
ರಾಜಕಾರಣದಲ್ಲಿ ಎಷ್ಟೋ ನಾಯಕರು ಮೋದಿಗೆ ಜೈ, ಸೋನಿಯಾಗೆ ಜೈ, ರಾಹುಲ್‌ಗೆ ಜೈ ಎಂದರೂ ಕೂಡ ಅಂತಿಮವಾಗಿ ವೈಯಕ್ತಿಕವಾಗಿ ಏನು ಸಿಗುತ್ತದೆ ಎನ್ನುವುದೇ ಎಲ್ಲದಕ್ಕೂ ಮಾನದಂಡ. ಈಗ ರಾಹುಲ್ ಹೆಸರಿಗೆ ಅಹ್ಮದ್ ಪಟೇಲ್, ಆ್ಯಂಟನಿ, ಜನಾರ್ದನ್ ದ್ವಿವೇದಿ, ಆಸ್ಕರ್ ಫರ್ನಾಂಡಿಸ್ ತರಹದ ನಾಯಕರು ಒಳಗಿಂದ ಒಳಗೆ ಬೇಸರ ವ್ಯಕ್ತಪಡಿಸುವುದಕ್ಕೂ ಮುಖ್ಯ ಕಾರಣವಿದೆ.
19 ವರ್ಷ ಸೋನಿಯಾ ಅಧ್ಯಕ್ಷರಾಗಿದ್ದಾಗ ಪಕ್ಷವನ್ನು ನಡೆಸಿದ್ದೇ ಅಹ್ಮದ್ ಪಟೇಲ್, ಆಸ್ಕರ್ ಫರ್ನಾಂಡಿಸ್ ತರಹದ ನಾಯಕರು. ಆದರೆ ಯುವಕರಾಗಿರುವ ರಾಹುಲ್‌ಗೆ ತಾಯಿಯ ಸಲಹಾ ಮಂಡಳಿ ಮೇಲೆ ಎಳ್ಳಷ್ಟೂ ವಿಶ್ವಾಸವಿಲ್ಲ. ಹೀಗಾಗಿ ಸೋನಿಯಾರನ್ನು ಸುತ್ತುವರೆದ ನಾಯಕರಿಗೆ ಎಲ್ಲಿ ರಾಹುಲ್ ತಮ್ಮನ್ನೆಲ್ಲ ಮಾರ್ಗದರ್ಶಕ ಮಂಡಳಿ ಎಂದು ಪಕ್ಕಕ್ಕೆ ಕೂಡಿಸುತ್ತಾರೇನೋ ಎಂಬ ಭಯವಿದೆ. ಹೀಗಾಗಿ ಹಿರಿಯರು ಏನೇನೊ ಕಾರಣ ಹೇಳಿ ತಾಯಿಯನ್ನು ರಾಹುಲ್‌ಗೆ ಪಟ್ಟ ಕಟ್ಟಲು ಸೂಕ್ತ ಸಮಯವಲ್ಲ ಎಂದು ಒಪ್ಪಿಸಿ ದಿನ ದೂಡುತ್ತಿದ್ದರಾದರೂ ಈ ಬಾರಿ ಆಟ ನಡೆದಂತೆ ಕಾಣುತ್ತಿಲ್ಲ.
ಇಂಡಿಯಾ ಗೇಟ್’ನಲ್ಲಿ ಪ್ರಶಾಂತ್ ನಾತು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.