ಸ್ಥಳದಲ್ಲೇ 8 ಸಾವು

By Web DeskFirst Published Mar 29, 2019, 3:33 PM IST
Highlights

ಭೀಕರ ಬಸ್ ಅಪಘಾತದಲ್ಲಿ 8 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದು, 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. 

ನವದೆಹಲಿ : ಭೀಕರ ಬಸ್ ಅಪಘಾತದಲ್ಲಿ  8 ಮಂದಿ ದುರ್ಮರಣವನ್ನಪ್ಪಿದ್ದಾರೆ.

ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾ ಬಳಿಯ ಯಮುನಾ ಎಕ್ಸ್ ಪ್ರೆಸ್ ವೇ ನಲ್ಲಿ ಅಪಘಾತ  ಸಂಭವಿಸಿದೆ. ಅಪಘಾತದಲ್ಲಿ 30ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

 

Visuals: 8 dead and 30 injured after a bus rammed into a truck on Yamuna Expressway in Greater Noida. pic.twitter.com/sTxNeNhowI

— ANI UP (@ANINewsUP)

ಬಸ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದು, ವೇಗವಾಗಿ ಬರುತ್ತಿದ್ದ ಟ್ರಕ್ ಗೆ ಬಸ್ ಡಿಕ್ಕಿ ಹೊಡೆದು ಈ ಅವಘಡವಾಗಿದೆ. 

ಗಾಯಾಳುಗಳಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದ್ದು, ಸ್ಥಳೀಯ  ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

ಕಳೆದ ತಿಂಗಳೂ ಇದೇ ಸ್ಥಳದಲ್ಲಿ ಕಾರು ಹಾಗೂ ಆ್ಯಂಬುಲೆನ್ಸ್ ಅಪಘಾತ ಸಂಭವಿಸಿ 7  ಮಂದಿ ಮೃತಪಟ್ಟಿದ್ದರು. 

click me!