ಗಿನ್ನೆಸ್ಗೆ ಸೇರಿದ ರಾಷ್ಟ್ರಗೀತೆ

By Suvarna Web DeskFirst Published Jan 22, 2017, 5:33 AM IST
Highlights

. ಗುಜರಾತ್ರಾಜ್ಕೋಟ್ಜಿಲ್ಲೆಯಕಾಗ್ವಾದ್ಎಂಬಲ್ಲಿನೂತನವಾಗಿನಿರ್ಮಿಸಲಾದಖೋದಲ್ಧಾಮ್ಮಂದಿರದಲ್ಲಿವಿಗ್ರಹಪ್ರತಿಷ್ಠಾಪನೆಕಾರ್ಯಕ್ರಮವನ್ನುಶನಿವಾರಹಮ್ಮಿಕೊಳ್ಳಲಾಗಿತ್ತು

ರಾಜ್ಕೋಟ್‌(ಜ.22): ಗುಜರಾತ್‌ನಲ್ಲಿ ಶನಿವಾರ ಒಮ್ಮೆ ಗೆ 3.5 ಲಕ್ಷ ಮಂದಿ ರಾಷ್ಟ್ರಗೀತೆ ಹಾಡುವ ಮೂಲಕ ನೂತನ ವಿಶ್ವದಾಖಲೆ ಸ್ಥಾಪಿಸಿದ್ದಾರೆ. 2014ರಲ್ಲಿ ಬಾಂಗ್ಲಾದಲ್ಲಿ 2.5 ಲಕ್ಷ ಮಂದಿ ರಾಷ್ಟ್ರಗೀತೆ ಹಾಡಿದ ದಾಖಲೆ ಭಗ್ನಗೊಂಡಿದೆ.

ಗುಜರಾತ್‌ನಲ್ಲಿ ಶನಿವಾರ ಒಮ್ಮೆಗೆ 3.5 ಲಕ್ಷ ಮಂದಿ ರಾಷ್ಟ್ರಗೀತೆ ಹಾಡುವ ಮೂಲಕ ನೂತನ ವಿಶ್ವದಾಖಲೆ ಸ್ಥಾಪಿಸಿದ್ದಾರೆ. ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯ ಕಾಗ್ವಾದ್‌ ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಖೋದಲ್‌ ಧಾಮ್‌ ಮಂದಿರದಲ್ಲಿ ವಿಗ್ರಹ ಪ್ರತಿಷ್ಠಾಪನೆ ಕಾರ್ಯಕ್ರಮ ವನ್ನು ಶನಿವಾರ ಹಮ್ಮಿಕೊಳ್ಳಲಾಗಿತ್ತು. ‘ದೇವತೆ ಮೂರ್ತಿಯ ಪ್ರತಿಷ್ಠಾಪನೆ ವೇಳೆ ಗಿನ್ನಿಸ್‌ ವಿಶ್ವ ದಾಖಲೆಯ ವೀಕ್ಷಕರ ಸಮ್ಮುಖದಲ್ಲಿ 3.5 ಲಕ್ಷ ಮಂದಿ ರಾಷ್ಟ್ರಗೀತೆ ಹಾಡಿದ್ದಾರೆ' ಎಂದು ಖೋದಲ್‌ ಧಾಮ್‌ ದೇವಾಲಯದ ಟ್ರಸ್ಟ್‌ ಸದಸ್ಯರೊಬ್ಬರು ತಿಳಿಸಿದ್ದಾರೆ. 2014ರಲ್ಲಿ ಬಾಂಗ್ಲಾದೇಶ ರಾಷ್ಟ್ರಗೀತೆ ಯನ್ನು 2,54,537 ಮಂದಿ ಹಾಡಿದ್ದು, ಈವರೆಗಿನ ವಿಶ್ವದಾಖಲೆಯನ್ನು ಭಾರತದ ರಾಷ್ಟ್ರಗೀತೆ ಮುರಿದಿದೆ ಎಂದು ಟ್ರಸ್ಟ್‌ ಸದಸ್ಯರು ಹೇಳಿದ್ದಾರೆ.

click me!