
ವಾಶಿಂಗ್ಟನ್: ಜ್ಹೇಲಮ್ ಹಾಗೂ ಚೀನಾಬ್ ಉಪನದಿಗಳ ಮೇಲೆ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಭಾರತಕ್ಕೆ ವಿಶ್ವಬ್ಯಾಂಕ್ ಅನುಮತಿ ನೀಡಿದೆ. ಆದರೆ 1960 ಇಂಡಸ್ ನೀರು ಒಪ್ಪಂದ-1960 (IWT) ಯನ್ವಯ ಕೆಲವು ಶರತ್ತುಗಳನ್ನು ಭಾರತವು ಪಾಲಿಸಬೇಕೆಂದು ವಿಶ್ವ ಬ್ಯಾಂಕ್ ಹೇಳಿದೆ.
ಓಪ್ಪಂದದ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನದ ಕಾರ್ಯದರ್ಶಿಗಳ ಮಟ್ಟದ ಸಭೆಯ ಬಳಿಕ ವಿಶ್ವಸಂಸ್ಥೆಯು ಇದನ್ನು ಘೋಷಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಜ್ಹೇಲಮ್ ಹಾಗೂ ಚೀನಾಬ್ ಉಪನದಿಗಳ ಮೇಲೆ ಭಾರತವು ಕಿಶನ್’ಗಂಗಾ (330 ಮೆ.ವ್ಯಾ) ಹಾಗೂ ರ್ಯಾಟಲ್ (850 ಮೆ.ವ್ಯಾ) ಸಾಮರ್ಥ್ಯದ ಜಲವಿದ್ಯುತ್ ಯೋಜನೆಗಳನ್ನು ನಿರ್ಮಿಸಲು ಮುಂದಾಗಿದ್ದು, ಪಾಕಿಸ್ತಾನವು ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದೆ.
ಪರಸ್ಪರ ಸಹಕಾರ ಸ್ಫೂರ್ತಿಯೊಂದಿಗೆ ಬೇರೆ ಬೇರೆ ವಿಚಾರಗಳ ಬಗ್ಗೆ ಮಾತುಕತೆ ನಡೆದಿದೆ. ಮುಂಬರುವ ಸಪ್ಟೆಂಬರ್ ತಿಂಗಳಿನಲ್ಲಿ ಈ ವಿಚಾರವಾಗಿ ಮತ್ತೊಮ್ಮೆ ಸಭೆ ನಡೆಯುವುದು ಎಂದು ವಿಶ್ವ ಬ್ಯಾಂಕ್ ಈ ಸಂದರ್ಭದಲ್ಲಿ ಹೇಳಿದೆ.
ಯೋಜನೆಗಳ ಬಗ್ಗೆ ಪಾಕಿಸ್ತಾನಕ್ಕಿರುವ ಆಕ್ಷೇಪಗಳ ಹಿನ್ನಲೆಯಲ್ಲಿ ತಟಸ್ಥ ತಜ್ಞರನ್ನು ನೇಮಿಸುವಂತೆ ಭಾರತವು ಮನವಿ ಮಾಡಿತ್ತು. ಯೋಜನೆಗಳ ತಾಂತ್ರಿಕ ವಿನ್ಯಾಸದ ಬಗ್ಗೆಗಿರುವ ಭಿನ್ನಾಭಿಪ್ರಾಯಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ನ್ಯಾಯಮಂಡಳಿಯನ್ನು ರಚಿಸಲು ಸಹಕರಿಸುವಂತೆ ವಿಶ್ವ ಬ್ಯಾಂಕ್ ಪಾಕಿಸ್ತಾನಕ್ಕೆ ಸೂಚಿಸಿದೆ.
ವಿಶ್ವಬ್ಯಾಂಕ್ ನೆರವಿನೊಂದಿಗೆ 9 ವರ್ಷಗಳ ಸತತ ಚರ್ಚೆಗಳ ಬಳಿಕ 1960ರಲ್ಲಿ ಭಾರತ ಹಾಗೂ ಪಾಕಿಸ್ತಾನಗಳು ಇಂಡಸ್ ನೀರು ಒಪ್ಪಂದಕ್ಕೆ ಸಹಿ ಹಾಕಿದ್ದವು.
(ಸಾಂದರ್ಭಿಕ ಚಿತ್ರ)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.