
ನವದೆಹಲಿ: ಅತಿ ಹೆಚ್ಚು ಪ್ರಮಾಣದಲ್ಲಿ ಕಡುಬಡವರನ್ನು ಹೊಂದಿದ ದೇಶಗಳ ಪೈಕಿ ಅಗ್ರಸ್ಥಾನದಲ್ಲಿದ್ದ ಭಾರತ, ಕೊನೆಗೂ ಈ ಕಳಂಕವನ್ನು ಕಳಚಿಕೊಂಡಿದೆ. 2018ರಲ್ಲೇ ಭಾರತ ಈ ಕಳಂಕ ತಪ್ಪಿಸಿಕೊಂಡಿದ್ದು, ಅದೀಗ ನೈಜೀರಿಯಾದ ಪಾಲಾಗಿದೆ ಎಂದು ವರದಿಯೊಂದು ಹೇಳಿದೆ.
ಹೋಮಿ ಖರಸ್, ಕ್ರಿಸ್ಟೋಫರ್ ಹಾಮೆಲ್ ಮತ್ತು ಮಾರ್ಟಿನ್ ಹೋಫರ್ ರಚಿಸಿ, ಅಮೆರಿಕದ ಚಿಂತಕರ ಚಾವಡಿ ಬ್ರೂಕಿಂಗ್ಸ್ ಬಿಡುಗಡೆ ಮಾಡಿರುವ ವರದಿ ಅನ್ವಯ, 2018ರ ಮೇ ತಿಂಗಳಲ್ಲಿ ನೈಜೀರಿಯಾ 8.7 ಕೋಟಿ ಕಡುಬಡವರನ್ನು ಹೊಂದುವ ಮೂಲಕ ಅಗ್ರಸ್ಥಾನಕ್ಕೆ ಏರಿದೆ. 7.3 ಕೋಟಿ ಕಡುಬಡವರೊಂದಿಗೆ ಭಾರತ 2ನೇ ಸ್ಥಾನದಲ್ಲಿದೆ. ಈ ವರ್ಷಾಂತ್ಯದಲ್ಲಿ ಕಾಂಗೋ ದೇಶ 2ನೇ ಸ್ಥಾನಕ್ಕೆ ಏರಲಿದ್ದು ಭಾರತ 3ನೇ ಸ್ಥಾನ ತಲುಪುವ ಮೂಲಕ ಗಣನೀಯ ಸಾಧನೆ ಮಾಡಲಿದೆ.
ಭಾರತದ ಕಡುಬಡತನ ಇಳಿಕೆ ಪ್ರಮಾಣ ವಿಶ್ವದಲ್ಲೇ ಅತ್ಯಂತ ವೇಗವಾಗಿದ್ದು, ಪ್ರತಿ ನಿಮಿಷಕ್ಕೆ 42 ಜನ ಈ ರೇಖೆಯಿಂದ ಹೊರಬರುತ್ತಿದ್ದಾರೆ. ಇದೇ ಗತಿಯಲ್ಲಿ ಸಾಗಿದರೆ 2030ರ ವೇಳೆಗೆ ಕಡುಬಡವರನ್ನು ಹೊಂದಿದ ದೇಶಗಳ ಪಟ್ಟಿಯಿಂದ ಭಾರತ ಹೊರಬಲಿದೆ ಎಂದು ವರದಿ ಹೇಳಿದೆ.
ಕಡುಬಡವರೆಂದರೆ ಯಾರು?: ದಿನಕ್ಕೆ 1.9 ಡಾಲರ್ (130 ರು.)ಗಿಂತ ಕಡಿಮೆ ಆದಾಯ ಹೊಂದಿರುವವರನ್ನು ಕಡುಬಡವರು ಎಂದು ಲೆಕ್ಕಹಾಕಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.